ಚಾಮರಾಜನಗರ: ಜಿಲ್ಲಾಧಿಕಾರಿ ಶ್ರೀರೂಪ ಅವರು ಇಂದು ಚಾಮರಾಜನಗರ ತಾಲೂಕಿನ ಅಮೃತ ಭೂಮಿಯಲ್ಲಿ ಇರುವ ಪ್ರೊ. ನಂಜುಂಡಸ್ವಾಮಿ ಅವರ ಸ್ಮಾರಕಕ್ಕೆ ಭೇಟಿ ನೀಡಿ, ಸಾವಯವ ಮತ್ತು ಸಹಜ ಕೃಷಿ ಚಟುವಟಿಕೆಗಳನ್ನು ಪರಿಶೀಲಿಸಿದರು.
ಸ್ಥಳೀಯ ಸಂಪನ್ಮೂಲಾಧಾರಿತ ರಾಸಾಯನಿಕ ಮುಕ್ತ ಬೇಸಾಯ, ಮಣ್ಣಿನ ಆರೋಗ್ಯ, ಬೀಜ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಕೃಷಿ ವಿಧಾನಗಳಿಗೆ ಒತ್ತು ನೀಡಿರುವ ಬಗ್ಗೆ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ, ಸ್ಥಳೀಯವಾಗಿ ಉತ್ಪಾದನೆಯಾಗುವ ಸಾವಯವ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಸ್ಥಾಪಿಸಿರುವ ಆಹಾರ ಸಂಸ್ಕರಣ ಘಟಕ ವನ್ನು (Food Processing Unit) ಜಿಲ್ಲಾಧಿಕಾರಿಗಳಾದ ಶ್ರೀರೂಪ ಅವರು ವೀಕ್ಷಿಸಿದರು.
ವಿವಿಧ ತೋಟಗಳಲ್ಲಿ ಬೆಳೆಯುತ್ತಿರುವ ತರಕಾರಿ ಹಾಗೂ ಹಸಿರು ಸೊಪ್ಪಿನ ಗುಣಮಟ್ಟವನ್ನು ಪರಿಶೀಲಿಸಿದರು.
ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಅವರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದರು.