ಮಹರ್ಷಿ ವಾಲ್ಮೀಕಿ ಕಪ್ ಗೆದ್ದು ಬೀಗಿದ ಆತಿಥೇಯ ರಾಮಸಮುದ್ರ ಸುಬೇದಾರ್ ಟೈಗರ್ಸ್ ಕ್ರಿಕೆಟ್ ತಂಡ

ಚಾಮರಾಜನಗರ : ಆತಿಥೇಯ ರಾಮಸಮುದ್ರ ಸುಬೇದಾರ್ ಟೈಗರ್ಸ್ ಕ್ರಿಕೆಟ್ ತಂಡದವರು ಶ್ರೀಮಹರ್ಷಿ ವಾಲ್ಮೀಕಿ ಕಪ್ ಮುಡಿಗೇರಿಸಿಕೊಂಡು ಬೀಗಿ ಸಂಭ್ರಮಿಸಿತು.
ನಗರದ ರಾಮಸಮುದ್ರದ ದೀನಬಂಧು ಶಾಲೆಯ ಸಮೀಪದ ಮೈದಾನದಲ್ಲಿ ರಾಮಸಮುದ್ರ ಸುಬೇದಾರ್ ಟೈಗರ್ಸ್ ಕ್ರಿಕೆಟ್ ತಂಡದ ವತಿಯಿಂದ ಮೂರು ದಿನಗಳ ಕಾಲ ಅಯೋಜಿಸಿದ ಶ್ರೀಮಹರ್ಷಿ ವಾಲ್ಮೀಕಿ ಕಪ್ 2ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಲ್ಲಿ ಆತಿಥೇಯ ರಾಮಸಮುದ್ರ ಸುಬೇದಾರ್ ಟ್ರೈಗರ್ಸ್ ಕ್ರಿಕೆಟ್ ತಂಡ ಪ್ರಥಮ ಸ್ಥಾನ ಪಡೆದುಕೊಂಡದ್ದು, ಅತಿಥಿ ಹುರುಳಿನಂಜಪುರ ಧರ್ಮ ಕ್ರಿಕೆಟ್ ತಂಡ ದ್ವಿತೀಯ ಸ್ಥಾನಕ್ಕೆ ಪಡೆದುಕೊಂಡಿದೆ.
ಮೈದಾನದಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಟ್ರೋಫಿ, ಬಹುಮಾನ ವಿತರಿಸಿ ಮಾತನಾಡಿ, ಆತಿಥೇಯ ರಾಮಸಮುದ್ರ ಸುಬೇದಾರ್ ಟೈಗರ್ಸ್ ಕ್ರಿಕೆಟ್ ತಂಡ, ಅತಿಥಿ ಹುರುಳಿನಂಜಪುರ ಧರ್ಮ ಕ್ರಿಕೆಟ್ ತಂಡ ಉತ್ತಮ ಪ್ರದರ್ಶನ ನೀಡಿವೆ.ಕ್ರಿಕೆಟ್ ಆಟಗಾರರು ಸೋಲು-ಗೆಲುವು ಎರಡನ್ನು ಸಮವಾಗಿ ಸ್ವೀಕರಿಸಬೇಕು. ಸೋತವರು ಉತ್ತಮ ಅಭ್ಯಾಸದಲ್ಲಿ ತೊಡಗಬೇಕು. ಗೆದ್ದವರು ಕೂಡ ಇನ್ನೂ ಉತ್ತಮ ರೀತಿಯಲ್ಲಿ ಆಟ ಆಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ರೀಡೆಯಲ್ಲಿ ಯಾವುದೇ ಜಾತಿ, ಧರ್ಮ ಇಲ್ಲ. ತಾವೆಲ್ಲರೂ ಸಹೋದರ ಮನೋಭಾವದಿಂದ ಕ್ರೀಡೆಯನ್ನು ಸ್ವೀಕರಿಸಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು. ಇದ್ದೆಇರುತ್ತದೆ. ನಾವೆಲ್ಲರೂ ಶ್ರೀಮಹರ್ಷಿ ವಾಲ್ಮೀಕಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧರು, ಬಸವೇಶ್ವರ ಸೇರಿದಂತೆ ಅನೇಕ ಮಹನೀಯರ ತುಂಬಾ ಕಷ್ಟದಿಂದ ಬೆಳೆದು ಬಂದು ದೇಶಕ್ಕೆ ಕೊಡುಗೆ ಕೊಟ್ಟಿದ್ದಾರೆ. ಕ್ರೀಡೆಯಿಂದ ದೈಹಿಕ, ಮಾನಸಿಕವಾಗಿ ಶಕ್ತಿವಂತರಾಗಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್, ಮಾಜಿ ಸದಸ್ಯ ಶಿವರಾಜ್, ಬಿಜೆಪಿ ಎಸ್‌ಟಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬುಲೆಟ್‌ಚಂದ್ರು, ತಾಲೂಕು ಸರ್ವೇಯರ್ ರಮೇಶ್, ಮುಖಂಡರಾದ ಬದನಗುಪ್ಪೆ ಶಿವರಾಮ್, ರವಿ, ನಟರಾಜು, ಸೋಮು, ರವಿ, ಅಯೋಜಕರಾದ ಪ್ರಜ್ವಲ್, ರಂಗಸ್ವಾಮಿ, ರವಿ, ಶಿಕ್ಷಕರಾದ ಮಹೇಶ್, ಲಿಂಗರಾಜು ಹಾಗೂ ಕ್ರಿಕೆಟ್ ಆಟಗಾರರು, ಕ್ರಿಕೆಟ್ ಪ್ರೇಮಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *