ರೈತ ಉಳಿದರೆ ದೇಶ ಉಳಿಯುತ್ತದೆ: ಸುತ್ತೂರು ಶ್ರೀ

  • ಕೃಷಿಯಲ್ಲಿ ರಸಾಯನ ಕಡಿಮೆ ಮಾಡುವ ಚಿಂತನೆ ಅಗತ್ಯ
  • ರೈತರ ದುಡಿಮೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ


ಚಾಮರಾಜನಗರ: ರೈತ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದು ಸುತ್ತೂರು ,ಶ್ರೀ ಕ್ಷೇತ್ರದ  ಶ್ರೀ ಶಿವರಾತ್ರಿದೇಶಕೇಂದ್ರ ಸ್ವಾಮೀಜಿ ಹೇಳಿದರು.
ನಗರದ  ವರನಟ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ರಾಜ್ಯ ರೈತ ಸಂಘಟನೆ ಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಡೆದ ವಿಶ್ವ ರೈತ ದಿನಾಚರಣೆ ರಾಜ್ಯಮಟ್ಟದ ರೈತ ಚಿಂತನಾ ಸಮಾವೇಶ ದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಇಂದಿನ ಆಹಾರ ಪದ್ದತಿ ಯಲ್ಲಿ ವಿಷವು ಕೂಡ ದೇಹ ಸೇರುತ್ತಿದೆ. ಏಕೆಂದರೆ ಯಾವುದೇ ಬೆಳೆಗೆ  ರೋಗಗಳು ಹರಡುತ್ತಿದ್ದು,  ಬೆಳೆಯು ರೋಗಮುಕ್ತರಾಗಲ ರಸಾಯನ ಸಿಂಪಡಣೆ ಮಾಡುತ್ತಿದ್ದಾರೆ .ಇದರಿಂದ ಆಹಾರ ಪದಾರ್ಥಗಳನ್ನು ವಿಷವಾಗುತ್ತಿದೆ. ನಾವು ಸೇವನೆ ಮಾಡುವ ಆಹಾರದ ಜೊತೆಗೆ ವಿಷವು ದೇಹ ಸೇರುತ್ತದೆ ಎಂದರು.
ರೈತರ ದುಡಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ರೈತರು ಬೆಳೆದ ಪದಾರ್ಥಗಳಗಳಿಗೆ ಸರ್ಕಾರ  ಸೂಕ್ತ ಬೆಲೆ ನಿಗದಿ ಮಾಡಿದರೆ ರೈತರಿಗೆ ಸಂಜೀವಿನಿ ಯಾಗುತ್ತದೆ.
ಸಾವಯವ ಕೃಷಿ ಬೆಳೆಯಬೇಕು ಆಗ ಮನುಷ್ಯ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದರು.
  ರಾಜ್ಯ ಸರ್ಕಾರ ರೈತ ಪರವಾಗಿದೆ: ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಅಪಾರ
ಕಾಳಜಿ ಹೊಂದಿದ್ದಾರೆ.ಸರ್ಕಾರ ಯಾವಾಗಲೂ ಸರ್ಕಾರ ರೈತರ ಪರವಾಗಿರುತ್ತದೆ. ರೈತರು ಬೆಳೆದ ಪದಾರ್ಥಗಳಿಂದ ಬೆಂಬಲ ಬೆಲೆ ಸಿಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಕೇಂದ್ರ ಸರ್ಕಾರ ಕೂಡ ರೈತ ಪರ ಕಾರ್ಯಕ್ರಮ ಗಳನ್ನು ಜಾರಿ ಮಾಡಲಿ ಎಂದರು.
   ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶಪ್ರಸಾದ್
ವಿಧಾನ‌ ಪರಿಷತ್ ಸದಸ್ಯ ಶಿವಕುಮಾರ್, ಕೊಡುಗು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಅಶೋಕ್ ಎಸ್.ಆಲೂರ್,  ಹನೂರು‌ನಿಶಾಂತ್ , ತೇಜಸ್ ಪಟೇಲ್, ನಾರಾಯಣ್ ರೆಡ್ಡಿ ಮಾತನಾಡಿದರು.
ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು.
ವಿಶ್ವ ರೈತ ದಿನಾಚರಣೆ ಸಮಿತಿ ಗೌರವಾಧ್ಯಕ್ಷ ಪ್ರೊ ಎಸ್.ಶಿವರಾಜಪ್ಪ, ಅಧ್ಯಕ್ಷತೆ ವಹಿಸಿದ್ದರು.
  ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ, ಎಸ್ಪಿ ಮುತ್ತುರಾಜು,  ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *