ನಗರದಲ್ಲಿ ಪತ್ರಿಕಾ ದಿನಾಚರಣೆ ಸಮಾರಂಭ

ಚಾಮರಾಜನಗರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಜು.19 ರಂದು ಬೆಳಿಗ್ಗೆ 11 ಗಂಟೆಗೆ ನಗರದ ವರ್ತಕರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಮಾರಂಭವನ್ನು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸುವರು. ಡಿವಿಜಿ ಭಾವಚಿತ್ರಕ್ಕೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಪುಷ್ಪಾರ್ಚನೆ ನೆರವೇರಿಸುವರು. ಸಂಸದರಾದ ಸುನೀಲ್ ಬೋಸ್ ಅವರು ದತ್ತಿ ಪ್ರಶಸ್ತಿ ಪ್ರದಾನ ಮಾಡುವರು.

ಶಾಸಕರಾದ ಎಚ್.ಎಂ.ಗಣೇಶಪ್ರಸಾದ್ ಅವರು ಪ್ರತಿಭಾ ಪುರಸ್ಕಾರ ವಿತರಿಸುವರು. ಶಾಸಕರಾದ ಎಂ.ಆರ್.ಮಂಜುನಾಥ್ ಅವರು ಕ್ರೀಡಾಕೂಟ ವಿಜೇತರಿಗೆ ಬಹುಮಾನ ನೀಡಲಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ದಿಕ್ಸೂಚಿ ಭಾಷಣ ಮಾಡುವರು. ಸಂಘದ ಜಿಲ್ಲಾ ಉಸ್ತುವಾರಿ ಸೋಮಶೇಖರ್ ಕೆರಗೋಡು ಉಪಸ್ಥಿತರಿರುವರು. ಸಂಘದ ಜಿಲ್ಲಾಧ್ಯಕ್ಷರಾದ ಆರ್,ಎನ್.ಸಿದ್ದಲಿಂಗಸಾಮಿ ಅಧ್ಯಕ್ಷತೆ ವಹಿಸುವರು.

ಅತಿಥಿಗಳಾಗಿ ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು, ವರ್ತಕರ ಸಂಘದ ಅಧ್ಯಕ್ಷ ಎನ್.ಶಂಕರ್ ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ಶ್ರೀಮತಿ ಗೌರಮ್ಮ- ಬಿ.ರಾಚಯ್ಯ ದತ್ತಿ ಪ್ರಶಸ್ತಿಯನ್ನು ಸುದ್ದಿಸಂಜೆ ಪತ್ರಿಕೆಯ ವರದಿಗಾರರಾದ ಎಂ.ಬಸವರಾಜು ಅವರಿಗೆ ಹಾಗೂ ಲಿಂಗಮ್ಮ ಮತ್ತು ಆರ್. ಸಿದ್ದೇಗೌಡ ದತ್ತಿ ಪ್ರಶಸ್ತಿಯನ್ನು ಹನೂರು ತಾಲ್ಲೂಕಿನ ಆಂದೋಲನ ಪತ್ರಿಕೆ ವರದಿಗಾರ ಎಂ. ಮಹಾದೇಶ ಅವರಿಗೆ ವಿತರಿಸಲಾಗುವುದು.

ಸಿದ್ದಲಿಂಗ ದೇವರು ಹಿರಿಯ ಛಾಯಾಗ್ರಾಹಕ ಪ್ರಶಸ್ತಿಯನ್ನು ಪತ್ರಿಕಾ ಛಾಯಾಗ್ರಾಹಕರಾದ ಬದನಗುಪ್ಪೆ ಮಲ್ಲಣ್ಣ ಅವರಿಗೆ ಮತ್ತು ಮಾಜಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ದತ್ತಿ ಪ್ರಶಸ್ತಿಯನ್ನು ಗುಂಡ್ಲುಪೇಟೆ ತಾಲ್ಲೂಕಿನ ವಿಜಯ ಕರ್ನಾಟಕ ಪತ್ರಿಕೆಯ ಬೇಗೂರು ವರದಿಗಾರ ಮಣಿಕಂಠ ಅವರಿಗೆ ವಿತರಿಸಲಾಗುವುದು.

ಲೇಖಕಿ ಎಚ್.ಕೆ.ವಿಜಯಾ ಅವರ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು ಆರ್.ಮ್ಯಾಕ್ಸ್ ನ್ಯೂಸ್ ವರದಿಗಾರರಾದ ಕೊಳ್ಳೇಗಾಲದ
ಸಿ.ಬಸಂತ್ ಕುಮಾರ್ ಅವರಿಗೆ ಹಾಗೂ ಹೊನ್ನಹಳ್ಳಿ ಪಟೇಲ್ ಎಚ್.ಎಂ. ಪುಟ್ಟಮಾದಪ್ಪ ದತ್ತಿ ಪ್ರಶಸ್ತಿಯನ್ನು ಗೊರುಕನ ಪತ್ರಿಕೆಯ ಯಳಂದೂರು ತಾಲ್ಲೂಕು ವರದಿಗಾರರಾದ ವೈ.ಎಂ.ಭಾನುಪ್ರಕಾಶ್ ಅವರಿಗೆ ನೀಡಲಾಗುವುದು.

ಜಿಲ್ಲೆಯ ಎಲ್ಲ ಪತ್ರಕರ್ತರು ಸಮಾರಂಭಕ್ಕೆ ಆಗಮಿಸಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿದ್ದಲಿಂಗಸ್ವಾಮಿ,
ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *