ಚಾಮರಾಜನಗರದಲ್ಲಿ ಕಾಗದ ರಹಿತ ಡಿಜಿಟಲ್ ನೋಂದಣಿಗೆ ಸರ್ವರ್ ಸಮಸ್ಯೆ: ರೈತರ ಅಕ್ರೋಶ

  • ಕಾವೇರಿ.2 ತಂತ್ರಾಂಶದಲ್ಲಿ ಲೋಪ ಸರಿಯಾಗುವ ತನಕ ಹಳೆಯ ತಂತ್ರಾಂಶದಲ್ಲಿ ನೋಂದಣಿಗೆ ಸೂರ್ಯ ಬಾಲರಾಜು ಆಗ್ರಹ

ಚಾಮರಾಜನಗರ: ರಾಜ್ಯ ಸರ್ಕಾರದ ಕಾವೇರಿ ತಂತ್ರಾಂಶದ ಮೂಲಕ ಜಾರಿಗೆ ತಂದಿರುವ ಕಾಗದರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆಯಲ್ಲಿ ಲೋಪವಿದ್ದು, ಆಗಾಗ ಸರ್ವರ್ ಸಮಸ್ಯೆಯಾಗುತ್ತಿದ್ದು, ಇಂದು ಕೂಡ ಸರ್ವರ್ ಇಲ್ಲದ ರೈತರು, ಪತ್ರಬರಹಗಾರರು ದಿನಗಟ್ಟಲೆ ಕಾದು ಹೈರಾಗಿದ್ದು, ಸರ್ಕಾರ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.
ನಗರದ ಉಪನೋಂದಣಿ ಮತ್ತು ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ  ಸರ್ವರ್ ಇಲ್ಲದೆ ಕ್ರಯ ಆಗುತ್ತಿಲ್ಲ. ಕ್ರಯ, ಮಾಡಿಸಲು ಬಂದ ರೈತರು ಬೆಳಿಗ್ಗೆಯಿಂದಲ್ಲೂ ಮಧ್ಯಾಹ್ನದವರೆಗೂ  ಕಾದು ಕುಣಿತು ಹೈರಾಗಿದ್ದು ಸರ್ಕಾರ ವಿರುದ್ದ ಹರಿಹಾಯ್ದರು.
ರೈತ ಮೇಗಲಹುಂಡಿ ಶಾಂತರಾಜು ಮಾತನಾಡಿ, ಬ್ಯಾಂಕ್‌ 1.5 ಲಕ್ಷ ಹಣಕಟ್ಟೆ 15 ದಿನಗಳು ಆಗಿದ್ದು, ಬ್ಯಾಂಕ್‌ನವರು ತೀರುವಳಿ ಮಾಡಿಸಿಕೊಂಡು ಬನ್ನಿ ಎಂದು ಹೇಳಿದ್ದಾರೆ. ಇಲ್ಲಿ ನೋಡಿದರೆ ಒಂದು ವಾರದಿಂದಲ್ಲೂ ರಿಜಿಸ್ಟ್ರೇಷನ್ ಆಗುತ್ತಿಲ್ಲ. ಇಲ್ಲಿ ಯಾವ ಕೆಲಸ ಆಗುತ್ತಿಲ್ಲ. ನನ್ನ ಆರೋಗ್ಯದಲ್ಲಿ ಹೆಚ್ಚುಕಡಿಮೆ ಆದರೆ ಏನು ಮಾಡೋದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
 ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯಬಾಲರಾಜು ಮಾತನಾಡಿ, ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗುವ ಪತ್ರಗಳನ್ನು ಸರ್ಕಾರ ಕಾವೇರಿ . 2, ತಂತ್ರಾಂಶ ಜಾರಿಗೊಳಿಸಿದ್ದು, ರಾಜ್ಯದಲ್ಲೇ ಪ್ರಥಮವಾಗಿ ಚಾಮರಾಜನಗರದಲ್ಲಿ ಕಾಗದರಹಿತ ನೋಂದಣಿಗೆ ಚಾಲನೆ ನೀಡಿದರು. ಇದನ್ನು ಜಿಲ್ಲೆಯ ಪತ್ರ ಬರಹಗಾರರು, ಸಾರ್ವಜನಿಕರು, ರೈತರು ಸ್ವಾಗತಿಸಿದರು. ಕೆಲವು ದಿನಗಳವರಗೆ ನೋಂದಣಿ ನಡೆಯಿತು. ನಂತರ ದಿನಗಳಲ್ಲಿ ನೋಂದಣಿಗಳು ಆಗುತ್ತಿಲ್ಲ ಇದರಿಂದ ಸಂಪೂರ್ಣವಾಗಿ ಜನತೆಗೆ ತೊಂದರೆ ಆಗಿದೆ ಎಂದು ಆರೋಪಿಸಿದರು.
    ಸೋಮವಾರ ಬೆಳಿಗ್ಗೆಯಿಂದಲ್ಲೂ ಇಲ್ಲಿಯವರೆಗೂ ಒಂದು ಪತ್ರನೂ ನೋಂದಣಿ ಆಗಿಲ್ಲ. ನೋಂದಣಿಗಾಗಿ ರೈತರು ಕಚೇರಿಯಲ್ಲಿ ಬೆಳಿಗ್ಗೆಯಿಂದ ಕಾದುಕುಳಿತಿದ್ದಾರೆ. ಈ ರೀತಿ ಆದರೆ ಸರ್ಕಾರ ಜನತೆಗೆ ಯಾವ ಸೇವೆ ಕೊಡುತ್ತಿದ್ದೀರಿ ಎಂದು ಖಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಚಾಮರಾಜನಗರದಲ್ಲಿ. ಏಕೆ ಪ್ರಥಮವಾಗಿ ಪ್ರಾರಂಭಿಸಿದ್ದೀರಿ? ಏನಾದರೂ ಸಮಸ್ಯೆಯಾದರೆ ಯಾರು ಏನು ಕೇಳಲ್ಲ ಎಂದು ಇಲ್ಲಿ ಆರಂಭಿಸಿದ್ರಾ. ಮಂಡ್ಯ, ಹಾಸನ, ಮೈಸೂರು, ಬೆಂಗಳೂರಲ್ಲೂ ಮಾಡಿದರೆ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡುತ್ತಾರೋ ಎಂದು ಆ ಜಿಲ್ಲೆಗಳಲ್ಲಿ ಮಾಡಲಿಲ್ಲವೇ ಎಂದು ಸರ್ಕಾರ ವಿರುದ್ಧ ಕಿಡಿಕಾರಿದರು.
     15 ದಿನಗಳಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ರಾಜ್ಯಾಯುಕ್ತರಿಗೆ ಫೋನ್ ಮಾಡಿದರೆ ಪೋನ್ ತೆಗೆಯುತ್ತಿಲ್ಲ. ಅವರಿಗೆ ಸರ್ಕಾರ ಪೋನ್ ನಂಬರ್ ಕೊಟ್ಟಿರೋದು ಏತಕ್ಕೆ ? ಕಾಗದ ರಹಿತ ನೋಂದಣಿಗೆ ಚಾಲನೆ ಕೊಟ್ಟ ಮೇಲೆ ಎಷ್ಟು ದಿನ ಚಾಮರಾಜನಗರಕ್ಕೆ ಬಂದಿದ್ದೀರಾ ? ಈ ಕಾರ್ಯಕ್ಕೆ ಮೂರು, ನಾಲ್ಕು ತಂಡ ರಚನೆ ಮಾಡಿದ್ದೀರಿ. ಮೇಲಾಧಿಕಾರಿ ನೇಮಕ ಮಾಡಿದ್ದೀರಿ. ಯಾವ ಅಧಿಕಾರಿ ಎಷ್ಟು ದಿನ ಬಂದು ಸಮಸ್ಯೆ ಆಲಿಸಿದ್ದಾರೆ. ಎಂದು ಪ್ರಶ್ನಿಸಿದರು. ಈ ಸಮಸ್ಯೆ ಇನ್ನೂ ಎಷ್ಟು ದಿನ. ನೀವು ಜಾರಿಮಾಡಿರುವ ಕಾವೇರಿ .2 ತಂತ್ರಾಂಶ ಲೋಪ ಸರಿಯಾಗುವ ತನಕ ಹಳೆ ಕಾವೇರಿ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಡಬೇಕು ಎಂದು ಸೂರ್ಯ ಬಾಲರಾಜ್ ಒತ್ತಾಂಯಿಸಿದರು

Leave a Reply

Your email address will not be published. Required fields are marked *