ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ: ಆರ್.ಅಶೋಕ್ ಆರೋಪ

  • ಮತದಾರರಪಟ್ಟಿ ಪರಿಷ್ಕರಣೆಯನ್ನು ಕಾಂಗ್ರೆಸ್ ಹೈಜಾಕ್ ಮಾಡುವ ಹುನ್ನಾರ.

ಚಾಮರಾಜನಗರ: ಮತದಾರರಪಟ್ಟಿ ಪರಿಷ್ಕರಣೆಯನ್ನು ಕಾಂಗ್ರೆಸ್ ಹೈಜಾಕ್ ಮಾಡುವ ಹುನ್ನಾರ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮತದಾರರ ಪರಿಷ್ಕರಣೆಯಲ್ಲಿ ಭಾರತೀಯರಿಗೆ ಮತದಾರರ ಹಕ್ಕು ಸಿಗಬೇಕೆನ್ನುವುದು ಬಿಜೆಪಿ ಉದ್ದೇಶವಾಗಿದೆ. ಇದನ್ನು ಕಾಂಗ್ರೆಸ್ ಹೈಜಾಕ್ ಮಾಡುವ ಪ್ರಯತ್ನ ಮಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ. ಬಂದು 75 ವರ್ಷಗಳ ಮೇಲಾಗಿದೆ. ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಶಾಶ್ವತ ವಾಸಸ್ಥಳ ದೃಢೀಕರಣ ಪತ್ರವನ್ನು ನೀಡಲು ಮುಂದಾಗಿದೆ. ಅಂದರೆ ಇಷ್ಟು ದಿನ ನಾವೆಲ್ಲರೂ ಭಾರತದಲ್ಲಿ ಶಾಶ್ವತವಾಗಿರಲಿಲ್ಲವೇ? ನೀವು ಶಾಶ್ವತ ವಾಸಸ್ಥಳ ದೃಢೀಕರಣ ಕೊಟ್ಟುಬಿಟ್ಟರೆ ದೇಶದಲ್ಲಿ ಈಗ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತದೆ. ಅದನ್ನು ಹೈಜಾಕ್ ಮಾಡಿದಂಗಾಗುತ್ತದೆ ಎಂದು ಅಶೋಕ್ ಕಿಡಿಕಾರಿದರು.
ಎಸ್ ಐಆ‌ರ್ ಮಾಡುತ್ತಿರುವುದು ದೇಶದ ಪ್ರಜೆಗಳಿಗೆ ಮತದಾರರ ಹಕ್ಕು ಸಿಗಬೇಕು. ಬಾಂಗ್ಲಾದೇಶದವರು ಭಾರತದಲ್ಲಿ 2 ಕೋಟಿ ಗೂ ಹೆಚ್ಚು ಜನ ಇದ್ದು. ಕರ್ನಾಟಕದಲ್ಲೂ 20ರಿಂದ 30 ಲಕ್ಷ ಜನರು ಇದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಅಂದರೆ ಅವರನ್ನು ಶಾಶ್ವತ ವಾಸಸ್ಥಳ ದೃಢೀಕರಣ ನೀಡಿ ಅವರನ್ನು ಪರ್ಮೆಂಟ್ ಮಾಡಿಬಿಡುತ್ತೀರಾ?. ರೇಷನ್ ಕಾರ್ಡ್ ಹೆಲ್ತ್ ಕಾರ್ಡ್, ಆಶ್ರಯಮನೆ, ಅಂಬೇಡ್ಕರ್ ಮನೆ ಎಲ್ಲವೂ ಸಿಕ್ಕಿದ ಮೇಲೆ ಅವರು ಇಲ್ಲಿ ಶಾಶ್ವತವಾಗಿ ಉಳಿಯುವ ಕೆಲಸವನ್ನುಕಾಂಗ್ರೆಸ್ ಮಾಡಲು ಹೊರಟಿದೆ. ಅವರನ್ನು ಭಾಂಗ್ಲಾದೇಶಕ್ಕೆ ವಾಪನ್ ಕಳುಹಿಸುವುದು ಹೇಗೆ ? ಕಾಂಗ್ರೆಸ್ ವೋಟ್ ಬ್ಯಾಂಕ್‌ಗೋಸ್ಕರ ಅಲ್ಪಾಸಂಖ್ಯಾತರನ್ನು ಒಲೈಸಲು ಮಾಡುತ್ತಿರುವುದು ದೊಡ್ಡ ಹುನ್ನಾರ ಇದು ಎಂದು ಕಿಡಿಕಾಡಿದರು.
  ಸಂವಿಧಾನ ಬದ್ಧವಾಗಿ ಕೇಂದ್ರ ಸರ್ಕಾರ ಮಾಡಬೇಕು. ದೇಶದ ಪ್ರಜೆಯನ್ನು ಗುರುತು ಮಾಡುವ ಅಧಿಕಾರ ಯಾವುದೇ ರಾಜ್ಯ ಸರ್ಕಾರಕ್ಕೆ ಇಲ್ಲ. ಇದು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರ ಇದೆ. ನಮ್ಮದೇಶದಿಂದ ವಿದೇಶದವರನ್ನು ಹೊರಹಾಕುವ ಜವಾಬ್ದಾರಿ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂದರು.
ಬರದ ಬಗ್ಗೆ ಸಿಎಂ ತಲೆಕೆಡಿಸಿಕೊಂಡಿಲ್ಲ: ರಾಜ್ಯದಲ್ಲಿ ಬರಬಂದಿದ್ದು, ಮಂಡ್ಯ ಜಿಲ್ಲೆಯಲ್ಲಿ ಹಸಿರಾಗಿದ್ದ
ಕಬ್ಬಿನ ಫಸಲು ಒಣಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದರ. ಬಗ್ಗೆ ಸಭೆ ಮಾಡಿ ಬರವನ್ನು ಘೋಷಣೆ ಮಾಡಬೇಕಿತ್ತು. ಅದನ್ನು ಮಾಡದೆ ಕೇಂದ್ರ ಸರ್ಕಾರ 10 ಸಾವಿರ ಕೋಟಿ ಬರಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿದ್ದಾರೆ. ಯಾತಕ್ಕೆ 10 ಸಾವಿರ ಕೋಟಿ. ರಾಜ್ಯದಲ್ಲಿ ಬರ ಘೋಷಣೆ ಮಾಡಿದ್ದೀರಾ. ಇದೊಂದು ಬೇಜಾವಾಬ್ದಾರಿ ಸರ್ಕಾರ, ಕರ್ನಾಟಕ ರಾಜ್ಯ.. ಒಂದರಲ್ಲೇ ಬರ ಬಂದಿಲ್ಲ ಬೇಕಾದಷ್ಟು ರಾಜ್ಯದಲ್ಲಿ ಬರ ಅವರಿಸಿದೆ ಎಂದು ಮುಖ್ಯಮಂತ್ರಿಗಳನ್ನು ತರಾಟೆ ತೆಗೆದುಕೊಂಡರು.
ಡಿ.ಕೆ.ಶಿವಕುಮಾರ್‌ಗೆ ನಾನು ಹಿಂದುನೋ ಅಲ್ಲೋ ಅನುಮಾನ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ
ನಾನು ಹಿಂದುನೋ ಅಲೆ ಅನುಮಾನ ಶುರುವಾಗಿದೆ. ದೇವಸ್ಥಾನಗಳಿಗೆ ಹೋಗೋದೋ ಅಣೆಗೆ ಪಟ್ಟಿ ಎಳೆದುಕೊಳ್ಳುವುದೋ, ಹೋಗೋದೋ ಸ್ವಾಮಿಜೀಗಳ ಕಾಲಿಗೆ ಬೀಳೋದೋ ಮಾಡುತ್ತಿದ್ದಾರೆ. ನಿಮಗೆ ನೀವು ಹಿಂದುನೋ ಅಲ್ವೋ ಅನುಮಾನವಾಗಿ ಬಿಟ್ಟಿದ್ದೀಯಾ.ಇದನ್ನು ತೋರಿಕೆಗಾಗಿ ಮಾಡುತಿದ್ದೀರಾ. ಅದು ಬಿಟ್ಟು ಮೊದಲು ರೈತರ ಸಂಕಷ್ಟಕ್ಕೆ ಬನ್ನಿ ಎಂದರು.
ಸಿಎಂರಿಂದ ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ : ಮುಖ್ಯಮಂತ್ರಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ ಬರೀ ಎಲ್ಲ ಶೋ ಹೋಗೋದು ಫೋಟೋ ತೆಗೆಸಿಕೊಳ್ಳೋದು ಬರೋದೋ ಮುಖ್ಯಮಂತ್ರಿ ಕೆಲಸ ಆಗಿದೆ ಹೊರತು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ ದಸರಾ ಸಭೆ ಮಾಡುತ್ತೀನಿ, ದೇವಸ್ಥಾನಕ್ಕೆ ಹೋಗುತ್ತಿನಿ ಎಂದೋ ಫೋಟೋ ತೆಗೆಸಿಕೊಳ್ಳೋದಾಗಿದೆ ರಾಜ್ಯದಲ್ಲಿ ಸುಮಾರು 30 ಲಕ್ಷ ರೇಷನ್ ಕಾರ್ಡ್ ರದ್ದುಪಡಿಸುತ್ತಿದ್ದಾರೆ. 20 ಲಕ್ಕಕ್ಕೂ ಮಂದಿಗೆ ಪಿಂಚಣಿ ನಿಲ್ಲಿಸಿದ್ದಾರೆ. ಇದು ಜನಪರ ಸರ್ಕಾರವೇ ಪ್ರಶ್ನಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ  ದೋಖಾ  : ರಾಜ್ಯ ಕಾಂಗ್ರೆಸ್ ಸರ್ಕಾರ ದೋಖಾ, ದಿವಾಳಿಯಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನತೆಗೆ ಮಂಕುಬೂದಿ ಎರಚುವ ಕೆಸಲ ಮಾಡಿದೆ.  ರಾಜ್ಯದ ಆರ್ಥಿಕ ವ್ಯವಸ್ಥೆ ಹಳ್ಳ ಹಿಡಿದ್ದು, ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸಿದರು.
    ಟೆಂಡರ್ ಸಿಎಂ ಡಿ.ಕೆ.ಶಿವಕುಮಾರ್: ಸಿದ್ದರಾಮಯ್ಯ ಮೂರು ವರ್ಷ ಟೆಂಡರ್ ಸಿಎಂ ಆಗಿದ್ದರು. ಈಗ ಡಿ.ಕೆ.ಶಿವಕುಮಾರ್ ಟೆಂಡರ್  ಸಿ.ಎಂ ಆಗಿದ್ದು, ಇನ್ನೂ ಸಚಿವ ಸಂಪುಟ ರಚನೆ ಮಾಡಿಲ್ಲ.ರಾಜ್ಯ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ  ಸಿ.ಎಸ್.ನಿರಂಜನ್ ಕುಮಾರ್ ,  ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ,ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೋ.ಕೆ.ಆರ್.ಮಲ್ಲಿಕಾರ್ಜುನ ಪ್ಪ, ಉಸ್ತುವಾರಿ ಕಾರ್ಯದರ್ಶಿ ಲಕ್ಷ್ಮೀ, ಜಿಲ್ಲಾ ಮಾಜಿ ಅಧ್ಯಕ್ಷ ನಾರಾಯಣ ಪ್ರಸಾದ್,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಹಾಜರಿದ್ದರು.

Leave a Reply

Your email address will not be published. Required fields are marked *