ವೈಚಾರಿಕ, ಸಮಾನತೆ ಸಾರುವ ಚಿಂತನೆ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿಯಲ್ಲಿದೆ: ಪ್ರೊ.ಎಂ.ನಂಜುಂಡಯ್ಯ

  • ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ ಲೋಕಾರ್ಪಣೆ

ಚಾಮರಾಜನಗರ : ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿಯು  ಒಂದು ವಿಶಿಷ್ಠವಾದ ವೈಚಾರಿಕ ಲೇಖನಗಳನ್ನು ಒಳಗೊಂಡ ಕೃತಿಯಾಗಿದೆ ಎಂದು ಭೋಗಾಪುರ ವಸತಿಯುಕ್ತ ಸರ್ಕಾರಿ ಪ್ರಥಮದರ್ಜೆ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಎಂ.ನಂಜುಂಡಯ್ಯ ಹೇಳಿದರು. ಕಾಲೇಜಿನ
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಕಾನ್ಸಿರಾಂ ವಿದ್ಯಾರ್ಥಿ ಸಂಘ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಮತ್ತು ಜನಪ್ರಕಾಶನ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ ಸಮಾನತೆ ಸ್ನೇಹಿತ ಕೃತಿಯ ಜನಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿಯು ಇಂದು ನಾಡಿನಾದ್ಯಂತ ಸುಮಾರು 23 ಕಡೆಗಳಲ್ಲಿ ಬಿಡುಗಡೆಯಾಗುತ್ತಿದೆ. ಚಾಮರಾಜನಗರದಲ್ಲೂ ಬಿಡುಗಡೆಯಾಗಿರುವುದು ಸಂಭ್ರಮದ ವಿಚಾರವಾಗಿದೆ ಎಂದರು.
ದೇಶ ಒಂದು ನಿಕ್ಷುಬ್ಧ ಸ್ಥಿತಿಯಲ್ಲಿರುವುದನ್ನು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ  ಕವಿ, ಕಾದಂಬರಿಗಾರ, ಕಥೆಗಾರ, ವಿಮರ್ಶಕ, ಸಿನಿಮಾ ನಿರ್ದೇಶಕರು ಆಗಿರುವಂತ ನಾಡಿನ ಖ್ಯಾತ ಚಿಂತಕರಾದ ಬರಗೂರು ರಾಮಚಂದ್ರಪ್ಪ ಅವರು ವಿವಿಧ ಲೇಖನಗಳ ಸಂಗ್ರಹಿಸಿದ ಕೃತಿ ಇದಾಗಿದ್ದು, ಒಂದು ವೈಚಾರಿಕ ಲೇಖನಗಳನ್ನೂಳಗೊಂಡಿರುವ ಕೃತಿ ಇದಾಗಿದೆ. 10 ಲೇಖನಗಳ ಚಿಂತನೆ, ಬೇರೆಬೇರೆ ಸಂದರ್ಭಗಳಲ್ಲಿ ಅವರು ಬರೆದಿರುವಂತಹ ವಿಶಿಷ್ಠವಾದ ವೈಚಾರಿಕ ಚಿಂತನೆ, ಸಾಮಾಜಿಕ ಸಂಘರ್ಷದ  ಚಿಂತನೆ,
ಸಮಾನತೆಯನ್ನು ಸಾರುವ ಚಿಂತನೆ ಈ ಕೃತಿಯಲ್ಲಿರುವುದನ್ನು ನಾವು ಕಾಣುತ್ತೇವೆ ಎಂದರು.
ಸರ್ಕಾರಿ ಕಾನೂನು ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕೆ.ಎಂ.ನಾಗೇಶ್ ಕೃತಿಬಿಡುಗಡೆಗೊಳಿಸಿ ಮಾತನಾಡಿ, ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಪ್ರಸ್ತುತ ದಿನಮಾನಕ್ಕೆ ಅಗತ್ಯವಾದ ಪುಸ್ತಕಗಳನ್ನು ಆಯಾಯ ಕಾಲಘಟ್ಟದಲ್ಲಿ ರಚಿಸಿರುವ 10 ಲೇಖನಗಳನ್ನು ಕ್ರೋಡೀಕರಿಸಿ ಸೌಹಾರ್ದ ಭಾರತ ಸಮಾನತೆ ಸ್ನೇಹಿತ ಕೃತಿ ಹೊರತಂದಿದ್ದಾರೆ. ಇಂತಹ ಕೃತಿ ಪ್ರಸ್ತುತ ದಿನಮಾನಕ್ಕೆ ಅತ್ಯಂತ ಅವಶ್ಯಕವಾಗಿದ್ದು, ಅವರು ಬದುಕು, ಬರಹ, ಕರ್ನಾಟಕ ಸಾಂಸ್ಕೃತಿಕ ವಲಯವನ್ನು ಸಂವೃದ್ಧಗೊಳಿಸುವಲ್ಲಿ ತನ್ನದೆಯಾದ ಪಾತ್ರವನ್ನು ವಹಿಸಿದೆ ಎಂದರು.
ಬರಗೂರು ರಾಮಚಂದ್ರ ಅವರ ಬರಹ ಹೊಸ ತಲೆಮಾರಿನ ವಲಯದಲ್ಲಿ ಹೊಸ ವಿಧೇಯಕವನ್ನು ಉಂಟು ಮಾಡಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿಯು ತನ್ನ ಮೊಗ್ಗಲು ಬದಲಿಸುವಲ್ಲಿ ಪ್ರಗತಿಪರವಾಗಿ ಆಲೋಚಿಸುವಲ್ಲಿ, ಜನಪರ ಚಳವಳಿಯ ರೂಪಿಸುವಲ್ಲಿ ಬರಗೂರು ರಾಮಚಂದ್ರಪ್ಪ ಅವರು ಪಾಲು ಹೆಚ್ಚಾಗಿದ್ದು, ನಾಡಿನಲ್ಲಿ ಅವರು ಜನಮನ್ನಣೆ ಪಡೆದಿದ್ದಾರೆ. ಅನೇಕ ಕಾದಂಬರಿಗಳನ್ನು ರಚಿಸಿದ್ದಾರೆ. ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿಯನ್ನು ಯುವಜನಾಂಗ ಓದಬೇಕು ಎಂದು ಸಲಹೆ ನೀಡಿದರು.
ದಲಿತ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಶಿವಕುಮಾರ್ ಸರಗೂರು ಕೃತಿ ಪರಿಚಯ ಮಾಡಿಕೊಟ್ಟರು. ಕಾನ್ಸಿರಾಂ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಸುವಹೊಂಡರಬಾಳು ಅಧ್ಯಕ್ಷತೆ ವಹಿಸಿದ್ದರು.
ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಮಾಲೀಕ ಗೋವಿಂದರಾಜ, ಸುಭಾಷ್ ನಲ್ಲೂರು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *