- ರೋಟರಿ ಸಿಲ್ಕ್ ಸಿಟಿ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ
ಚಾಮರಾಜನಗರ: ಚಾ.ನಗರದ ರೋಟರಿ ಸಿಲ್ಕ್ ಸಿಟಿ ವತಿಯಿಂದ ಕಳೆದ ವರ್ಷದಂತೆ ಈ ಬಾರಿಯು ಡಿ. 19 ರಿಂದ ಮೂರು ದಿನಗಳ ಕಾಲ ಆಹಾರ ಮೇಳ ಮತ್ತು ವಸ್ತು ಪ್ರದರ್ಶನ ಆಯೋಜನೆ ಮಾಡಲಾಗಿದೆ ಎಂದು ರೋಟರಿ ವಲಯ 9ರ ಸಹಾಯಕ ಗೌರ್‍ನರ್ ದೊಡ್ಡ ರಾಯಪೇಟೆ ಗಿರೀಶ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ತಾಲೂಕಿನ ಗಡಿ ಅಂಚಿನಲ್ಲಿರುವ ಮೂಕನಪಾಳ್ಯ ಸರ್ಕಾರಿ ಶಾಲೆಯ ಅಭಿವೃದ್ದಿಗಾಗಿ ಆಹಾರ ಮೇಳವನ್ನು ಆಯೋಜನೆ ಮಾಡಿ, ರೋಟರಿ ಸಿಲ್ಕ್ಸಿಟಿ ವತಿಯಿಂದ 2.50 ಲಕ್ಷ ರೂ.ಗಳನ್ನು ನೀಡಿದ್ದೇವೆ. ಈ ಬಾರಿಜಿಲ್ಲೆಯ ಹಾಸ್ಟೆಲ್‌ಗಳಿಗೆ ಪಿಠೋಪಕರಣಗಳನ್ನು ಕಲ್ಪಿಸಿಕೊಡಲು ಈ ಆಹಾರ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಅವರಣದಲ್ಲಿ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಶ್ರೀಮಠದ ಅವರಣದಲ್ಲಿರುವ ಶ್ರೀ ಬಸವರಾಜಸ್ವಾಮಿಗಳ ಅನುಭವ ಮಂಟಪದದಲ್ಲಿ ವಸ್ತು ಪ್ರದರ್ಶನ ಮತ್ತು ಮೈದಾನದಲ್ಲಿ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಕಲ್ಯಾಣ ಮಂಟಪದ ಒಳಾಂಗಣದಲ್ಲಿ 30 ಮಳಿಗೆಗಳನ್ನು ತೆರೆಯಲಾಗುತ್ತದೆ. ಈ ಮಳಿಗೆಗಳಲ್ಲಿ ಪ್ರಮುಖವಾಗಿ ದಿನನಿತ್ಯ ಬಳಸುವ ವಸ್ತುಗಳು, ಕಟ್ಟಡ ಸಾಮಾಗ್ರಿಗಳು ಸೇರಿದಂತೆ ಇತರೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಖಾದಿ ಉಡುಪು, ಸೀರೆ, ವಿವಿಧ ವಿನ್ಯಾಸ ಉಡುಪು, ಖ್ಯಾದಗಳು, ಪ್ರದರ್ಶನ ಗೊಳ್ಳಲಿದೆ. ಜೊತೆಗೆ ಕಾರ್ ಎಕ್ಸಪೋ ಕೂಡ ಆಯೋಜನೆ ಮಾಡಲಾಗಿದೆ. ಆಹಾರ ಮಳಿಗೆಗಳಲ್ಲಿ 50ಕ್ಕೂ ಹೆಚ್ಚು ಸಸ್ಯಹಾರಿ ತಿನಿಸುಗಳು ದೊರೆಯಲಿದೆ.
ಡಿ.19 ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಿದ್ಧಮಲ್ಲೇಶ್ವರ ವಿರಕ್ತಮಠದ ಶ್ರೀ ಚೆನ್ನಬಸವಸ್ವಾಮೀಜಿ ಅವರು ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದು ರೋಟರಿ ಸಿಲ್ಕ್ ಸಿಟಿಯ ಗರ‍್ನರ್ ಪಿ.ಕೆ. ರಾಮಕೃಷ್ಣ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಿ.19 ರಂದು ಸಂಜೆ 5 ರಿಂದ ರಾತ್ರಿ 9ರವರೆಗೆ ನಡೆಯುವ ಸಾಂಸ್ಕೃತಿಕ ವೈಭವದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಸಿಂಚನ ದೀಕ್ಷಿತ್ ಅವರಿಂದ ಸಂಗೀತ ಸಂಜೆ, ಅಂತರಾಷ್ಟ್ರೀಯ ಕೊಳಲು ವಾದಕ ನೀತು ನಿನಾದ್ ಅವರಿಂದ ಕಾರ್ಯಕ್ರಮ ನಡೆಯಲಿದೆ.
ಡಿ.20 ರಂದು ಅಂತರಾಷ್ಟ್ರೀಯ ಖ್ಯಾತಿಯ ಸ್ಯಾಕ್ರೋಫೋನ್ ಕಲಾವಿದೆ ಅಂಜಲಿ ಶಾನ್‌ಬಾಗ್ ಹಾಗೂ ಇತಿಹಾಸ ಪ್ರಚಾರಕ ಧಮೇಂದ್ರಕುಮಾರ್ ಅವರಿಂದ ಕಾರ್ಯಕ್ರಮ ಹಾಗೂ ಡಿ. 21 ರಂದು ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಮಿಸ್ಟರ್ ಮ್ಯಾಜಿಕ್ ಅವರಿಂದ ಜಾದೂ ಹಾಗೂ ಪೃಥ್ವಿ ಪಿ. ಗೌಡ ಅವರಿಂದ ಸಮೂಹ ನೃತ್ಯ ಮತ್ತು ಮನರಂಜನೆ ನಡೆಯಲಿದೆ.
ಕಳೆದ ವರ್ಷ ರೋಟರಿ ಸಿಲ್ಕ್ ಸಿಟಿ ವತಿಯಿಂದ ಪ್ರಥಮ ಭಾರಿಗೆ ಆಹಾರ ಮೇಳವನ್ನು ಆಯೋಜನೆ ಮಾಡಿ, ಅಭೂತ ಪೂರ್ವ ಯಶಸ್ಸಿಯಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಎರಡು ದಿನಗಳ ಕಾಲ ಆಹಾರ ಮೇಳದಲ್ಲಿ ಭಾಗವಹಿಸಿದ್ದರು. ಸಾರ್ವಜನಿಕರ ಸ್ಪಂದನೆ ಮತ್ತು ಉತ್ಸಾಹವನ್ನು ನೋಡಿ ಈ ಬಾರಿ ಆಹಾರ ಮೇಳವನ್ನು ಮೂರು ದಿನಗಳ ಕಾಲ ಆಯೋಜನೆ ಮಾಡುವ ಜೊತೆಗೆ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಪ್ರಥಮವಾಗಿ ವಸ್ತು ಪ್ರದರ್ಶನ ಕ್ಯಾಂಪ್‌ಗೆ ಒಂದು ಕೋಟಿ ರೂ.ಗಳ ವಿಮೆಯನ್ನು ಮಾಡಿಸಲಾಗಿದೆ. ಹೆಚ್ಚಿನ ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರವೇಶ ದರವನ್ನು 30 ರೂ. ನಿಗಧಿ ಪಡಿಸಲಾಗಿದೆ ಎಂದು ಗಿರೀಶ್ ತಿಳಿಸಿದರು.
ಮೂರು ದಿನಗಳ ಕಾಲ ನಡೆಯುವ ಆಹಾರ ಮೇಳ ಮತ್ತು ವಸ್ತು ಪ್ರದರ್ಶನಕ್ಕೆ ಸುಮಾರು ಒಂದು ಲಕ್ಷ ಜನರು ಬರುವ ನಿರೀಕ್ಷೆಯನ್ನು ಮಾಡಲಾಗಿದೆ. ಇದಕ್ಕೆ ತಕ್ಕಂತೆ ಪೂರ್ವ ಸಿದ್ದತೆಗಳನ್ನು ರೋಟರಿ ಸಿಲ್ಕ್ಸಿಟಿಯಿಂದ ಕೈಗೊಳ್ಳಲಾಗಿದೆ. ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಮ್ಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರೋಟರಿ ಸಿಲ್ಕ್ಸಿಟಿ ಅಧ್ಯಕ್ಷ ಶಮಿತ್‌ಕುಮಾರ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆಹಾರ ಮೇಳದ ಛರ‍್ಮನ್ ಡಿ.ಪಿ. ವಿಶ್ವಾಸ್, ರೋಟರಿ ಸಿಲ್ಕ್ಸಿಟಿ ಅಧ್ಯಕ್ಷ ಹೊಸೂರು ಶಮಿತ್‌ಕುಮಾರ್, ಕಾರ್ಯದರ್ಶಿ ಅಡಿಟರ್ ಸಂತೋಷ್, ಮಾಜಿ ಅಧ್ಯಕ್ಷರಾದ ಮರಿಯಾಲದ ಸೌರಭ ಮುರುಘೇಂದ್ರಸ್ವಾಮಿ, ಅಜಯ್, ಶರತ್, ವಿಜಿ ಇತರರು ಇದ್ದರು.