ಚಾಮರಾಜನಗರ, ಜು.05 – ಪತ್ರಿಕಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವು ಸಂಘದ ಸದಸ್ಯರಿಗಾಗಿ ಭಾನುವಾರ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು, ಫೈನಲ್ ಪಂದ್ಯದಲ್ಲಿ ಚಾಮರಾಜನಗರ ತಂಡ ಜಯ ಗಳಿಸುವ ಮೂಲಕ ಚಾಂಪಿಯನ್ನಾಗಿ ಹೊರಹೊಮ್ಮಿತು. ಗುಂಡ್ಲುಪೇಟೆ ತಂಡ ಎರಡನೇ ಸ್ಥಾನ ಗಳಿಸಿತು,
ನಗರದ ದೀನಬಂಧು ಶಾಲೆಯ ಪಕ್ಕದ ಮೈದಾನದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಹಿರಿಯ ಪತ್ರಕರ್ತರು ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಅಬ್ರಾಹಂ ಡಿ ಸಿಲ್ವ ಹಾಗೂ ಮತ್ತೋರ್ವ ಹಿರಿಯ ಪತ್ರಕರ್ತರು ಹಾಗೂ ಸಂಘದ ನಿರ್ದೇಶಕರಾದ ಪ್ರಕಾಶ್ ಬೆಲ್ಲದ್ ಬ್ಯಾಟ್ ಬೀಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ,ಪತ್ರಿಕಾ ದಿನಾಚರಣೆಯ ಹಿನ್ನೆಲೆಯಲ್ಲಿ ಕ್ರೀಡಾಕೂಟವನ್ನು ಆಯೋಜಿಸ ಲಾಗಿದೆ, ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಎಲ್ಲಾ ಪತ್ರಕರ್ತರು ಭಾಗವಹಿಸಿರುವುದು ಸಂತೋಷ ತರಿಸಿದೆ, ಎಂದರು ಈ ಬಾರಿ ವಿಶೇಷವಾಗಿ ಕೊಳ್ಳೇಗಾಲ ತಂಡವೂ ಕೂಡ ಭಾಗವಹಿಸುವ ಮೂಲಕ ಐದು ತಂಡಗಳು ಭಾಗವಹಿಸಲಿದ್ದು ಎಲ್ಲಾ ತಂಡದ ಸದಸ್ಯರಿಗೂ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಆರ್ ಎನ್ ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ರಾಜ್ಯ ಸಮಿತಿ ಸದಸ್ಯ ಮಹೇಂದ್ರ, ಖಜಾಂಚಿ ಆರ್ ಸಿ ಪುಟ್ಟರಾಜು, ಕೊಳ್ಳೇಗಾಲ ತಾಲ್ಲೂಕು ಸಂಘದ ಅಧ್ಯಕ್ಷ ಚಿಕ್ಕ ಮಾಳಿಗೆ, ಹನೂರು ತಾಲ್ಲೂಕು ಸಂಘದ ಅಧ್ಯಕ್ಷ ದೇವರಾಜು ನಾಯ್ಡು, in HB ಗುಂಡ್ಲುಪೇಟೆ ತಾಲ್ಲೂಕು ಸಂಘದ ಅಧ್ಯಕ್ಷ ಬಸವರಾಜು, ಜಿಲ್ಲಾ ಸಂಘ ಹಾಗೂ ತಾಲ್ಲೂಕು ಸಂಘದ ಪದಾಧಿಕಾರಿಗಳು ಹಾಗೂ ಸಂಘದ ಎಲ್ಲಾ ಪತ್ರಕರ್ತ ಸದಸ್ಯರು ಉಪಸ್ಥಿತರಿದ್ದರು.
ಚಾ.ನಗರ ತಂಡ ಚಾಂಪಿಯನ್ : ಈ ಬಾರಿ ನಡೆದ ಪಂದ್ಯಾವಳಿಯಲ್ಲಿ ಚಾ.ನಗರ ಜಿಲ್ಲಾ ಕೇಂದ್ರದಿಂದ ಎರಡು ತಂಡ, ಹನೂರು, ಕೊಳ್ಳೇಗಾಲ, ಯಳಂದೂರು ಹಾಗೂ ಗುಂಡ್ಲುಪೇಟೆ ತಾಲ್ಲೂಕು ತಲಾ ಒಂದೊಂದು ತಂಡಗಳು ಭಾಗವಹಿಸಿದ್ದವು. ಚಾ.ನಗರ ಎ ತಂಡ ಜಿಲ್ಲಾ ಕೇಂದ್ರದ ಮತ್ತೊಂದು ತಂಡದೊಂದಿಗೆ ಜಯ ಗಳಿಸುವ ಮೂಲಕ ಕೊಳ್ಳೇಗಾಲ ತಂಡದೊಂದಿಗೆ ಸೆಮಿಫೈನಲ್ ತಲುಪಿದರೆ, ಹನೂರು ತಂಡವು ಯಳಂದೂರು ತಂಡವನ್ನು ಮಣಿಸಿ ಗುಂಡ್ಲುಪೇಟೆ ಜೊತೆ ಕಾಯ್ದಾಟಕ್ಕೆ ಸೆಮಿಫೈನಲ್ ತಲುಪಿತು. ಅಂತಿಮವಾಗಿ ಗುಂಡ್ಲುಪೇಟೆ ಹಾಗೂ ಚಾ.ನಗರ ಜಿಲ್ಲಾ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಚಾ.ನಗರ ಜಿಲ್ಲಾ ತಂಡವು ಜಯ ಗಳಿಸುವ ಮೂಲಕ ಈ ಬಾರಿಯೂ ಚಾಂಪಿಯನ್ನಾಗಿ ಹೊರ ಹೊಮ್ಮಿತು. ಗುಂಡ್ಲುಪೇಟೆ ತಂಡವು ರನ್ನರ್ ಅಪ್ ಗೆ ತೃಪ್ತಿ ಪಟ್ಟಿಕೊಂಡಿತು