ಚಾಮರಾಜನಗರ: ಬಿಜೆಪಿ ಎಸ್ ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಬಿ.ಜಯಸುಂದರ್ ಅವರ ಹುಟ್ಟುಹಬ್ಬದ
ಅಂಗವಾಗಿ ಬಿಜೆಪಿ ಜಿಲ್ಲಾ ಎಸ್‌ಟಿ ಮೋರ್ಚಾದ ವತಿಯಿಂದ ತಾಲೂಕಿನ ಉತ್ತುವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಆಶ್ರಮಸೇವಾ ಚಾರಿಟಬಲ್ ಟ್ರಸ್ಟ್‌ನ ವೃದ್ದ ಮತ್ತು ಅನಾಥಾಶ್ರಮ ವೃದ್ಧರಿಗೆ ಹೋಳಿಗೆ ಭೋಜನ ವ್ಯವಸ್ಥೆ ಮಾಡಲಾಯಿತು. ಅಲ್ಲದೆ ಆಶ್ರಮಕ್ಕೆ 3 ಫ್ಯಾನ್, ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
ಜಿಲ್ಲಾ ಎಸ್‌ಟಿ ಮೋರ್ಚಾದ ಅಧ್ಯಕ್ಷ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಹೋಳಿಗೆ ಭೋಜನ ವ್ಯವಸ್ಥೆ. ಮಾಡಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜಿಲ್ಲಾ ಎಸ್‌ಟಿ ಮೋರ್ಚಾದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಬಿಜೆಪಿ ಎಸ್ ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ
ಬಿ.ಜಯಸುಂದರ್ ಅವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಬಿಜೆಪಿ
ಎಸ್ಟಿ ಮೋರ್ಚಾದ ವತಿಯಿಂದ ಆಶ್ರಮಸೇವಾ ಚಾರಿಟಬಲ್ ಟ್ರಸ್ಟ್‌ನ ವೃದ್ಧ ಮತ್ತು ಅನಾಥಶ್ರಮ ವೃದ್ಧರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇಂದು ಆಷಾಢಮಾಸದ ಮೊದಲ ಶುಕ್ರವಾರವಾಗಿದ್ದು, ನಾಡಿನ ಅಧಿದೇವತೆ ಚಾಮುಂಡೇಶ್ವರಿತಾಯಿಗೆ ವಿಶೇಷಪೂಜೆ ಕೈಂಕರ್ಯಗಳು ನಡೆಯುತ್ತಿದ್ದು, ಚಾಮುಂಡೇಶ್ವರಿ ತಾಯಿ ಜಯಸುಂದರ್ ಅವರಿಗೆ ಹೆಚ್ಚಿನ ಆರೋಗ್ಯ, ಆಯಸು ಕರುಣಿಸಿ, ಮುಂದಿನ ದಿನಗಳಲ್ಲಿ ಅವರಿಗೆ ಉನ್ನತ ಮಟ್ಟದ ರಾಜಕೀಯ ಸ್ಥಾನಮಾನ ಸಿಗುವಂತಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಆಶ್ರಮ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಮೇಶ್ ಪ್ರಭು, ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಶಿವಕುಮಾರ್, ಕೋಶಾಧ್ಯಕ್ಷ ರಘು, ಜಿಲ್ಲಾ ಕಾರ್ಯಕಾರಣಿ ಸದಸ್ಯ ನಾಗೇಶ್ ಮಾಸ್ಟರ್, ರಾಘವಾ ವಾಲ್ಮೀಕಿ,
, ಹೇಮಂತ್, ಮಂಜುಭಕ್ತ, ವಿಶ್ವ, ಹರದನಹಳ್ಳಿಕೃಷ್ಣ, ಬಂಗಾರು, ಪ್ರಭು, ಸಾಗರ್, ಶಶಿ, ಚೇತನ್, ಅಜಿತ್, ನವೀನ್ ಇತರರು ಹಾಜರಿದ್ದರು.