- ಚಾರು ಜೀವಜಲ-ಮಾಧವ ಗಾಡ್ಗೀಳ್ ಸ್ಮರಣೆ ಕಾರ್ಯಕ್ರಮ
ಚಾಮರಾಜನಗರ: ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಮಣಿ ಸರ್ಕಾರಿ ಮಹಿಳಾ ಕಾಲೇಜಿನ ಸೂಕ್ಷ್ಮ ಜೀವಶಾಸ್ತ್ರವಿಭಾಗದ ಸಹ ಪ್ರಾಧ್ಯಾಪಕಿ ಡಾ.ಪಿ.ಆರ್.ವನಿತಾ ಹೇಳಿದರು.
ತಾಲೂಕಿನ ಆಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಚಾರು ಸಾಂಸ್ಕೃತಿಕ ಪ್ರತಿಷ್ಠಾನ ಮೈಸೂರು ವತಿಯಿಂದ ಚಾರು ಜೀವಜಲ-ಮಾಧವ ಗಾಡ್ಗೀಳ್ಸ್ಮ ರಣೆ ಕಾರ್ಯಕ್ರಮದಲ್ಲಿ ಅವರು ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅನಾಹುತಗಳು ಕುರಿತು ಉಪನ್ಯಾಸ ನೀಡಿದರು.
ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವುದಿಲ್ಲ. ಇದು ನೂರಾರು ವರ್ಷಗಳ ಕಾಲ ಹಾಗೆಯೇ ಉಳಿಯುತ್ತದೆ. ಸುಲಭವಾಗಿ ಮಣ್ಣು ಮತ್ತು ನೀರನ್ನು ಕಲುಷಿತಗೊಳಿಸುತ್ತದೆ. ಪ್ಲಾಸ್ಟಿಕ್ ಸುಟ್ಟಾಗ ಬರುವ ವಿಷಕಾರಿ ಹೊಗೆಯಿಂದ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳು ಬರುತ್ತವೆ. ಪ್ರಾಣಿಗಳು ಪ್ಲಾಸ್ಟಿಕ್ ತಿಂದರೆ ಉಸಿರುಗಟ್ಟಿ ಸಾಯುತ್ತವೆ. ಮೈಕ್ರೋ ಪ್ಲಾಸ್ಟಿಕ್ ನಮ್ಮ ಆಹಾರವನ್ನು ಸೇರಿ ಆರೋಗ್ಯವನ್ನು ಹಾಳುಮಾಡುತ್ತದೆ ಎಂದರು.
ಪ್ಲಾಸ್ಟಿಕ್ ತ್ಯಾಜ್ಯಗಳು ನದಿ ಮತ್ತು ಸಮುದ್ರ ಸೇರುವುದರಿಂದ ಜಲಚರಗಳಿಗೆ ತೊಂದರೆಯಾಗುತ್ತದ
ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳು ಮಾನವರಲ್ಲಿ ಹಾರ್ಮೋನ್ ಅಸಮತೋಲನ ಉಂಟುಮಾಡುತ್ತವೆ. ಇದರಿಂದ ಹೆಣ್ಣುಮಕ್ಕಳು ಚಿಕ್ಕವಯಸ್ಸಿನಲ್ಲೇ ಪ್ರೌಢ ವ್ಯವಸ್ಥೆ ಗೆ ಬರುತ್ತದೆ. ಶುಗರ್, ಕ್ಯಾನ್ಸರ್ ರೋಗ ಬರುತ್ತದೆ ಆಗಾಗಿ ಪ್ಲಾಸ್ಟಿಕ್ ಬಳಕೆಯಿಂದ ದೂರವಿರಬೇಕು ಎಂದರು.
ಚಾರು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ಶೀಲಾಕುಮಾರಿ ಮಾತನಾಡಿ, ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾವರಣದಲ್ಲಿ ಹಸಿರುಕರಣಗೊಳಿಸುವ ಉದ್ದೇಶದಿಂದ ನಮ್ಮ ಟ್ರಸ್ಟ್ ವತಿಯಿಂದ ಸಸಿಗಳನ್ನು ನಡೆಲಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅನಾಹುತಗಳು ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಉಂಟು ಮಾಡುವ ಸಲುವಾಗಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪ್ರೊ. ಮಾಧವ ಗಾಡ್ಗೀಳ್ ಅವರು ಭಾರತದ ಪ್ರಸಿದ್ಧ ಪರಿಸರ ವಿಜ್ಞಾನಿಯಾಗಿದ್ದು. ಅವರು ಭಾರತದ ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯದ ಮೌಲ್ಯಮಾಪನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.2010ರಲ್ಲಿ ರಚನೆಯಾದ ಪಶ್ಚಿಮಘಟ್ಟ ಪರಿಸರವಿಜ್ಞಾನ ಪರಿಣಿತರ ತಂಡದ
ಅಧ್ಯಕ್ಷರಾಗಿದ್ದರು. ಪಶ್ಚಿಮಘಟ್ಟವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಿ, ಅಲ್ಲಿನ ಅಪೂರ್ವ ಜೀವವೈವಿಧ್ಯವನ್ನು ಉಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಶಿಫಾರಸು ಮಾಡಿದರು. ಅವರ ಸ್ಮರಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದರು.
ಕಾಲೇಜು ಪ್ರಾಂಶುಪಾಲ ತಿಮ್ಮರಾಜು ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕ ಪ್ರಭುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಆರ್.ಮಹದೇವಸ್ವಾಮಿ,ಸಿ ಆರ್ ಪಿ ನಂಜುಂಡಸ್ವಾಮಿ ಶಿಕ್ಷಕರಾದ ಸಿದ್ದರಾಜು,ಮಹೇಶ್ವರಿ, ಮಂಜುಳಾ, ಸುಮಾ ಚೌಧರಿ, ರವಿ, ವೆಂಕಟೇಶ್, ರಂಜಿತ, ನಿವೃತ್ತ ಶಿಕ್ಷಕ ನಂಜುಂಡಸ್ವಾಮಿ ಹಾಗೂ ಮಕ್ಕಳು ಹಾಜರಿದ್ದರು.
ಇದಕ್ಕೂ ಮುನ್ನಾ ಶಾಲಾವರಣದಲ್ಲಿ ಚಾರು ಸಾಂಸ್ಕೃತಿಕ ಪ್ರತಿಷ್ಠಾನ ಸಸಿಗಳನ್ನು ನಡೆಲಾಯಿತು.