ಉದ್ಯಮಿ ಶ್ರೀನಿಧಿಕುದರ್ ಹುಟ್ಟುಹಬ್ಬ: ವಿದ್ಯಾರ್ಥಿಗಳು ಸೇರಿದಂತೆ 4 ಸಾವಿರ ಮಂದಿಗೆ ಭೋಜನ ವ್ಯವಸ್ಥೆ

ಚಾಮರಾಜನಗರ : ಉದ್ಯಮಿ, ಸಮಾಜಸೇವಕ ಶ್ರೀನಿಧಿಕುದರ್‌ ಹುಟ್ಟುಹಬ್ಬ, ರುಕ್ಕಿಣಿ ಮರಣ್ಣ ಶಾಪಿಂಗ್ ಕಾಂಪ್ಲೆಕ್ಸ್ ಪ್ರಾರಂಭೋತ್ಸವದ ಅಂಗವಾಗಿ ತಾಲೂಕಿನ ಚಂದಕವಾಡಿಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 4 ಸಾವಿರ ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಯಿತು.
ಅಲ್ಲದೆ ರಸ್ತೆಯ ಬದಿಯಲ್ಲಿ ಸಾಲು ಸಸಿಗಳನ್ನು ನೆಟ್ಟು ನೀರೆರೆಯಲಾಯಿತು. ಶ್ರೀನಿಧಿ ಕುದರ್ ಅವರಿಗೆ ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳ ಪ್ರಮುಖರು ಚಂದಕವಾಡಿ ಹೋಬಳಿಯ ಹೋಬಳಿ ವಿವಿಧ ಗ್ರಾಮದ ಯಜಮಾನರುಗಳು,
ಪ್ರಮುಖರು, ಹಿತೈಷಿಗಳು, ಅಭಿಮಾನಿಗಳು ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

Leave a Reply

Your email address will not be published. Required fields are marked *