- ಚಂದ್ರು ಸೇವಾ ಕಾರ್ಯವನ್ನು ಹೊಗಳಿ ಕೊಂಡಾಡಿದ ರೋಟರಿಯ ಪದಾಧಿಕಾರಿಗಳು, ಸದಸ್ಯರು
ಚಾಮರಾಜನಗರ : ಚಾಮರಾಜನಗರ ರೋಟರಿ ಸಂಸ್ಥೆಯಲ್ಲಿ 2025-26ನೇ ಸಾಲಿನ ಅಧ್ಯಕ್ಷರಾದ ಕಾಗಲವಾಡಿ ಚಂದ್ರು ತಮ್ಮ ಅವಧಿಯಲ್ಲಿ 310 ಕಾರ್ಯಕ್ರಮಗಳನ್ನು ಮಾಡುವ ಮಾದರಿ ಅಧ್ಯಕ್ಷರಾಗಿದ್ದಾರೆ ಎಂದು ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗೌರರ್ ಡಾ .ನಾಗಾರ್ಜುನ್ ಹೇಳಿದರು.
ನಗರದ ಮೈಸೂರಿನ ರಸ್ತೆಯಲ್ಲಿರುವ ಶ್ರೀದೇವಿ ಗಾರ್ಡನ್ ನಲ್ಲಿರೋಟರಿ ಸಂಸ್ಥೆಯ ಮಂಗಳವಾರದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಚಂದ್ರು ಅವರು ಹಲವಾರು ಕನಸನ್ನು ಕಂಡಿದ್ದರು. ಆ ಕನಸನ್ನು ಯಾವ ರೀತಿಯಲ್ಲಿ ಅನುಷ್ಠಾನಗೊಳಿಸುವ ಕುರಿತು ಯೋಚನೆ ಮಾಡಿ ಅದ್ಭುತವಾದ ರೀತಿಯಲ್ಲಿ ಸೇವಾ ಕಾರ್ಯ ಮಾಡಿದ್ದಾರೆ. ಅವರ ಕೈ ಮೀರಿ ಕೆಲಸ ಮಾಡಿದ್ದಾರೆ. ರೋಟರಿ ಸದಸ್ಯರಿಗೆ ಮೊದಲಿನಿಂದಲ್ಲೂ ಹೇಳುತ್ತಿದ್ದೆ ದೊಡ್ಡದೊಡ್ಡ ಕನಸುಗಳನ್ನು ಕಾಣಿ ಎಂದು ಹಣದ ಬಗ್ಗೆ ಯೋಚನೆ ಮಾಡಬೇಡಿ. ಹೆಂಗಾದರೂ ಬರುತ್ತೆ ಅಂಥಾ ಹೇಳಿದೆ. ಚಂದ್ರು ಅವರು ಸುಮಾರು 13ರಿಂದ 15 ಲಕ್ಷ ವೆಚ್ಚದ ಕೃತಕ ಕೈ-ಕಾಲು ಜೋಡನಾ ಶಿಬಿರವನ್ನು ಮಾಡಿ ಯಶ್ವಸಿಯಾದರು.. ನಮ್ಮ ಮನವಿಗೆ ಶಾಸಕರು ಪುಟ್ಟರಂಗಶೆಟ್ಟರು ಸ್ಪಂದಿಸಿ ಎಂಎಸ್‌ಐಎಲ್‌ನಿಂದ 8 ಲಕ್ಷ ಕೊಟ್ಟರು. ಚಂದ್ರ ಅವರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ನಾಯಕತ್ವ ಗುಣ ಚೆನ್ನಾಗಿದೆ ಅವರು ರೋಟರಿ ಅಧ್ಯಕ್ಷರಾಗಿ ಮಾದರಿಯಾಗಿದ್ದಾರೆ. ಮುಂದೆ ರೋಟರಿ, ಇತರ ರಾಜಕೀಯ. ಕ್ಷೇತ್ರದಲ್ಲಿ ದೊಡ್ಡನಾಯಕರಾಗಿ ಬೆಳೆಯಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಸಂಸ್ಥಾಪಕ ಸದಸ್ಯರಾದ ಜಿ.ಆರ್.ಆಶ್ವಥ್‌ನಾರಾಯನ್, ಸಿ.ವಿ.ಶ್ರೀನಿವಾಸಶೆಟ್ಟಿ, ಹಾಗೂ ಪದಾಧಿಕಾರಿಗಳು, ಸದಸ್ಯರು ಮಾತನಾಡಿ, ಚಂದ್ರು ಅವರ ಸೇವಾಕಾರ್ಯಗಳನ್ನು ಕೊಂಡಾಡಿದರು. ಅವರು 310 ಕಾರ್ಯಕ್ರಮಗಳನ್ನು ಮಾಡಿದ್ದರಿಂದ ಚಾಮರಾಜನಗರ ರೋಟರಿ ಸಂಸ್ಥೆಗೆ ಪ್ರಶಸ್ತಿ ಬಂದಿದೆ ಇದು ನಮ್ಮ ರೋಟರಿ ಹೆಮ್ಮೆ ತಂದಿದೆ ಎಂದರು.
ಚಾಮರಾಜನಗರ ರೋಟರಿ ಕಣ್ಣಿನ ಆಸ್ಪತ್ರೆ..: ಅಧ್ಯಕ್ಷತೆ ವಹಿಸಿ, ಅಭಿನಂದನೆ ಸ್ವೀಕರಿಸಿದ ರೋಟರಿ ಅಧ್ಯಕ್ಷ ಕಾಗಲವಾಡಿ
ಮಾತನಾಡಿ, ರೋಟರಿ ಸಂಸ್ಥೆಯ ಪದಾಧಿ ಕಾರಿಗಳು, ಸದಸ್ಯರೆಲ್ಲ ಸಹಕಾರದಲ್ಲಿ 310 ಕಾರ್ಯಕ್ರಮ ಮಾಡಲು ಸಾಧ್ಯವಾಯಿತು. ಆಗಾಗಿ ಎಲ್ಲರಿಗೂ ಈ ಮೂಲಕ ಕೃತಜ್ಞನೆ ಸಲ್ಲಿಸುತ್ತೇನೆ. ಮುಂದಿನ ವರ್ಷದಲ್ಲಿ ಮುಂದಿನ ಅಧ್ಯಕ್ಷರಾದ ಅಬ್ದುಲ್‌ಅಜೀಕ್ ಅವರೊಂದಿಗೆ ಸೇರಿಕೊಂಡು ಚಾಮರಾಜನಗರ ರೋಟರಿ ಕಣ್ಣಿನ ಆಸ್ಪತ್ರೆ ಮಾಡೆ ಮಾಡುತ್ತೇವೆ ಎಂದರು.
ಸಭೆಯಲ್ಲಿ ರೋಟರಿ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು