“ಚಿರಂತನ” ರಾಜ್ಯ ಮಟ್ಟದ ಅಂತರ ಕಾಲೇಜು ಸಾಹಿತ್ಯ ಸ್ಪರ್ಧೆ

ಮೈಸೂರಿನ ಹಿಂದೂಸ್ಥಾನ್ ಕಾಲೇಜಿನಲ್ಲಿ ಬುಧವಾರದಂದು ಹಿಂದೂಸ್ಥಾನ್ ಕಾಲೇಜು, “ಚಿರಂತನ” ರಾಜ್ಯ ಮಟ್ಟದ ಅಂತರ ಕಾಲೇಜು ಸಾಹಿತ್ಯ ಸ್ಪರ್ಧೆಯ ಅಂಗವಾಗಿ ಜನಪದಗೀತೆ ಸ್ಪರ್ಧೆ, ಬಹುಆಯ್ಕೆ ಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ವಿವಿಧ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ 70ಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಹಿಂದೂಸ್ಥಾನ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಜೆ. ಪ್ರಿಯಾ ಮೇಡಂ, ಭಾಷಾ ವಿಭಾಗದ ಮುಖ್ಯಸ್ಥರು ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಶಿವಕುಮಾರ್ ಆರ್., ಎಂ.ಸಿ.ಎ. ಸಂಯೋಜಕರಾದ ಹೇಮಂತ್ ಕುಮಾರ್ ಬಿ.ಎನ್., ತೀರ್ಪುಗಾರರಾಗಿ ಕಾಲೇಜಿನ ಗಣಕ ವಿಜ್ಞಾನ ಸಹಾಯಕ ಪ್ರಾಧ್ಯಾಪಕರಾದ ವಿನಂತಿ ಎಸ್., ಹಿಂದೂಸ್ಥಾನ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಪರಮೇಶ ಕೆ., ಸಾಹಿತ್ಯ ಕಾರ್ಯದರ್ಶಿಯಾದ ಮಾನಸ ಕೆ. ಎಂ. ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *