ಚಾಮರಾಜನಗರ : ಗೌರವಧನದ ಆಧಾರದ ಮೇಲೆ ಮುಂದುವರಿಸುವಂತೆ ಒತ್ತಾಯಿಸಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಷ್ಟ್ರೀಯನಗರ ಜೀವನೋಪಾಯ ಅಭಿಯಾನ(ಡೇ-ನಲ್ಮ್) ದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರ ಮುಖಾಂತರ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಷ್ಟ್ರೀಯನಗರ ಜೀವನೋಪಾಯ ಅಭಿಯಾನ(ಡೇ-ನಲ್ಮ್) ದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ನಮ್ಮನ್ನು 15.06.2026 ರ ಪತ್ರದಲ್ಲಿ ಪಿ.ಎಂ.ಸ್ವ-ನಿಧಿ ಯೋಜನೆಯ ವಿಸ್ಮತ ಕಾರ್ಯಾಚರಣಾ ವಿಧಾನ ಎಸ್ ಒಪಿ ಗಳ ಮಾರ್ಗಸೂಚಿಯಂತೆ ಸಂಪನ್ಮೂಲವ್ಯಕ್ತಿ ಆರ್ ಪಿ ಗಳಾಗಿ ತೊಡಗಿಸಿಕೊಳ್ಳುವಂತೆ ತಿಳಿಸಿರುತ್ತಾರೆ.
ಅದರಂತೆ 5 ನಗರಸ್ಥಳೀಯ ಸಂಸ್ಥೆಗಳಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ಗೌರವಧನದ ಮೇಲೆ ಆಯ್ಕೆಯಾಗಿ ಸುಮಾರು 4 ವರ್ಷಗಳಿಂದ ಕರ್ತವ್ಯನಿರ್ವಹಿಸುತ್ತಿರುವ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ನಾವು ಕೇಂದ್ರ ಮತ್ತು ರಾಜ್ಯಸರ್ಕಾರದ ವಿವಿಧ ಯೋಜನೆಗಳಾದ ಡೇ-ನಲ್ಡ್, ಪಿ.ಎಂ. ಸ್ವ-ನಿಧಿ. ಸ್ವ-ನಿಧಿ ಸೇ ಸಮೃದ್ಧಿ, ಪಿ.ಎಂ.ಎಫ್.ಎಂ.ಇ. ಅಮೃತ್ ಮಿತ್ರ ಯೋಜನೆಗಳ ಅನುಷ್ಠಾನದ ಕಾರ್ಯದ ಜೊತೆಗೆಕ್ಷೇತ್ರದ ಮಟ್ಟದಲ್ಲಿ ಮಹಿಳಾ ಸ್ವಸಹಾಯಸಂಘಗಳನ್ನು ರಚಿಸುವುದು ಮತ್ತು ಅವರ ಆರ್ಥಿಕ ಮಹಿಳಾಸಬಲೀಕರಣದ ಜೊತೆಗೆ ನಗರಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ,ಮುಖ್ಯಾಧಿಕಾರಿಗಳು ಸೂಚಿಸುವ ಸರ್ವೆ, ಚುನಾವಣೆ, ಗೃಹಲಕ್ಷ್ಮಿ ಮತ್ತು ಯುವನಿಧಿ, ಯೋಜನೆಗಳ ಜೊತೆಗೆ ಸ್ವಚ್ಛಭಾರತ್ ಮಿಷನ್, ಜಾಥಾ ಕಾರ್ಯಾಕ್ರಮದಲ್ಲಿ ಭಾಗವಹಿಸುವುದು ಮುಂತಾದ ಕಲಸಗಳನ್ನು ನಿರ್ವಹಿಸುತ್ತಿದ್ದವೆ.
ಪ್ರಸ್ತುತ 10 ಸಾವಿರ ರೂ. ಗೌರವಧನದ ಆಧಾರದಲ್ಲಿಯೇ ಈ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿರುವುದರಿಂದ ನಮ್ಮನ್ನು
ನಗರಸ್ಥಳೀಯ ಸಂಸ್ಥೆಗಳ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಅಥವಾ ಕೇಂದ್ರ ಪುರಸ್ಕೃತ ಯೋಜನೆಗಳು ಅಥವಾ ನಗರ ಸ್ಥಳೀಯ ಸಂಸ್ಥೆಗಳ ನಿಧಿಯಿಂದ ಗೌರವಧನ ಭರಿಸುವಂತೆ ಮತ್ತು ನಮ್ಮ ಸೇವೆಯನ್ನು ಗೌರವಧನದ ಆಧಾರದ ಮೇಲೆಯೆ ಮುಂದುವರೆಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿಗಳು ಮುಖಾಂತರ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರಿಗೆ ಸಲ್ಲಿಸಿರುವ ಮನವಿಯಲ್ಲಿ ಸಿಆರ್ ಪಿ ಗಳಾದ ನರ್ಗೀಸ್ ಬಾನು, ಜ್ಯೋತಿ, ರೂಪ,ಪಲ್ಲವಿ, ಸುಮಾ, ಶಬ್ರಿನ್, ಪೂಜಾ, ಪುಷ್ಷಲತಾ,ಜಯಶೀಲ ಒತ್ತಾಯಿಸಿದ್ದಾರೆ.