- ನಂಜೇದೇವನಪುರ ಡೇರಿಗೆ 3.42 ಲಕ್ಷ ರೂ. ನಿವ್ವಳ ಲಾಭ ; 1.59 ಲಕ್ಷ ರೂ. ಬೋನಸ್ ವಿತರಣೆ : ಶ್ರೀಕಂಠಕುಮಾರ್
ಚಾಮರಾಜನಗರ: ಹೈನುಗಾರಿಕೆ ರೈತರಿಗೆ ನಿಶ್ವಿತ ಆದಾಯವನ್ನು ನೀಡುವ ಹಾಗು ಕುಟುಂಬದ ಅರ್ಥಿಕ ಅಭಿವೃದ್ದಿಯನ್ನು ಹೆಚ್ಚಿಸುವ ಉದ್ಯಮವಾಗಿದೆ ಎಂದು ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ತಿಳಿಸಿದರು.
ತಾಲೂಕಿನ ನಂಜೇದೇವನಪುರ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ಸಂಘಕ್ಕೆ ಹೆಚ್ಚು ಹಾಲು ಪೊರೈಕೆ ಮಾಡಿದ ಮೂವರು ರೈತರಿಗೆ ಬಹುಮಾನ ನೀಡಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಇಂದು ಯುವಕರು ಸ್ವಾವಲಂಬನೆಯಿAದ ಜೀವನ ನಡೆಸಲು ಹೈನುಗಾರಿಕೆ ಉತ್ತಮ ಮಾರ್ಗವಾಗಿದೆ. ಅಕಾಲಿಕ ಮಳೆ ಹಾಗೂ ಕೃಷಿಯಲ್ಲಿ ಏರುಇಳಿತಗಳಿಂದ ರೈತರು ತೊಂದರೆ ಅನುಭವಿಸಿದ್ದೆ ಹೆಚ್ಚು. ಹೀಗಾಗಿ ಹೈನುಗಾರಿಕೆಯನ್ನು ಮುಖ್ಯ ಕಸುಬಾಗಿಸಿಕೊಂಡು ವೈಜ್ಞಾನಿಕ ಮತ್ತು ತಾಂತ್ರಿಕತೆಯನ್ನು ಅಳವಡಿಸಿಕೊಂಡು ಹೈನುಗಾರಿಕೆ ಮಾಡಿದರೆ, ಉತ್ತಮ ಲಾಭವನ್ನು ಪಡೆಯಲು ಸಾಧ್ಯವಿದೆ. ಪ್ರತಿ ಡೇರಿಗಳಲ್ಲಿ ಹೆಚ್ಚಿನ ಹಾಲು ಸಂಗ್ರಹವಾಗುತ್ತಿರುವುದು ಹಾಗೂ ಯುವಕರು ಹೈನುಗಾರಿಕೆಯತ್ತ ಮುಖ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಉತ್ತಮ ರೀತಿಯಲ್ಲಿ ಹಸುಗಳನ್ನು ಸಾಕಾಣಿಕೆ ಮಾಡಿ, ಗುಣಮಟ್ಟದ ಪಶು ಆಹಾರ ಮತ್ತು ಕೊಟ್ಟಿಗೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿಕೊಂಡು ಪ್ರತಿ ದಿನ ರಾಸುಗಳ ಯೋಗಕ್ಷೇಮ ನೋಡಿಕೊಂಡು ಹೋದರೆ, ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದರು.
ಮತ್ತೋರ್ವ ನಿರ್ದೇಶಕ ಎಚ್.ಎಸ್. ಬಸವರಾಜು ಮಾತನಾಡಿ, ಚಾಮುಲ್ ರಚನೆಯಿಂದ ಚಾಮರಾಜನಗರ ಜಿಲ್ಲೆಯ ರೈತರ ಬದುಕು ಹಸನಾಗುತ್ತಿದೆ. ನೀವು ಡೇರಿಗೆ ಹಾಕುವ ಹಾಲು ಕುದೇರಿನ ಒಕ್ಕೂಟದಲ್ಲಿ ಹಾಲು, ಮೊಸರು, ತುಪ್ಪ, ಬೆಣ್ಣೆ ಹಾಗೂ ಇತರೇ ಸಿಹಿ ಉತ್ಪನ್ನಗಳನ್ನು ತÀಯಾರು ಮಾಡಿ ಮಾರಾಟ ಮಾಡಲಾಗುತ್ತದೆ. ಜೊತೆಗೆ ನೀವು ನೀಡುವ ಗುಣಮಟ್ಟ ಹಾಲು ಸಂಸ್ಕರಣೆಗೊAಡು ಟಾಡ್ರಾ ಪ್ಯಾಕೆಟ್‌ನಲ್ಲಿ ದೇಶ ಕಾಯುವ ಸೈನಿಕರು, ಹೊರ ರಾಜ್ಯ ಹಾಗು ದೇಶಗಳಿಗೆ ರಪ್ತು ಆಗಿದೆ. ಈಗ ಚಾಮುಲ್‌ನಲ್ಲಿ ಐಸ್‌ಕ್ರೀಂ ಘಟಕವನ್ನು ಆರಂಭಿಸಲು ಅನುಮೋದನೆಯಾಗಿದೆ. 40 ಎಕರೆ ಪ್ರದೇಶದಲ್ಲಿರುವ ಘಟಕ ನಿರ್ಮಾಣವಾಗಿದ್ದು, ತಾವೆಲ್ಲರು ಒಮ್ಮೆ ಬಂತು ವೀಕ್ಷಣೆ ಮಾಡಿ ಎಂದು ಆಹ್ವಾನ ನೀಡಿದರು.
ಸಂಘದ ಅಧ್ಯಕ್ಷ ಶ್ರೀಕಂಠಕುಮಾರ್ ಮಾತನಾಡಿ ನಮ್ಮ ಸಂಘವು ಉತ್ತಮವಾಗಿ ವಹಿವಾಟು ನಡೆಸಿ, ಪ್ರಸಕ್ತ ವರ್ಷದಲ್ಲಿ 1.30 ಕೋಟಿ ರೂ. ರೂ.ಗಳ ಹಾಲು ಖರೀದಿ ಮಾಡಿದೆ. 3.42 ಲಕ್ಷ ರೂ.ಗಳ ನಿವ್ವಳ ಲಾಭ ಬಂದಿದ್ದು, ಸದಸ್ಯರಿಗೆ 1.59 ಲಕ್ಷ ರೂ. ಗಳ ಬೋನಸ್ ಅನ್ನು ವಿತರಣೆ ಮಾಡಲಾಗುತ್ತದೆ ಎಂದರು. ಚಾಮುಲ್ ಇಬ್ಬರು ನಿರ್ದೇಶಕರು ನಮ್ಮ ಡೇರಿಗೆ ಅನುದಾನ ನೀಡಿ, ಹಾಲು ಸಂಗ್ರಹ ಸೆಂಟರ್ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಎನ್.ಬಿ. ಮಹದೇವಕುಮಾರ್ ವಾರ್ಷಿಕ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ನಂಜೇದೇವನಪುರ ದಾಸೋಹ ಮಠಾಧ್ಯಕ್ಷರಾದ ಶ್ರೀ ರಾಜೇಂದ್ರಸ್ವಾಮೀಜಿ, ಚಾಮುಲ್ ಉಪ ವ್ಯವಸ್ಥಾಪಕ ಡಾ. ಅಮರ್, ವಿಸ್ತರಣಾಧಿಕಾರಿ ನಾಗೇಶ್, ಹಿರಿಯ ಮುಖಂಡ ಪಿ. ರಾಜಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ. ಶೇಖರ್, ಸಂಘದ ಉಪಾಧ್ಯಕ್ಷ ಪರಶಿವಪ್ಪ, ನಿರ್ದೇಶಕರಾದ ಜಯಶಂಕರ, ಎಂ. ನಟರಾಜು, ರೇಚಪ್ಪ, ವೀರೇಗೌಡ, ಮಹದೇವನಾಯಕ, ರಂಗಯ್ಯ, ನಾಗಮ್ಮ, ರಾಜಮ್ಮ, ರತ್ನಮ್ಮ, ನೌಕರರಾದ ಮಹದೇವಪ್ಪ, ಮಲ್ಲಪ್ಪ ಹಾಗೂ ಸರ್ವ ಸದಸ್ಯರು ಇದ್ದರು.
