- ಮನವಿ ಸಲ್ಲಿಸಿದರು ಬೀದಿಗೆ ಭೇಟಿ ನೀಡದ ಜಿಲ್ಲಾಧಿಕಾರಿ : ಮಹದೇವಯ್ಯ ಆರೋಪ
ಚಾಮರಾಜನಗರ: ನಗರದ ಸೋಮವಾರಪೇಟೆಯ1ನೇ ವಾರ್ಡ್ ನ ಸತ್ತಿ ಮುಖ್ಯರಸ್ತೆಯ ಕುಂಬಾರಶೆಟ್ಟರ ಬೀದಿಯಲ್ಲಿ
ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ತೀವ್ರ ಅಭಾವ ತಲೆದೋರಿದ್ದು, ನಿವಾಸಿಗಳು ಹನಿನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ವಿರುದ್ಧ ನಿವಾಸಿಗಳು ಖಾಲಿ ಬಿಂದಿಗೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಬೀದಿಯಲ್ಲಿ ಜಮಾಯಿಸಿದ ನಿವಾಸಿಗಳು ಜಮಾಯಿಸಿ ಖಾಲಿ ಬಿಂದಿ ಹಿಡಿದು ಬೀದಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ಬೀದಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ, ಇದರ ಬಗ್ಗೆ ನಗರಸಭೆ ಅಧಿಕಾರಿಗಳು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ.ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿಗಾಗಿ ಕಿಲೋ ಮೀಟರ್ ಗಟ್ಟಲೆ ದೂರ ಅಲೆಯಬೇಕಾದ ಸ್ಥಿತಿ ಬಂದೊದಗಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಕೂಲಿಗೂ ಹೋಗಕ್ಕೆ ಆಗುತ್ತಿಲ್ಲ.ಜೀವನ ಮಾಡಲು ತೊಂದರೆ ಆಗುತ್ತಿದೆ ಎಂದು ಮಹಿಳೆಯರು ಅಳಲನ್ನು ತೋಡಿಕೊಂಡರು.
ಬೀದಿಯಲ್ಲಿ ಬೋರ್ ಕೆಟ್ಟು ವಾರಗಳೇ ಕಳೆದಿದ್ದು, ಮೋಟಾರ್ ಬಿಚ್ಚುಕೊಂಡು ಹೋಗಿ ವಾರಗಳೆ ಕಳೆದಿದೆ.ಕೆಟ್ಟು ಹೋಗಿರುವ ಬೋರ್‌ವೆಲ್ ದುರಸ್ತಿ ಮಾಡಬೇಕು ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅಲ್ಲದೆ ಬೀದಿಯ ರಸ್ತೆ, ಸ್ವಚ್ಚತೆ, ಹೂಳು ತುಂಬಿ ಗಬ್ಬುನಾರುತ್ತಿರುವ ಚರಂಡಿಗಳಲ್ಲಿ ಹೂಳು ತೆಗೆಸಿಕೊಡಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ನಗರಸಭಾ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ನಿವಾಸಿ ಮಹದೇವು ಎಚ್ಚರಿಸಿದ್ದಾರೆ.
ನಗರಸಭಾ ಮಾಜಿ ಸದಸ್ಯ ಮಹದೇವಯ್ಯ ಮಾತನಾಡಿ, ಸೋಮವಾರಪೇಟೆಯ 1ನೇ ವಾರ್ಡ್‌ನ ಕುಂಬಾರಶೆಟ್ಟರ ಬೀದಿಯಲ್ಲಿ ಒಂದು ಬೋರ್ ಹಾಕಿಸಿದರು ಅದು ಸರಿಯಾಗಿ ಸದ್ಬಳಕೆ ಆಗುತ್ತಿಲ್ಲ. ಮತ್ತೆ ಮೂರು ಮೂರು ದಿನಕ್ಕೂ ರಿಪೇರಿಗೆ ಬರುತ್ತದೆ. ಅದನ್ನು ಸರಿಪಡಿಸಿ ಬೇಗ ಅಳವಡಿಸಿ ನೀರು ಕೊಡುವ ಕೆಲಸ ಮಾಡುತ್ತಿಲ್ಲ. ಕಾವೇರಿ ನೀರು ಕೆಟ್ಟು ಒಂದು ವಾರವಾಯಿತು. ನಗರಸಭಾ ಪೌರಾಯುಕ್ತರು, ಇಂಜಿನಿಯರ್ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ. ವಾರ್ಡ್‌ನ ಸಮಸ್ಯೆಗೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಯಾವುದೇ ಪ್ರಯೋಜನವಾಗಿಲ್ಲ. ನಗರಸಭಾ ಅಧಿಕಾರಿಗಳಾಗಲಿ, ಜಿಲ್ಲಾಧಿಕಾರಿಗಳಾಗಲಿ ವಾರ್ಡ್‌ಗೆ ಭೇಟಿ ನೀಡಿ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ನಿವಾಸಿಗಳಾದ ರತ್ನಮ್ಮ, ಶೀಲಮ್ಮ, ಗಾಯಿತ್ರಿ,ಗೌರಮ್ಮ, ಶಿವನಾಗಮ್ಮ, ಮಹದೇವು, ಜಯಮ್ಮ,ಭಾಗ್ಯಮ್ಮ ಇತರರು ಹಾಜರಿದ್ದರು.