
ಚಾಮರಾಜನಗರ: ಜಿಲ್ಲೆಯಲ್ಲಿರುವ ಎಲ್ಲಾ ನೃತ್ಯ ಪ್ರತಿಭೆಗಳನ್ನು ಸೂಕ್ತ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ಹೊರ ಚೆಲ್ಲಿ ಎಂದು ಅವತಾರ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ ತಂಡದ ವ್ಯವಸ್ಥಾಪಕ ಅವತಾರ್ ಪ್ರವೀಣ್ ತಿಳಿಸಿದರು
ಚಾಮರಾಜನಗರ ಜಿಲ್ಲೆ ನೃತ್ಯ ಸಂಯೋಜಕರು ಹಾಗೂ ನೃತ್ಯ ಕಲಾವಿದರ ಸಂಘದ ವತಿಯಿಂದ ಏರ್ಪಡಿಸಿದ 2026 ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಅವತಾರ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಕಲಾವಿದರು ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಗೆ ಚಾಂಪಿಯನ್ ಆಗಿದ್ದಾರೆ ಒಂದು ಲಕ್ಷದ ನೆಗದು ಹಾಗೂ ಟ್ರೋಫಿ ಪ್ರಶಸ್ತಿ ಪತ್ರ ಗಳಿಸಿದ್ದಾರೆ. ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ನೃತ್ಯ ಸಂಯೋಜಕ ಹಾಗೂ ನೃತ್ಯ ಕಲಾವಿದರ ಸಂಘದ ಅಧ್ಯಕ್ಷ ಪ್ರವೀಣ್ ತಿಳಿಸಿದ್ದಾರೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೆ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಬಂಗಾರು ಮಾತನಾಡಿ ಜನಪದ ತವರು ದಿನೇನು ನಿತ್ಯ ಒಂದೆಲ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನೀಡುತ್ತಿರುವುದು ಮೆಚ್ಚಿಗೆ ವಿಷಯ ಪವಾಡ ಪುರುಷರು, ಈಪುಣ್ಯಭೂಮಿಯಲ್ಲಿ ಜನಿಸಿರುವ ಹಿನ್ನೆಲೆ ಜಿಲ್ಲೆಯ ಕಲಾವಿದರು ರಾಜ್ಯ, ಹೊರರಾಜ್ಯ ದೇಶವಿದೇಶಗಳಲ್ಲಿ ಭಾಗವಹಿಸಿ ತಮ್ಮ ನೃತ್ಯದ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ವಿಶೇಷವಾಗಿ ಪ್ರವೀಣ್ ರಾಮಸಮುದ್ರದ ಪ್ರತಿಭೆ ಈಗಾಗಲೇ ಉತ್ತಮ ಸಾಧನೆ ಮಾಡಿದ್ದಾರೆ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ತಿಳಿಸಿದ ಅವರು ಪ್ರಶಸ್ತಿ ಗಳಿಸಿರುವ ಎಲ್ಲಾ ಪುಟಾಣಿ ಮಕ್ಕಳಿಗೆ ಶುಭಾಶಯ ತಿಳಿಸಿದರು. ಸಂಸ್ಥೆಯ ಪದಾಧಿಕಾರಿಗಳು ಪೋಷಕರು ಹಾಜರಿದ್ದರು .