ವಿದ್ಯಾರ್ಥಿಗಳು  ಸರ್ಕಾರ, ದಾನಿಗಳು ನೀಡುವ ಸೌಲಭ್ಯಗಳನ್ನು ಪಡೆದು ಚೆನ್ನಾಗಿ ಓದಬೇಕು : ಡಾ.ಭಾನುಪ್ರತಾಪ್

  • ಮಂಗಲದ ಹೊಸೂರು ಸರ್ಕಾರಿ  ಶಾಲೆಯ ‌ಮಕ್ಕಳಿಗೆ ದಾನಿಗಳಿಂದ ಸಮವಸ್ತ್ರ ವಿತರಣೆ

ಚಾಮರಾಜನಗರ: ತಾಲೂಕಿನ ಮಂಗಲದ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ‌ಮಕ್ಕಳಿಗೆ ದಾನಿಗಳಾದ ಡಾ.ಭಾನುಪ್ರತಾಪ್, ತಹಸೀಲ್ದಾರ್ ಸಿದ್ದಾರ್ಥ ಶರ್ಮಾ ಅವರ ವತಿಯಿಂದ ಸಮವಸ್ತ್ರ ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ  ದಾನಿ ಡಾ.ಆರ್. ಭಾನುಪ್ರತಾಪ್ ಮಾತನಾಡಿ,ನನ್ನಲ್ಲಿ ಒಂದು ಪರಿಕಲ್ಪನೆ ಇದೆ ಅದು ಕೆರೆಯ ನೀರನ್ನು ಕೆರೆಗೆ ಚಲ್ಲ ಬೇಕು ಅನ್ನುವದು. ನನಗೆ ನನ್ನ ತಂದೆ, ತಾಯಿ ಶಿಕ್ಷಣ ಕೊಡಿಸಿದರೆ. ಅ ಶಿಕ್ಷಣವನ್ನು ನಮ್ಮ ತಂದೆ, ತಾಯಿಗಳು ಇದೇ ಶಾಲೆಯಲ್ಲಿ ಪಡೆದಿರುವಂತಹದ್ದು, ಆಗಾಗಿ ಶಾಲೆಗೆ ಈ ಗ್ರಾಮದ ಮಗನಾಗಿ ನಾನು ಗ್ರಾಮಕ್ಕೆ ಏನಾದರೂ ಮಾಡಬೇಕು ಎಂಬ ಹಂಬಲವಿತ್ತು.ಅಷ್ಠಕ್ಕೆ ಶಾಲೆ ಮುಖ್ಯಶಿಕ್ಷಕರಾದ ಪುಟ್ಟಸ್ವಾಮಿ ಅವರು ಶಾಲೆಗೆ ನಿಮ್ಮ ಕಡೆಯಿಂದ ಏನಾದರೂ ಸಹಾಯ ಮಾಡಿಸಿಕೊಡುವಂತೆ ಮನವಿ ಮಾಡಿದರು ಅದರಂತೆ ಶಾಲೆಯ ಮಕ್ಕಳಿಗೆ ಸಮವಸ್ತ್ರ ಹೊಲಿಸಿಕೊಡಲಾಗಿದೆ. ವಿದ್ಯಾರ್ಥಿಗಳು  ದಾನಿಗಳು, ಸರ್ಕಾರ ನೀಡುವ ಸಲವತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಚೆನ್ನಾಗಿ ಓದಿಗೆ ಶಾಲೆಗೆ, ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು. ಮುಂದೆಯೂ ಕೂಡ ಗ್ರಾಮಕ್ಕೆ, ಗ್ರಾಮದ ಶಾಲೆಗೆ ಸಹಾಯ ಮಾಡುವುದಾಗಿ ತಿಳಿಸಿದರು.
ಗ್ರಾ.ಪಂ.ಮಾಜಿ.ಸದಸ್ಯ ರಾಜು, ಡಾ. .ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಮಂಗಲದ ಹೊಸೂರು ಶಿವಣ್ಣ ಮಾತನಾಡಿ, ಶಾಲೆಯ ಮುಖ್ಯಶಿಕ್ಷಕ ಪುಟ್ಟಸ್ವಾಮಿ ಅವರು ಸರ್ಕಾರ ಯೋಜನೆಗಳ ಜೊತೆಯಲ್ಲಿ ದಾನಿಗಳ ನೆರವು ಪಡೆದು ಶಾಲೆಯ ಅಭಿವೃದ್ಧಿಗೆ, ಮಕ್ಕಳಿಗೆ ಸಮವಸ್ತ್ರ, ನೋಟ್ ಪುಸ್ತಕ, ಲೇಖನ ಸಾಮಾಗ್ರಿಗಳನ್ನು ಕೊಡಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಗ್ರಾಮದ ಡಾ.ಭಾನುಪ್ರತಾಪ್ ಅವರು, ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿರುವುದು ಒಳ್ಳೆಯ ಕೆಲಸವಾಗಿದೆ ಮುಂದೆಯೂ ಗ್ರಾಮ, ಶಾಲೆಗೆ ಹೆಚ್ಚಿನ ಸಹಾಯ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಡಾ. ಪಿ.ವಿನುತಾ, ಚಂದ್ರಲೀಲಾ, ಬಿಜೆಪಿ ಚಾಮರಾಜನಗರ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಕೂಸಣ್ಣ,
ಮುಖಂಡರಾದ ರಾಜು, ಮೂರ್ತಿ, ಎಸ್ ಡಿಎಂಸಿ ಅಧ್ಯಕ್ಷೆ ರೇವತಿ, ಸದಸ್ಯರಾದ ಅಶ್ವಿನಿ ಶೋಭ, ರೇಖಾ, ನಾಗೇಶ, ಕುಮಾರಸ್ವಾಮಿ, ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾಮ್ಮ, ಬಸವಣ್ಣಪ್ಪ, ಮಹದೇವಯ್ಯ, ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಶಿಕ್ಷಕ  ಮರಿಸ್ವಾಮಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *