ಚಾಮರಾಜನಗರ: ಪಶುಸಂಗೋಪನೆ, ಮೀನುಗಾರಿಖೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಮತದಾರರ ಪಟ್ಟಿ ವೀಕ್ಷಕರಾದ ಆರ್. ವಿನೋತ್ ಪ್ರಿಯ ಅವರು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಇಂದು ಭೇಟಿ ನೀಡಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಪರಿಶೀಲಿಸಿದರು.
ಹನೂರು ತಾಲೂಕಿನ ಪ್ರವಾಸಿಮಂದಿರದಲ್ಲಿ ಬಿಎಲ್‍ಒ ಗಳೊಂದಿಗೆ ಸಭೆ ನಡೆಸಿ ಎಸ್.ಐ.ಆರ್ ಪ್ರಕ್ರಿಯೆ ಬಗ್ಗೆ ಪ್ರಗತಿ ಪರಿಶೀಲನೆ ಮಾಡಿದರು. ಸಹಾಯಕ ಮತದಾರರ ನೊಂದಣಾಧಿಕಾರಿ ತಹಶೀಲ್ದಾರ್ ಚೈತ್ರ ಅವರಿಂದ ಎಸ್.ಐ.ಆರ್ ಕಾರ್ಯಕುರಿತು ಮಾಹಿತಿ ಪಡೆದುಕೊಂಡರು. ಕಾರ್ಯನಿರ್ವಹಣೆ ಸಂಬಂಧ ಅಗತ್ಯ ಸೂಚನೆಗಳನ್ನು ನೀಡಿದರು.
ಕೊಳ್ಳೇಗಾಲ ಪಟ್ಟಣದಲ್ಲಿ ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸುತ್ತಿದ್ದ ಬಿಎಲ್‍ಒ ಗಳ ಕಾರ್ಯವೈಖರಿಯನ್ನು ವೀಕ್ಷಿಸಿದರು. ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮಕ್ಕೆ ತೆರಳಿ ಅಲ್ಲಿಯೂ ಸಹ ಎಸ್.ಐ.ಆರ್ ಕಾರ್ಯ ಪರಿಶೀಲಿಸಿದರು. ಶಿಂಡನಪುರ ಹಾಗೂ ಹಂಗಳ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ವನ್ನು ವೀಕ್ಷಿಸಿದರು.
ಮತದಾರರ ನೋಂದಣಾಧಿಕಾರಿಗಳಾದ ಎನ್. ವಿಶ್ವನಾಥ್, ಸಹಾಯಕ ಮತದಾರರ ನೋಂದಣಾಧಿಕಾರಿ ಬಸವರಾಜು, ಹನೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಇದ್ದರು.