ಚಾಮರಾಜನಗರ : ಪ್ರಸಕ್ತ ವರ್ಷ 2026- 27 ಸಾಲಿನಲ್ಲಿ ಸಕ್ಕರೆ ಕಾರ್ಖಾನೆ ಆರಂಭಕ್ಕೂ ಮುನ್ನ ಜಿಲ್ಲಾಡಳಿತ ಕಬ್ಬು ಬೆಳೆಗಾರರ ಸಭೆ ಕರೆಯುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಕುಂತೂರು ಮಹದೇಶ್ವರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಕಾರ್ಖಾನೆ ಆರಂಭಕ್ಕೂ ಮುನ್ನ ಪ್ರಸಕ್ತ ಸಾಲಿನಲ್ಲಿ ಜಿಲ್ಲಾಡಳಿತ ಕಬ್ಬು ಬೆಳೆಗಾರರು ಹಾಗೂ ಆಡಳಿತ ಮಂಡಳಿ ಜೊತೆಯಲ್ಲಿ ಸಭೆ ನಡೆಸಿ ಈ ವರ್ಷದ ಕಬ್ಬಿನ ದರ ಉಪ ಉತ್ಪನ್ನಲಾಭ ಕಬ್ಬಿನ ಕಟಿಂಗ್ ಟ್ರಾಸ್ಪೋರ್ಟ ರೇಟ್ ಕಬ್ಬಿನ ತೂಕದಲ್ಲಿ ಆಗುತ್ತಿರುವ ಕಿರುಕುಳ ಇನ್ನು ಅನೇಕ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ನಂತರ ಕಾರ್ಖಾನೆ ಆರಂಭಮಾಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ
ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೂಕಹಳ್ಳಿ ಮಹಾದೇವಸ್ವಾಮಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳಗಾರ ಸಂಘದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಪದಾಧಿಕಾರಿಗಳಾದ ಉಡಿಗಾಲ ರೇವಣ್ಣ,ಪಟೇಲ್ ಶಿವಮೂರ್ತಿ, ಮಹಾದೇವಸ್ವಾಮಿ, ಉಡಿಗಾಲ ಸುಂದ್ರಪ್ಪ ,ನಂಜಪುರ ಸತೀಶ್, ಹೆಗ್ಗೋಠಾರ ಶಿವ ಸ್ವಾಮಿ, ಕುರುಬೂ
ರು ಪ್ರದೀಪ್ , ಸಿದ್ದೇಶ, ಗುರುಸ್ವಾಮಿ, ಶಿವಸ್ವಾಮಿ, ವಿಜಯ್ ಕುಮಾರ್,ಸಿ
ದ್ದರಾಜ ಇತರರು ಹಾಜರಿದ್ದರು.