ಒಂದು ಸರ್ಕಾರ ಮಾಡುವ ಕೆಲಸವನ್ನು ಡಾ.ವೀರೇಂದ್ರ ಹೆಗ್ಗಡೆ ಮಾಡಿದ್ದಾರೆ: ಕಾಗಲವಾಡಿ ಚಂದ್ರು

  • ಕೆರೆಹಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಚಾಮರಾಜನಗರ:ತಾಲೂಕಿನ ಕೆರೆಹಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಬಹಳ ಯಶಸ್ವಿಯಾಗಿ ನಡೆಯಿತು.
ಗ್ರಾಮದ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ  ರೋಟರಿ ಸಂಸ್ಥೆ, ಚೈತನ್ಯ ನಟ್ ವರ್ಕ್, ಸ್ಪಂದನ ಆಸ್ಪತ್ರೆ,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪರಮಪೂಜ್ಯ, ಪದ್ಮವಿಭೂಷಣ, ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ ಯವರ ಮಾರ್ಗದರ್ಶನದೊಂದಿಗೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ಚಾಲನೆ ನೀಡಿ ಮಾತನಾಡಿ, ಒಂದು ಸರ್ಕಾರ ಮಾಡುವ ಕೆಲಸವನ್ನು ಡಾ.ವೀರೇಂದ್ರ ಹೆಗ್ಗಡೆ ಅವರು ಮಾಡಿದ್ದಾರೆ. ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಮಹಿಳೆಯನ್ನು ಸಂಘಟನೆ ಮಾಡಿ ಅವರು ಆರ್ಥಿಕ ಅಭಿವೃದ್ಧಿ ಹೊಂದುವಂತೆ ಮಾಡಿದ್ದಾರೆ ಗ್ರಾಮೀಣ ಅಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ಯೋಜನೆ ಆಯುರ್ವೇದ ಪ್ರಕೃತಿ ಚಿಕಿತ್ಸೆ ಸಿರಿ ಗ್ರಾಮೋದ್ಯೋಗಿ ಜನಜಾಗೃತಿ ವೇದಿಕೆ ಆರೋಗ್ಯ ಸುರಕ್ಷಾ ಯೋಜನೆಗಳು ಪರಿಸರ ಸಂಬಂಧ ಕಾರ್ಯಕ್ರಮಗಳು ಪ್ರಗತಿ ಬಂದು ರುಡ್ ಸೆಟ್ ಸಂಸ್ಥೆ ಭಜನಾ ತರಬೇತಿ ವಿಪತ್ತುನಿರ್ವಹಣೆ ತಂಡ ಶಿಕ್ಷಣ ಸಂಸ್ಥೆ ಆಸ್ಪತ್ರೆಗಳು ಸಂಧ್ಯಾ ಸುರಕ್ಷಾ ವಾತ್ಸಲ್ಲ ಮನೆ. ಕೆರೆಯ ಅಭಿವೃದ್ಧಿ ಡೈರಿ ಅಭಿವೃದ್ಧಿ ಈ ರೀತಿ ಹಲವಾರು ಯೋಜನೆಗಳನ್ನ ರಾಷ್ಟ್ರ ಮಟ್ಟಕ್ಕೆ ಕೊಂಡು ಹೋಗಿರುತ್ತಾರೆ ಎಂದರು
ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು  ನಡೆಯುವುದ್ದರಿಂದ ಗ್ರಾಮದ ಜನರು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಲು ಸಹಕಾರಿಯಾಗಿದೆ.  ಇಂತಹ ಶಿಬಿರ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚುಹೆಚ್ಚು ಆಗಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಹೆಚ್ಚುಹೆಚ್ಚು ದೊರೆಯುಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಮಾತನಾಡಿ, ರೋಟರಿ ಸಂಸ್ಥೆಯು ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ನಿರಂತರವಾಗಿ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯಕ್ರಮ ಮಾಡಲಿದೆ ಎಂದರು.
ಕಾರ್ಯಕ್ರಮದಲ್ಲಿ  ಡಾ.ಅಬ್ದುಲ್, ಮೇಲ್ವಿಚಾರಕಿ ಜ್ಯೋತಿ , ಸೇವಾ ಪ್ರತಿನಿಧಿ ವಸಂತ, ಸಮನ್ವಯಾಧ ಅನಿತಾ, ಒಕ್ಕೂಟದ ಅಧ್ಯಕ್ಷೆ ಮಂಜುಳ ಇತರರು ಭಾಗವಹಿಸಿದ್ದರು.
ಬಿಪಿ, ಶುಗರ್, ಸಾಮಾನ್ಯ ಕಾಯಿಲೆ,  ಅನೀಮಿಯಾ ಪರೀಕ್ಷೆ ಮಾಡಲಾಯಿತು. ಅಗತ್ಯಉಳ್ಳವರು ಉಚಿತ ಔಷಧಿ ವಿತರಿಸಲಾಯಿತು. ಒಟ್ಟು 185 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

Leave a Reply

Your email address will not be published. Required fields are marked *