ಚಾಮರಾಜನಗರದಲ್ಲಿ ಶೀಘ್ರದಲ್ಲೇ ರೋಟರಿ ಕಣ್ಣಿನ ಆಸ್ಪತ್ರೆ ನಿರ್ಮಾಣ ಆಗಲಿ : ಸೂರ್ಯನಾರಾಯಣ ಕುಕ್ಕುಡಿ

  • ರೋಟರಿ ಸಂಸ್ಥೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ
  • 267 ಮಂದಿ ತಪಾಸಣೆ, 155ಮಂದಿಗೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ

ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ನಗರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ರೋಟರಿ ಭವನದಲ್ಲಿ  ರೋಟರಿ ಸಂಸ್ಥೆ, ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಅರವಿಂದ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ  267 ಮಂದಿ ತಪಾಸಣೆ ಮಾಡಿಸಿಕೊಂಡರು. 155 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಅವರನ್ನು ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ  ಕರೆದುಕೊಂಡು ಹೋಗಲು ಶಿಬಿರದಲ್ಲಿ ವ್ಯವಸ್ಥೆ ಮಾಡಲಾಯಿತು.
  ನಾಮಿನಿ ಗೌರ್ನರ್  ಸೂರ್ಯನಾರಾಯಣ ಕುಕ್ಕುಡಿ  ಶಿಬಿರಕ್ಕೆ ಭೇಟಿ ನೀಡಿ ಶಿಬಿರ ವೀಕ್ಷಿಸಿ  ಮಾತನಾಡಿ,  ರೋಟರಿ ಸಂಸ್ಥೆಯು ಆರೋಗ್ಯ, ಶಿಕ್ಷಣ, ಪರಿಸರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿದ್ದು, ಅದರಲ್ಲಿ ಆರೋಗ್ಯ ಸೇವೆ ಬಹುಮುಖ್ಯ ಸೇವೆಯಾಗಿದ್ದು ಅಂತಹ ಸೇವೆಯನ್ನು
ರೋಟರಿ ಸಂಸ್ಥೆಯು ನಿರಂತರವಾಗಿ ಮಾಡುತ್ತಿದೆ ಎಂದರು.
 ಚಾಮರಾಜನಗರ ರೋಟರಿ ಸಂಸ್ಥೆಯು ಕಳೆದ 50 ವರ್ಷಗಳಿಂದ ಉಚಿತ ಕಣ್ಣಿನ ತಪಾಸಣೆ ನಡೆಸುತ್ತಿದ್ದು,   ಇದರ ಸದುಪಯೋಗವನ್ನು ಹೆಚ್ಚಿನ ಜನರ ಪಡೆಯುತ್ತಿದ್ದಾರೆ. ಚಾಮರಾಜನಗರದಲ್ಲಿ ಕಣ್ಣಿನ ಆಸ್ಪತ್ರೆಯು ಶೀಘ್ರದಲ್ಲೇ  ಚಾಮರಾಜನಗರದಲ್ಲಿ ನಿರ್ಮಾಣ ವಾಗಲಿ , ಸ್ಥಳೀಯರಿಗೆ ಹೆಚ್ಚಿನ ಸೇವೆ ಮಾಡುವಂತಾಗಲಿ ಎಂದು ಆಶಿಸಿದರು.
 ರೋಟರಿ ಸಂಸ್ಥಾಪಕ ಸದಸ್ಯ ಸಿ.ವಿ.ಶ್ರೀನಿವಾಸಶೆಟ್ಟಿ ಮಾತನಾಡಿ, ರೋಟರಿ ಸಂಸ್ಥೆಯು  ಪ್ರತಿ ತಿಂಗಳು ಮೊದಲನೆಯ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಅಯೋಜಿಸುತ್ತಿದ್ದು,  ಸಾರ್ವಜನಿಕರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ  ಶಿಬಿರದ ಪ್ರಯೋಜನ ಪಡೆಯುತ್ತಿರುವುದು ತುಂಬಾ ಸಂತಸವಾಗಿದ್ದು,ಮುಂದಿನ ಶಿಬಿರದ  ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ರೋಟರಿ ಸಂಸ್ಥೆ ಅಧ್ಯಕ್ಷ  ಅಬ್ದುಲ್ ಅಜೀಜ್ ದೀನಾ ಮಾತನಾಡಿ, ಕಣ್ಣಿನ ಆರೋಗ್ಯದ ಕಡೆ ಗಮನಹರಿಸುವುದು ಇಂದಿನ ಡಿಜಿಟಲ್ ಯುಗದಲ್ಲಿ ಅತ್ಯಗತ್ಯವಾಗಿದೆ. ಈ ಶಿಬಿರಕ್ಕೆ ಹೊರ ಜಿಲ್ಲೆಗಳಿಂದ ಜನತೆ ಬರುತ್ತಿದ್ದು,  ಶಿಬಿರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥಾಪಕ ಸದಸ್ಯರಾದ ಜಿ.ಆರ್.ಅಶ್ವಥ್ ನಾರಾಯಣ್, ಸಹಾಯಕ ಗೌರ್ನರ್ ಸುರೇಶ್, ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ, ನಿಕಟಪೂರ್ವ ಅಧ್ಯಕ್ಷ ಕಾಗಲವಾಡಿ ಚಂದ್ರು, ಮಾಜಿ ಅಧ್ಯಕ್ಷ ರಾಮಸಮುದ್ರ ನಾಗರಾಜು,  ರಾಜುವರ್ಗೀಸ್, ನೇಮಿರಾಜ್,   ಮಹಾದೇವಸ್ವಾಮಿ,  ಶ್ರೀನಿವಾಸ ಎಸ್ ಆರ್ ಎಸ್, ಪಿಆರ್ ಓ ವಿಜಯಕುಮಾರ್ , ಮನೋಜ್,  ಸವಿತಾ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *