ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಸಿ ವಿತರಣೆ

ಕೊಪ್ಪಳ:- ತಾಲ್ಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಇರುವ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜು ನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು,
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ದೈಹಿಕ ಉಪನ್ಯಾಸಕ ತಿರುಪತಿ ನಾಯಕ ಮಾತನಾಡಿ ಪರಿಸರವನ್ನು ಉಳಿಸಿ ಬೆಳಿಸುವ ಉದ್ದೇಶದಿಂದ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಸಲುವಾಗಿ ಅವಶ್ಯಕತೆ ಇದೇ ಎಂದರು,ಇತ್ತೀಚಿನ ದಿನಗಳಲ್ಲಿ ಪರಿಸರ ಅವನತಿ ಆಗುತ್ತದೆ, ಅದನ್ನು ಉಳಿಸಿ,ಕಾಪಾಡಿಕೊಂಡು, ಹೋಗುವ ಜವಾಬ್ದಾರಿ ತಮ್ಮಲ್ಲಿ ಇದೇ,ಎಂದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಬಸವರಾಜ, ಉಪನ್ಯಾಸಕ ಸಿಬ್ಬಂದಿ ಗಳಾದ ತಿರುಪತಿ ನಾಯಕ,ಅಂಬಳಿ ವೀರೇಂದ್ರ, ಹನುಮೇಶ,ಜ್ಯೋತಿ, ಅನುಪಮ, ರತ್ನ, ಭಾರತಿ ಬಂಡಿ,ಮಂಜು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ತಿರುಪತಿ ನಾಯಕ ನಿರೂಪಿಸಿದ್ದರು,ಅಂಬಳಿ ವೀರೇಂದ್ರ ಸ್ವಾಗತಿಸಿದರು, ರತ್ನ ಪ್ರಾರ್ಥಿಸಿದ್ದರು,ಹನುಮೇಶ ವಂದಿಸಿದ್ದರು,ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *