ವೈದ್ಯರ ಸೇವೆ ನಿಜಕ್ಕೂ ಅನನ್ಯ: ಸಂಪತ್ ಕುಮಾರ್

  • ವೈದ್ಯರ ದಿನಾಚರಣೆ: ಡಾ.ನವೀನ್ ಗೆ ಸನ್ಮಾನ

ಚಾಮರಾಜನಗರ: ವೈದ್ಯರ ದಿನಾಚರಣೆ ಅಂಗವಾಗಿ ಪವನ್ ಸೇವಾ ಟ್ರಸ್ಟ್ ವತಿಯಿಂದ ನಗರದ ಯಡಬೆಟ್ಟದಲ್ಲಿರುವ  ಚಾಮರಾಜನಗರ
ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಚರ್ಮರೋಗ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರಾದಡಾ.ನವೀನ್ ಅವರನ್ನು ಪವನ್ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಟ್ರಸ್ಟ್ ಅಧ್ಯಕ್ಷ  ಸಿ.ಎನ್.ಸಂಪತ್ ಕುಮಾರ್  ಅವರು ಆಸ್ಪತ್ರೆಯಲ್ಲಿ ಡಾ.ನವೀನ್ ಅವರನ್ನು ಭೇಟಿ ಮಾಡಿ ಶಾಲು ಹೊದಿಸಿ, ಹಾರಹಾಕಿ ಫಲತಾಂಬೂಲ ನೀಡಿ ಸನ್ಮಾನಿಸಿ ವೈದ್ಯರ ದಿನಾಚರಣೆಯ ಶುಭಾಶಯ ಕೋರಿದರು.
ಸಂಪತ್ ಕುಮಾರ್ ಮಾತನಾಡಿ, ವೈದ್ಯರ ಸೇವೆಯು ನಿಜಕ್ಕೂ ಅನನ್ಯವಾದುದ್ದು,, ತಮ್ಮ ಪ್ರಾಣವನ್ನು ಲೆಕ್ಕಿಸದೇ ರೋಗಿಗಳ ಸೇವೆಗೈಯ್ಯುವ ವೈದ್ಯರ ಸೇವೆ ಅನುಕರೀಣಯವಾಗಿದೆ. ಅಂತಹ ಸೇವೆಯಲ್ಲಿ  ತೊಡಗಿರುವ ಡಾ.ನವೀನ್ ಅವರನ್ನು ನಮ್ಮ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಶುಭ ಕೋರಿದರು.
ಎಂ .ಸಿ .ಎಸ್ ಪಬ್ಲಿಕ್ ಶಾಲೆಯ   ಪ್ರಾಂಶುಪಾಲ ಕೆ ಶಶಿಧರಮೂರ್ತಿ  ಮಾತನಾಡಿ,  ವೈದ್ಯರು ದೇವರ ಸಮಾನರು,ಜನತೆ ವೈದ್ಯರ ಮೇಲೆ ನಂಬಿಕೆ ಇಟ್ಟಿರುವಷ್ಟು ದೇವರ ಮೇಲೆ ಇಟ್ಟಿಲ್ಲ. ಈ ನಿಟ್ಟಿನಲ್ಲಿ ವೈದ್ಯರು ಸೇವೆ ಸಲ್ಲಿಸಬೇಕು ಎಂದು ಕೋರಿದರು.
ಸುರೇಶ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *