ವಯೋನಿವೃತ್ತಿ ಹೊಂದಿದ್ದ ಬಿ.ವಿಶ್ವಗೆ ಸನ್ಮಾನ

ಚಾಮರಾಜನಗರ: ಪಟ್ಟಣ ಪೊಲೀಸ್ ಠಾಣೆಯಲ್ಲಿ ಸಹಾಯಕ ಆರಕ್ಷಕ ಉಪ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ್ದ. ಬಿ.ವಿಶ್ವ ಅವರನ್ನು ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
   ನಗರದ ಎಲ್ ಐಸಿ ಕಚೇರಿ ಎದುರುಗಡೆಯಿರುವ ಭಾಗ್ಯ ಹೋಟೆಲ್ ಸಭಾಂಗಣದಲ್ಲಿ ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬುಲೆಟ್ ಚಂದ್ರು ಹಾಗೂ ಪದಾಧಿಕಾರಿಗಳು ವಿಶ್ವ ಅವರಿಗೆ ಶಾಲು ಹೊದಿಸಿ, ಹಾರಹಾಕಿ, ಫಲತಾಂಬೂಲ ನೀಡಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಬಿ.ವಿಶ್ವ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ನಿವೃತ್ತಿ, ವರ್ಗಾವಣೆ ಸರ್ವೇ ಸಾಮಾನ್ಯವಾದದ್ದು. ಇಲ್ಲಿಯತನಕ ನನಗೆ ನೀಡಿದ ಸಹಕಾರದ ರೀತಿಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಯಾವುದೇ ತಪ್ಪು ದಾರಿಗೆ ಹೋಗಬೇಡಿ. ಏನಾದರೂ ಅಹಿತಕರ ಮಾಹಿತಿಗಳು ಇದ್ದರೆ ಇಲಾಖೆ ತಿಳಿಸಿ ಪೊಲೀಸರಿಗೆ ಒತ್ತಾಸೆ ನಿಂತರೆ ಪೊಲೀಸ್ ಇಲಾಖೆ ಸದಾ ನಿಮ್ಮ ಪರ ಕೆಲಸ ಮಾಡುತ್ತದೆ ಎಂದರು.
    ಈ ಸಂದರ್ಭದಲ್ಲಿ ಬುಲೆಟ್ ಚಂದ್ರು ಮಾತನಾಡಿ,  ಬಿ.ವಿಶ್ವ ಅವರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಸಹಾಯಕ ಆರಕ್ಷಕ ಉಪ ನಿರೀಕ್ಷರಾಗಿದ್ದು  ಎಲ್ಲ ಸಮುದಾಯ, ಎಲ್ಲ ಧರ್ಮದವರೊಂದಿಗೆ ಉತ್ತಮ ಬಾಂದವ್ಯವಿಟ್ಟುಕೊಂಡು ಜನ ಸ್ನೇಹಿಯಾಗಿ ಉತ್ತಮ ಸೇವೆ ಸಲ್ಲಿಸಿದರು.  ಎಂತಹ ಸಮಸ್ಯೆಗಳು ಬಂದರೆ ಪರಿಹರಿಸಿಕೊಡುತ್ತಿದ್ಧರು. ಅವರ ನಿವೃತ್ತಿ ಹೊಂದುತ್ತಿರುವ ತುಂಬಾ ಬೇಸರವಾಗುತ್ತಿದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಎಎಸ್ಐ ದೊರೆಸ್ವಾಮಿ,  ಮಂಜುನಾಥ್. ಸುಬ್ಬಣ್ಣ, ಲಕ್ಷ್ಮಣ, ರವಿ, ಸಿದ್ದು, ನಾಗೇಶ್,  ಮಂಜು ಮಹೇಶ್ ಕುಮಾರ್, ರಾಘವೇಂದ್ರ, ಹೆಗ್ಗೋಠಾರ ನಾಗೇಶ್, ವಸಂತ, ಶಿವಣ್ಣ ,ಸೋಮು, ಇತರರು ಇದ್ದರು

Leave a Reply

Your email address will not be published. Required fields are marked *