ಸದ್ಯದಲ್ಲೇ ಸಂಘದಿಂದ ಇ-ಸ್ಟಾಂಪಿಂಗ್ ವ್ಯವಸ್ಥೆ : ಅಯ್ಯನಪುರ ಶಿವಕುಮಾರ್

  • ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ

ಚಾಮರಾಜನಗರ: ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಂಘವು ಕಳೆದ 10 ವರ್ಷಗಳಿಂದಲ್ಲೂ ಸುಧೀರ್ಘವಾಗಿ ಲಾಭಾಂಶದಲ್ಲಿದ್ದು, ಈ ವರ್ಷವೂ ಕೂಡ 10,78 ಲಕ್ಷ ಲಾಭಾಂಶದಲ್ಲಿದೆ ಎಂದು ಸಂಘದ ಅಧ್ಯಕ್ಷ ಅಯ್ಯನಪುರ ಶಿವಕುಮಾ‌ರ್ ಹೇಳಿದರು.
  ನಗರದ ವರ್ತಕರ ಭವನದಲ್ಲಿ ನಡೆದ ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಸಂಘವು 2015ರಲ್ಲಿ ಪ್ರಾರಂಭವಾಗಿದ್ದು, ಸಂಘದ ನಿರ್ದೇಶಕರು, ಸದಸ್ಯರ ಸಹಕಾರದ ಸಂಘವು ಯಾವುದೇ ಸುಸ್ತಿ ಇಲ್ಲದೆ ಪ್ರತಿವರ್ಷವೂ ಲಾಭಾಂಶದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದ್ದು ಚಾಮರಾಜನಗರದಲ್ಲಿ ನಡೆದ ಸಹಕಾರ ಸಪ್ತಾಹ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಘಕ್ಕೆ ಅತ್ಯುತ್ತಮ ಸಹಕಾರ ಸಂಘ ಎಂದು ಪ್ರಶಸ್ತಿ ನೀಡಿದ್ದಾರೆ. ಸಂಘ ಅಭಿವೃದ್ಧಿಗಾಗಿ ಸಹಕರಿಸಿದ ಎಲ್ಲ ಸದಸ್ಯರಿಗೂ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಂಘದಲ್ಲಿ ಸ್ಯಾಂಪ್ ಪೇಪರ್ ಆರಂಭಿಸುವುದಾಗಿ ಕಳೆದ 5, 6 ವರ್ಷಗಳಿಂದ ಪ್ರಯತ್ನ ಮಾಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಸಂಘದಲ್ಲಿ ಇ-ಸ್ಟಾಪಿಂಗ್ ದೊರೆಯಲಿದೆ. ಸಂಘದಲ್ಲಿ 101 ಮಂದಿ ಸದಸ್ಯರು ಇದ್ದು, 192 ಷೇರುವಿದ್ದು, ಎಲ್ಲ ಸಹಕಾರದಲ್ಲಿ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದರು.
ಪ್ರತಿಭಾ ಪುರಸ್ಕಾರ : ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಪರೀಕ್ಷೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ’ ‌ ನೀಡಿ ಸನ್ಮಾನಿಸಲಾಯಿತು. ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವೈ.ಪಿ.ರಾಜೇಂದ್ರಪ್ರಸಾದ್ ಯಣಗುಂಬ, ನಿರ್ದೇಶಕರಾದ ಎಂ.ರವಿ ಚಂದಕವಾಡಿ, ನಟರಾಜು ಬಸಪ್ಪನಪಾಳ್ಯ, ಎಂ.ಶಿವಕುಮಾರ್ ಬಿಸಲವಾಡಿ, ಮಹದೇವಸ್ವಾಮಿ ಬಿ.ನಲ್ಲೂರು, ಶಿವಬಸವಣ್ಣ ಸಿ, ಎಂ.ಸಿ. ಹುರೇಂದ್ರ, ಎಂ.ಎಂ.ನಾಗರಾಜು, ಅಬ್ದುಲ್‌ಅಜೀಜ್, ನಂಜುಂಡಸ್ವಾಮಿ, ದೇವಜಮ್ಮಣ್ಣಿ, ಹುಬ್ಬೇಗೌಡ, ದೊರೆಸ್ವಾಮಿ, ಕಾರ್ಯದರ್ಶಿ ಬರ್ನಾಲ್ಡ್ ದೀಕ್ಷಿತ್ ಸಿ, ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *