ಪಿಎಲ್‌ಡಿ ಬ್ಯಾಂಕಿನಿ0ದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಎಚ್.ಎಂ. ಬಸವಣ್ಣ ಅವರಿಗೆ ಗೌರವ ಸನ್ಮಾನ

ಚಾಮರಾಜನಗರ: ಸಹಕಾರ_ರತ್ನ ಪ್ರಶಸ್ತಿ ಪುರಸ್ಕೃತರಾದ ಚಾಮರಾಜನಗರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷ ಹೆಚ್.ಎಂ.ಬಸವಣ್ಣ (ಸುಂದ್ರಪ್ಪ) ಅವರನ್ನು ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಲಿಯಿAದ ಗೌರವ ಸನ್ಮಾನ ಮಾಡಲಾಯಿತು.
ನಗರದ ಪಿಎಲ್‌ಡಿ ಬ್ಯಾಂಕ್‌ನ ಕಚೇರಿ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಲಿಯ ಸಭೆಯಲ್ಲಿ ಅಧ್ಯಕ್ಷ ಬಸವಣ್ಣ ಅವರನ್ನು ಶಾಲು ಹೊದಿಸಿ, ಹಾರ ಹಾಕಿ, ನೆನಪಿನ ಕಾಣಿಕೆ, ಫಲತಾಂಬುಲ ನೀಡಿ ಬ್ಯಾಂಕಿನ ನಿರ್ದೇಶಕರು ಅಭಿನಂದಿಸುವ ಮೂಲಕ ಬಸವಣ್ಣ ಅವರು ಸಹಕಾರ ಕ್ಷೇತ್ರಕ್ಕೆ ಕಳೆದ ೩೮ ವರ್ಷಗಳಿಂದ ಸಲ್ಲಿಸುತ್ತಿರುವ ಸೇವೆಯನ್ನು ಸ್ಮರಿಸಿಕೊಂಡರು.
ಸಂಘದ ನಿರ್ದೇಶಕರದ ಮಹದೇವಪ್ಪ, ಶ್ರೀಕಂಠಪ್ರಸಾದ್, ಶಂಕರಮುರ್ತಿ ಅವರು ಮಾತನಾಡಿ, ಹಿರಿಯ ಸಹಕಾರಿಗಳಾದ ಎಚ್.ಎಂ. ಬಸವಣ್ಣ ಅವರು ಕಳೆದ ೩೮ ವರ್ಷಗಳಿಂಧ ವಿವಿಧ ಸಹಕಾರ ಸಂಘಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ರೈತರ ಅಭಿವೃದ್ದಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇವರ ಸೇವೆಯನ್ನು ಗುರುತಿಸಿ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮ ತಂದಿದೆ. ನಮ್ಮಂಥ ಯುವ ಸಹಕಾರಿಗಳಿಗೆ ಬಸವಣ್ಣ ಅವರ ಸೇವೆ ಮಾರ್ಗದರ್ಶನ ಮುಖ್ಯವಾಗಿದೆ. ಅವರಿಗೆ ಇನ್ನು ಹೆಚ್ಚಿನ ಪ್ರಶಸ್ತಿಗಳು ಲಭಿಸಿ, ಇನ್ನು ಹೆಚ್ಚಿನ ಸೇವೆಯನ್ನು ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸುವ ಅವಕಾಶವನ್ನು ಭಗವಂತ ನೀಡಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನಿಂಗೇಗೌಡ, ನಿರ್ದೇಶಕರಾದ ಮಹದೇವನಾಯಕ, ಎ. ದೊರೆಸ್ವಾಮಿ, ಎಂ.ಎಲ್. ರೇವಣ್ಣ, ನಂದೀಶ್, ಬಸುಮರಿ, ರವಿ ಬಿಸಲವಾಡಿ, ಪ್ರವೀಣ್ ನಾಯ್ಕ್, ಕೋಡಿಮೋಳೆ ಗೋವಿಂದಶೆಟ್ಟಿ, ಮಾದಲಾಂಬಿಕೆ, ಜ್ಯೋತಿ, ಹಿರಿಯ ಸಹಕಾರಿಗಳಾದ ಚಿಕ್ಕಸ್ವಾಮಿ, ದೊರೆಸ್ವಾಮಿ, ಬ್ಯಾಂಕ್ ಮ್ಯಾನೇಜರ್‌ಸತೀಶ್ ಎಂ.ಎಸ್. ಶಶಿಕಿರಣ್, ನವೀನ್, ದಿನಕಾರ್ ಇತರರು ಇದ್ದರು.

Leave a Reply

Your email address will not be published. Required fields are marked *