
- ಕೋಳಿ ಸಾಕಾಣಿಕೆ ವೆಚ್ಚ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ.25 ರಂದು ವಿಧಾನಸೌಧ ಚಲೋ.
- ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಚಂದ್ರು ಮನವಿ
ಚಾಮರಾಜನಗರ: ರಾಜ್ಯದ ಕೋಳಿ ಸಾಕಾಣಿಕೆದಾರರ ಹಿತರಕ್ಷಣೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಜಿಲ್ಲಾ ಕೋಳಿ ಸಾಕಾಣಿಕೆದಾರರ ಸಂಘದ ಜಿಲ್ಲಾಧ್ಯಕ್ಷ ಕಾಗಲವಾಡಿ ಚಂದ್ರು ಒತ್ತಾಯಿಸಿದರು.
ಗುತ್ತಿಗೆ ಆಧಾರದಲ್ಲಿ ಕೋಳಿ ಸಾಕಾಣಿಕೆ ಮಾಡುವ ರೈತರಿಗೆ ಪ್ರತಿ ಕೆ.ಜಿ. ಕೋಳಿ ಸಾಕಾಣಿಕೆ ವೆಚ್ಚವಾಗಿ 20 ರೂ. ನೀಡುವಂತೆ ಆಗ್ರಹಿಸಿ ಕರ್ನಾಟಕದ ಕೋಳಿ ಸಾಕಾಣಿಕೆದಾರರ ಸಂಘಗಳು ನವೆಂಬರ್ 25 ರಂದು ಬೆಂಗಳೂರಿನಲ್ಲಿ ‘ವಿಧಾನಸೌಧ ಚಲೋ’ ಪ್ರತಿಭಟನೆಗೆ ಕರೆ ನೀಡಿವೆ.ಆಗಾಗಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಬೆಂಬಲ ನೀಡುವಂತೆ ಮನವಿ ಮಾಡಿದರು.
ಸಾಕಾಣಿಕೆ ವೆಚ್ಚ ಹೆಚ್ಚಳ. ವಿದ್ಯುತ್ ದರ, ಕಾರ್ಮಿಕರ ವೇತನ, ಜಳ್ಳು .ಇದ್ದಿಲ್ಲ. ಮತ್ತು ಶೆಡ್ ನಿರ್ವಹಣಾ ವೆಚ್ಚಗಳು ಏರಿಕೆಯಾಗಿರುವುದರಿಂದ ಕಂಪನಿಗಳು ರೈತರಿಗೆ ಪ್ರತಿ ಕೆ.ಜಿ. ಕೋಳಿಗೆ 20 ಸಾಕಾಣಿಕೆ ದರ ನೀಡಬೇಕು ಎಂದು ಆಗ್ರಹಿಸಿದರು.
ಮಧ್ಯಂತರ ಪರಿಹಾರ ಜಾರಿ. ಸರ್ಕಾರ ಈ ಹಿಂದೆ ಆದೇಶ ಮಾಡಿರುವಂತೆ ಮಧ್ಯಂತರ ಪರಿಹಾರವಾಗಿ ಪ್ರತಿ ಕೆ.ಜಿ.ಗೆ ಕನಿಷ್ಠ 10 ರೂ. ಜಿಸಿ ದರವನ್ನು ಕಂಪನಿಗಳು ತಕ್ಷಣವೇ ಜಾರಿಗೊಳಿಸಬೇಕು ಎಂದರು.
ಕೃಷಿ ಸ್ಥಾನಮಾನ ಮತ್ತು ಉಚಿತ ವಿದ್ಯುತ್. ಭೂಕಂದಾಯ ಕಾಯ್ದೆಯಡಿ ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಪರಿಗಣಿಸಬೇಕು ಮತ್ತು ಹೈನುಗಾರಿಕೆಯ ಮಾದರಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು.’ಕರ್ನಾಟಕ ಕೋಳಿ ಸಾಕಾಣಿಕೆ ಮಸೂದೆ, 2022′ ಅನ್ನು ಜಾರಿಗೆ ತರಬೇಕು ಹಾಗೂ ನೈಜ ಸಾಕಾಣಿಕೆ ವೆಚ್ಚವನ್ನು ನಿರ್ಧರಿಸಲು ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಆಗ್ರಹಿಸಿದರು.
ನ. 25 ರಂದು ಪ್ರತಿಭಟನೆ : ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸುಮಾರು 5,000 ರೈತರು ನ. 25 ರಂದು ಬೆಂಗಳೂರು ವಿಧಾನಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಜಿಲ್ಲೆಯಿಂದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡುವುದಾಗಿ ಕಾಗಲವಾಡಿ ಚಂದ್ರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
