- ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಯಲ್ಲ. ಕ್ಷೇತ್ರ ಮರುವಿಂಗಡನೆಗೆ ವಿರೋಧ
ಚಾಮರಾಜನಗರ : ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಲತಾರಾಜಶೇಖರ ಜತ್ತಿ ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಕೇಂದ್ರ ಸರ್ಕಾರ ಪಂಚರಾಜ್ಯಗಳ ಚುನಾವಣೆ ನಡೆಯುವ ಸಂದರ್ಭದಲ್ಲಿ ನಿಸ್ವಾಥದಿಂದ ಮಹಿಳಾ ಮೀಸಲಾತಿ ಜಾರಿಗೊಳಿಸಲು ಮುಂದಾಗಿಲ್ಲ. ಸ್ವಾರ್ಥದಿಂದ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗುವ ರೀತಿಯಲ್ಲಿ ಕ್ಷೇತ್ರ ವಿಂಗಡನೆಯನ್ನು ಮಹಿಳಾ ಮೀಸಲಾತಿ ಲಿಂಕ್ ಮಾಡಿ ಜಾರಿ ಮಾಡುವುದಿಂದ ಅದು ರದ್ದಾಯಿತು. ಯಾವುದೇ ಷರತ್ತುಗಳಿಲ್ಲದೆ ಜನಗಣತಿ ಆಧಾರದ ಮೇಲೆ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೆ ತರಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮೊದಲಿನಿಂದಲ್ಲೂ ಮಹಿಳೆಯರು, ಶ್ರೀಸಾಮಾನ್ಯರು, ರೈತರ ಪರವಾಗಿದೆ. ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರ ಪರ ಯಾವುದೇ ಕಾರ್ಯಕ್ರಮ ಮಾಡುತ್ತಿಲ್ಲ. ಮಹಿಳೆಯರಿಗೆ ತುಂಬಾ ಅನ್ಯಾಯ ಮಾಡುತಿದೆ ಎಂದು ಆರೋಪಿಸಿದರು.
ಎಂಆರ್ ಎ ರಾಜ್ಯ ಕಮಿತಿ ಸದಸ್ಯ
ಡಾ.ರತ್ನ ಮಹೇಶ್ ಮಾತನಾಡಿ,ಕಾಂಗ್ರೆಸ್ ಮಹಿಳೆ ವಿರೋಧಿಯಲ್ಲ. ಯಾವಾಗಲೂ ಮಹಿಳೆಯರ ಪರ ನಿಲುವುಗಳನ್ನು ತೆಗೆದುಕೊಂಡಿದೆ. ಎಲ್ಲಕಾಲಕ್ಕೂ ಮಹಿಳೆಯರ ಪರವಾಗಿರುತ್ತದೆ. ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನ ಕೆಂಗಾಕಿ
ಮಾತನಾಡಿ, ನಮ್ಮ ಕಾಂಗ್ರೆಸ್ ಸರ್ಕಾರ ಪಂಚಗ್ಯಾರಂಟಿ ಯೋಜನೆಗನ್ನು ಜಾರಿಗೆ ತಂದು ಮಹಿಳೆಯರಿಗೆ ಅನುಕೂಲ ಮಾಡಿದೆ ಅದನ್ನು ಬಿಜೆಪಿ ಇತರ ರಾಜ್ಯಗಳಲ್ಲಿ ನಕಲು ಮಾಡಲು ಹೊರಟಿದೆ. ಕಾಂಗ್ರೆಸ್ ಸರ್ಕಾರ ಮಹಿಳಾ ವಿರೋಧಿ ಎಂದು ಹೇಳಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ ಎಂದರು
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ
ಚಿನ್ನಮ್ಮ, ಚಾಮರಾಜನಗರ ಗ್ರಾಮಾಂತರ ಮಹಿಳಾ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ, ಹನೂರು ವಿಧಾನಸಭಾ ಕ್ಷೇತ್ರದ ಮಹಿಳಾ ಬ್ಲಾಕ್
ಕಾಂಗ್ರೆಸ್ ಅಧ್ಯಕ್ಷೆ ಎಂ.ಸುವರ್ಣ ಹಾಜರಿದ್ದರು.