- ವಯೋ ನಿವೃತ್ತಿ ಹೊಂದುತ್ತಿರುವ ಉಪನ್ಯಾಸಕ ಆರ್.ಮೂರ್ತಿಗೆ ಅಭಿನಂದನೆ
ಚಾಮರಾಜನಗರ: ಜಿಲ್ಲೆಯಲ್ಲಿ ಮೂಡಲಪಾಯ ಯಕ್ಷಗಾನ ಬೆಳೆಸುವ ಕೆಲಸ ಆಗಬೇಕಿದೆ ಎಂದು ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಹೇಳಿದರು
ನಗರದ ರೋಟರಿ ಭವನದಲ್ಲಿ ಚೇತನ ಕಲಾವಾಹಿನಿ, ಶ್ರೀಮಹದೇಶ್ವರ ಕಲಾ ಸಂಘ ರೋಟರಿ ಸಂಸ್ಥೆ ಮತ್ತು ಸ್ನೇಹ ಬಳಗ ಸಹಕಾರದಲ್ಲಿ ಉಪನ್ಯಾಸಕ ಆರ್.ಮೂರ್ತಿ ಅವರಿಗೆ ಅಭಿನಂದನಾ – ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಟಕ ರಂಗಭೂಮಿಯಿಂದ ಹುಟ್ಟಿದ್ದು,
ಜಾನಪದ ರಂಗಭೂಮಿಯು ಕರ್ನಾಟಕದಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿದೆ. ಉದಾಹರಣೆಗೆ ನಮ್ಮ ಭಾಗದಲ್ಲಿ ಚಾಮರಾಜನಗರ ಜಿಲ್ಲೆಯೊಳಗೆ ಮೂಡಲಪಾಯ ಯಕ್ಷಗಾನ ಇತ್ತು. ರಾಮಸಮುದ್ರದಲ್ಲಿ ಪ್ರತಿವರ್ಷವು ನಾಟಕ ಹಾಡುವ ಜಾಗದಲ್ಲಿ ಮೂಡಲಪಾಯ ಯಕ್ಷಗಾನ ನಡೆಯುತ್ತಿತ್ತು. ಇವತ್ತು ಅದು ಇಲ್ಲ. ಇತ್ತೀಚಿನ ವರ್ಷಗಳ ಮೂಡಲಪಾಯ ಯಕ್ಷಗಾನ ಮಾಡಲಿಕ್ಕೆ ಹೋಗಿ ಏನೋ ಸಮಸ್ಯೆಗಳಾಗಿದೆ.. ಆದರೆ ಕಬ್ಬಹಳ್ಳಿ ಬೊಂಬೆಯಾಟ ಮಾಡುತ್ತಾರೆ. ಆ ಬೊಂಬೆಯಾಟವನ್ನು ಯಕ್ಷಗಾನ ರೂಪದಲ್ಲಿ ಹಾಡುತ್ತಾರೆ. ಅದು ಮರದಬೊಂಬೆಗಳು, ಬೊಂಬೆಯಾಟದಲ್ಲಿ ತುಂಬಾ ತರಗಳಿವೆ. ಇನ್ನೂ ಕೂಡ ಗುಂಡ್ಲುಪೇಟೆ ತಾಲೂಕಿನಲ್ಲಿ ಮೂಡಲಪಾಯ ಯಕ್ಷಗಾನ ಉಳಿದುಕೊಂಡಿದೆ. ಅದನ್ನು ಯಾರಾದರೂ, ಅಥವಾ ಯಾವುದಾದರು ಸಂಘ- ಸಂಸ್ಥೆ ಬಹಳ ಭದ್ರವಾಗಿಟ್ಟುಕೊಂಡು ಅದನ್ನು ಬೆಳೆಸುವ ಕೆಲಸ ಮಾಡಿದರೆ ಒಂದು ಒಳ್ಳೆಯ ಕಲಾಪ್ರಕಾರ ಉಳಿದುಕೊಂಡಾಗುತ್ತದೆ ಎಂದರು.
ಯಕ್ಷಗಾನ ನಾಟಕಕ್ಕೂ ವ್ಯತ್ಯಾಸ, ಜಾನಪದ ನಾಟಕದಲ್ಲಿ ದೃಶ್ಯಪ್ರಭೇದ ಇಲ್ಲ. ಹಿಂದೆ ಒಂದು ತೆರೆ ಇರುತ್ತದೆ. ತೆರೆಯ ಪಕ್ಕದಲ್ಲಿ ಮುಂದೆ ಕಡೆ ಕುಣಿತ, ಹಾಡು, ಅಭಿನಯ ಎಲ್ಲ ಇರುತ್ತದೆ. ವೇಷ ಸ್ವಲ್ಪ ವಿಶೇಷವಾಗಿರುತ್ತದೆ.ಸಂಗೀತಕ್ಕೆ ಹಾರ್ಮೋನಿಯಂ ಬೇಡ, ಮದ್ದಾಲೆ ಬಳಸುತ್ತಾರೆ ಗುರುಪ್ರಸಾದ್ ಅವರು ಯುವಕರಿಗೆ ಕಲಿಸಲು ಪ್ರಯತ್ನ ಮಾಡಿದರು ಎಂದರು.
ಸಂಪೂರ್ಣ ರಾಮಾಯಣ ನಾಟಕ ಮಾತ್ರ ಇಡೀ ರಾತ್ರಿ ಹಾಡುತ್ತಾರೆ ಬೇರೆ ಎಲ್ಲ.. ನಾಟಕಗಳು ಮೂರು ಗಂಟೆ ಮಾತ್ರ. ದೊಡ್ಡ ನಾಟಕವಾದರೆ ಒಂದು 20 ನಿಮಿಷ ಹೆಚ್ಚಾಗುತ್ತದೆ. ಈಗ ಬೇಕಾದನ್ನೆಲ್ಲ ಸೇರಿಸಿ ರಾತ್ರಿಯಿಂದ ಬೆಳಗ್ಗೆ ತನಕ ಹಾಡುತ್ತಾರೆ. ಇದರಿಂದ ನಾಟಕದ ಗಾಂಭೀರ್ಯ ಹಾಳು ಆಗುತ್ತದೆ. ನಾಟಕದ ಗಾಂಭೀರ್ಯ ಉಳಿಯಬೇಕಾದರೆ. ಕಥೆಗೆ ಅನ್ವಯವಾಗಬೇಕು ಎಂದರು.
ವಯೋನಿವೃತ್ತಿ ಹೊಂದುತ್ತಿರುವ
ಆರ್.ಮೂರ್ತಿ ಅವರ ಜೀವನ ಸುಖಕರವಾಗಿರಲಿ. ತುಂಬಾ ವರುಷ ಪಿಂಚಣಿ ತೆಗೆದುಕೊಳ್ಳಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಕಾಗಲವಾಡಿಚಂದ್ರು ಮಾತನಾಡಿ. ಒಂದು ವೃತ್ತಿಯಲ್ಲಿ ಕೆಲಸ ಮಾಡುವವರಿಗೆ ಮಾತ್ರ ಬೀಳ್ಕೊಡುಗೆ ಸಮಾರಂಭ ಏರ್ಪಾಡು ಮಾಡುತ್ತಾರೆ. ಉಪನ್ಯಾಸಕ ಆರ್.ಮೂರ್ತಿ ಕಲಾಕ್ಷೇತ್ರದಲ್ಲೂ ಇದ್ದಾರೆ. ಅವರು ಉಪನ್ಯಾಸಕ ವೃತ್ತಿಯಿಂದ ನಿವೃತ್ತಿ ಹೊಂದಬಹುದು. ನಾಳೆಯಿಂದ ನಾಟಕ ವೃತ್ತಿ ಆರಂಭವಾಗುತ್ತದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.
ಉಪನ್ಯಾಸಕ ಸುರೇಶ್ ಎನ್.ಋಗ್ವೇದಿ ಮಾತನಾಡಿದರು.
ಅಭಿನಂದನೆ. ಸ್ವೀಕರಿಸಿದ ಉಪನ್ಯಾಸಕ ಆರ್.ಮೂರ್ತಿ ಮಾತನಾಡಿ, ತಮ್ಮನ್ನು ಅಭಿನಂದಿಸಿದ ಎಲ್ಲರಿಗೂ ಚಿರಋಣಿಯಾಗಿರುತ್ತೆನೆ ಎಂದರು.
ಕಲಾವಿದರಾದ ಎನ್. ಆರ್. ಪುರುಷೋತ್ತಮ್, ಗೌಡಿಕೆ ಮಹದೇವಸ್ವಾಮಿ. ಗೌಡಿಕೆ ಬೀರೆಗೌಡ, ಗೋವಿಂದ ರಾಜು ಅಮ್ಮನಪುರ, ಸುರೇಂದ್ರ, ರಾಮಣ್ಣ, ಪಿ.ನಿಂಗಯ್ಯ ,ವಿ.ಮಹದೇವಯ್ಯ, ಸುಬ್ಬೇಗೌಡ, ವೆಂಕಟರಮಣ, ದಕ್ಷ ಮಹೇಶ್, ಮಹೇಂದ್ರ, ಸಂಪತ್ ಕುಮಾರ್, ಶಿವಕುಮಾರ್ ಅವರು ರಂಗಗೀತೆ ಸಾದರಪಡಿಸಿದರು.
ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ಡಾ.ರಾಜಶೇಖರ ಪಂಡಿತ್, ಬಿಆರ್‌ಪಿ ಮ.ನಂ.ರಮೇಶ್, ಡ್ರಾಮಾ ಮಾಸ್ಟರ್ ಆರ್.ಶಿವಣ್ಣ, ಚೇತನ ಕಲಾವಾಹಿನಿ ಅಧ್ಯಕ್ಷ ಜಿ.ರಾಜಪ್ಪ, ಮಹದೇಶ್ವರ ಸಂಘದ ಸಂಚಾಲಕರಾದ ಎಂ.ಎನ್.ಮಹದೇವು, ಆರ್.ಮಲ್ಲಿಕಾರ್ಜುನಸ್ವಾಮಿ, ಸ್ನೇಹ ಬಳಗದ ಎಂ.ಪುಟ್ಟಸ್ವಾಮಿ, ರಂಗಸ್ವಾಮಿ, ಲತಾ ಪುಟ್ಟಸ್ವಾಮಿ ನಾಗರಾಜು, ಪುಟ್ಟಣ್ಣ, ಆರ್.ಮಹದೇವಸ್ವಾಮಿ, ಬಿಸಲವಾಡಿ ರಂಗಸ್ವಾಮಿ. ಶಿವಯ್ಯ,
ತಬಲ ನಾಗರಾಜು ಕಲಾವಿದರು ಹಾಜರಿದ್ದರು.