ಮೈಸೂರು ವಿವಿ ಪ್ರಸಾರಾಂಗಕ್ಕೆ ಸಂತ ಜೋಸೆಫರ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಭೇಟಿ

ಮೈಸೂರು: ರಮ್ಮನಹಳ್ಳಿಯಲ್ಲಿರುವ ಸಂತ ಜೋಸೆಫರ ಮಹಿಳಾ ಕಾಲೇಜಿನ ಕನ್ನಡ ಭಾಷಾ ವಿಭಾಗದ ವಿದ್ಯಾರ್ಥಿಗಳು ವಿಸ್ತ್ರತ ಅಧ್ಯಯನದ ಉದ್ದೇಶದಿಂದ ಮೈಸೂರು ವಿಶ್ವ ವಿದ್ಯಾನಿಲಯದ ಪ್ರಸಾರಾಂಗಕ್ಕೆ ಸೋಮವಾರ ಭೇಟಿ ನೀಡಿದ್ದರು.

ಪ್ರಸಾರಂಗದಲ್ಲಿನ ಮುದ್ರಣಾಲಯ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ವಿಭಾಗಕ್ಕೆ ಭೇಟಿ ಕೊಟ್ಟು, ಮಾಹಿತಿಗಳನ್ನ ಸಂಗ್ರಹಣೆ ಮಾಡಿದರು. ಇದಲ್ಲದೆ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿನ ಕುವೆಂಪು ಚಿತ್ರಕೂಟ ಮತ್ತು ಗಾಂಧಿ ಭವನಗಳಿಗೆ ಭೇಟಿಕೊಟ್ಟು ಕಣ್ಮನಗಳನ್ನು ತುಂಬಿಕೊಂಡರು. ಈ ಭೇಟಿಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮತ್ತು ಪ್ರಸಾರಂಗದ ನಿರ್ದೇಶಕರಾದ ಪ್ರೊ. ನಂಜಯ್ಯ ಹೊಂಗನೂರು ಅವರು ಮತ್ತು ಗಾಂಧಿ ಭವನದ ನಿರ್ದೇಶಕರು ಸಂತೋಷದಿಂದ ಅವಕಾಶ ಮಾಡಿಕೊಟ್ಟರು. ಅಲ್ಲಿನ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳನ್ನ ತಿಳಿಸಿಕೊಟ್ಟರು.

“ಪ್ರಸಾರಂಗಕ್ಕೆ ಭೇಟಿ ಇತ್ತ ವಿದ್ಯಾರ್ಥಿನಿಯರು ಇಲ್ಲಿನ ಮುದ್ರಣಾಲಯದ ಮುದ್ರಣಾ ಕಾರ್ಯ, ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನಗಳನ್ನು ಹತ್ತಿರದಿಂದ ಕಂಡು, ಮಾಹಿತಿಗಳನ್ನು ಸಂಗ್ರಹಿಸಿ, ಖುಷಿ ಪಟ್ಟದಷ್ಟೇ ಅಲ್ಲದೆ ಅದು ಅವರ ಕಲಿಕೆಗೆ ಸಾಕಷ್ಟು ಅನುಕೂಲ ಮಾಡಿ ಕೊಟ್ಟಿದ್ದು ಸಂತಸದ ಸಂಗತಿಯಾಗಿದೆ. ಇಲ್ಲಿನ ಅಚ್ಚುಕಟ್ಟುತನ, ಸಿಬ್ಬಂದಿಯ ಸಹಕಾರ, ಮಾಹಿತಿ ಒದಗಿಸಿದ ರೀತಿ, ಆವರಣ, ಹೊಸ ಹೊಸ ಪುಸ್ತಕಗಳನ್ನು ಕಂಡು ವಿದ್ಯಾರ್ಥಿನಿಯರು ಪುಳಕಿತಗೊಂಡರು.

  • ಮಹೇಶ್ ಎ. ಎಸ್. ಮುಖ್ಯಸ್ಥರು, ಕನ್ನಡ ವಿಭಾಗ. ಸಂತ ಜೋಸೆಫರ ಮಹಿಳಾ ಕಾಲೇಜು.

“ಪ್ರಸಾರಂಗದ ಭೇಟಿ ನಿಜಕ್ಕೂ ಖುಷಿ ಕೊಟ್ಟಿತು, ಪುಸ್ತಕಗಳ ಮುದ್ರಣದ ಕಾರ್ಯ ಕುರಿತು ಕೇಳಿದ್ದೆನು, ನೇರವಾಗಿ ಕಂಡಿರಲಿಲ್ಲ, ಅದರೊಟ್ಟಿಗೆ ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನವನ್ನು ಹತ್ತಿರದಿಂದ ಕಂಡದ್ದು ನಿರ್ವಹಣಾ ವಿಭಾಗ ವಿದ್ಯಾರ್ಥಿನಿಯಾದ ನನಗೆ ಅಪಾರವಾದ ಅನುಭವವನ್ನು ನೀಡಿತು, ಅವಕಾಶಕ್ಕಾಗಿ ಧನ್ಯವಾದಗಳು.”

  • ಮೈತ್ರಿ ಜೋಸೆಫ್, ದ್ವಿತೀಯ ಬಿ.ಬಿ.ಎ

ನಮ್ಮ ಸಂಸ್ಥೆಯ ಕನ್ನಡ ಭಾಷಾ ವಿಭಾಗದ ವಿದ್ಯಾರ್ಥಿಗಳು ಕಳೆದ ಎರಡು ಶೈಕ್ಷಣಿಕ ಸಾಲಿನಿಂದ ನಿರಂತರವಾಗಿ ಗಾಂಧಿ ಭವನ, ಕಲಾಮಂದಿರ, ಕುವೆಂಪು ಚಿತ್ರಕೂಟ ಮತ್ತು ಪ್ರಸಾರಂಗಗಳಂತಹ ಸ್ಥಳಗಳಿಗೆ ಭೇಟಿ ಕೊಟ್ಟು ಕಣ್ಮನಗಳನ್ನ ತಣಿಸಿಕೊಂಡು, ತಮ್ಮ ಕಲಿಕೆಗೆ ಬೇಕಾದ ಮಾಹಿತಿಗಳನ್ನು ಸಂಗ್ರಹಣೆ ಮಾಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ.

* ಶ್ರೀಮತಿ ಪೂರ್ಣಿಮ ಎನ್, ಪ್ರಾಂಶುಪಾಲರು. ಸಂತ ಜೋಸೆಫರ ಮಹಿಳಾ ಕಾಲೇಜು

Leave a Reply

Your email address will not be published. Required fields are marked *