ಪರಭಾಷಿಗರ ಹೆಚ್ಚಳದಿಂದ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ : ರಮೇಶ್‌ಗೌಡ ಕಳವಳ

ಚಾಮರಾಜನಗರ: ಬೆಂಗಳೂರಿನಲ್ಲಿ ಹೊರ ರಾಜ್ಯದವರ ಹೆಚ್ಚಳದಿಂದಾಗಿ ಸ್ಥಳೀಯ ಉದ್ಯೋಗ, ಸಂಸ್ಕೃತಿ, ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಮೇಶ್‌ಗೌಡ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಡೆದ ನೂತನ ಪದಾಧಿಕಾರಿಗಳ ಸೇರ್ಪಡೆ, ಸಮಾಜಮುಖಿ ಚಿಂತಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘಟನೆಗೆ ಸೇರ್ಪಡೆಯಾದವರಿಗೆ ಸಂಘಟನೆಯ ಶಲ್ಯ ಹಾಕಿ ಸ್ವಾಗತಿಸಿ ಬರಮಾಡಿಕೊಂಡು ಮಾತನಾಡಿದರು.
ಕೆರೆಗಳಲ್ಲಿ ಬೋಗೆಸೆ ಭೋಗಸೆ ನೀರು ಕುಡಿಯುತ್ತಿದ್ದೇವು. ಇಂದು ಗುತ್ತಿಗೆ ಪಡೆದು ಕೊಳಚೆ ಮಂಡಳಿಯಾಗಿ ಮಾಡಿಬಿಟ್ಟರು. ಎಲ್ಲ ಮಾಲ್‌ಗಳಲ್ಲಿ ಪರಕೀಯರು ಬಂದು ವಾಸಮಾಡುತ್ತಿದ್ದಾರೆ. ನೀವು ಎಲ್ಲೆ ಹೋದರು ಕನ್ನಡ ಅನ್ನ, ಮುದ್ದೆ, ಮಕ್ಕಳಿಗೆ ಜಾಗವಿಲ್ಲದಂತೆ ಮಾಡಲಾಗಿದೆ. ಅಲ್ಲಿ ರೋಟಿ
ಕುಲ್ಚ ತುಂಬಿಕೊಂಡಿವೆ. ಪಿಜ್ಜಾ ಬರ್ಗರ್ ಬಂದಿದ್ದು. ಬೆಂಗಳೂರಿನಲ್ಲಿ ಎಂ.ಜಿ.ರೋಡ್‌ನಲ್ಲಿ ಎಗ್ಗಿಲ್ಲದೆ ಪರಭಾಷಿಯ ತುಂಡುಬಟ್ಟೆಯ ಹುಡುಗಿಯರು ಓಡಾಡುವಂತಾಗಿದ್ದು, ನಮ್ಮ ಕನ್ನಡ ಮಕ್ಕಳು ಮುಜುಗರದಿಂದ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆಗಾಗಿ ಕನ್ನಡ ಉಳಿವಿಗಾಗಿ ಕನ್ನಡ ತನಕ್ಕಾಗಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಯೋಗೀಶ್‌ಗೌಡ, ಜಿಲ್ಲಾ ಘಟಕದ ಗೌರವಾಧ್ಯಕ್ಷೆ ಲಿಂಗರಾಜು, ಜಿಲ್ಲಾಧ್ಯಕ್ಷ ಮಲ್ಲುಯರಗಂಬಳ್ಳಿ, ಜಿಲ್ಲಾ ಉಪಾಧ್ಯಕ್ಷ ಶಬಾಜ್‌ ಷರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಶೆಟ್ಟಿ, ನಿಂಗಶೆಟ್ಟಿ, ನಳಿನಕುಮಾರಿ, ಪ್ರೇಮಲತಾ, ವಸಂತಕುಮಾರಿ, ಜಯಲಕ್ಷ್ಮೀ, ಲೀಲಾ, ನಾಗರತ್ನ, ಮಧುರ, ಶಿವಮ್ಮ, ಮಂಗಳಮ್ಮ, ಮಹದೇವಪ್ರಸಾದ್, ಹೋಮ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *