ಗುರುನಮನ, ನಿವೃತ್ತ ಅಧಿಕಾರಿಗಳಿಗ ಗೌರವ ಸಮರ್ಪಣೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ
ಚಾಮರಾಜನಗರ: ಗುರುನಮನ, ನಿವೃತ್ತ ಅಧಿ ಕಾರಿಗಳಿಗೆ ಗೌರವ ಸಮರ್ಪಣೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ನಗರದ ನಂದಿಭವನ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಡಯಟ್ ಪ್ರಾಂಶುಪಾಲ ಎಂ.ಕಾಶೀನಾಥ್ ಮಾತನಾಡಿ, ಶಿಕ್ಷಕ ವೇತನಕ್ಕಾಗಿ ಪಾಠ ಮಾಡುವ ಸರ್ಕಾರಿ ನೌಕರ ಎಂದು ತಿಳಿದುಕೊಂಡಿದ್ದಾರೆ. ಆದರೆ ಇಂತಹ ಕಾರ್ಯಗಳ ಮೂಲಕ ಶಿಕ್ಷಕ ಏನು?, ಸಮಾಜಕ್ಕೆ ಅವನ ಕಾಣಿಕೆ ಏನು ? ಮತ್ತು ಅವನ ಪಾತ್ರಯೇನು?, ಎಂತಹ ಮಹತ್ವದು ಅನ್ನುವುದನ್ನು ಅರಿವು ಮಾಡುವುದಕ್ಕೆ ಶಿಕ್ಷಕರಾಗಿ. ಸಮಾಜಕ್ಕೆ ಸಂಪೂರ್ಣ ಸೇವೆ ಸಲ್ಲಿಸಿ ವೇದಿಕೆ ಮೇಲಿ ಆಸೀನರಾಗಿರುವ ಶಿಕ್ಷಕರು ,ಅಧಿಕಾರಿಗಳೇ ಸಾಕ್ಷಿಯಾಗಿದ್ದಾರೆ ಎಂದರು.
ತನಗೆ ಸಹಕರಿಸಿದ, ಮಾರ್ಗದರ್ಶನ ಕೊಟ್ಟ ಎಲ್ಲ ಶಿಕ್ಷಕ ಬಂಧುಗಳನ್ನು ಶಿಕ್ಷಕ ಕೆಂಪನಪುರ ಸಿದ್ದರಾಜು ಅವರು ನೆನಪಿಸುವ, ಅವರ ಮಾರ್ಗದರ್ಶನಕ್ಕೆ ಕೃತರ್ಜತೆ ಸಲ್ಲಿಸುವ ಒಂದು ಅರ್ಪಣಾ ಮನೋಭಾವ ಇವತ್ತು ಅವರಲ್ಲಿದೆ ಅಂದರೆ ಅದಕ್ಕೆ ಕಾರಣ. ಬಹುಷ ನೀವೇ. ಒಂದು ಸಸಿ ಬೆಳೆಯುವಾಗಲೇ ಅದಕ್ಕೆ ಸಮರ್ಪಕವಾದಂತಹ ಮಾರ್ಗದರ್ಶನ ಕೊಡುವತಕ್ಕಂತಹ, ಅವರಿಗೆ ಬೇಕಾಗಿರುವ ಎಲ್ಲ ಅಂಶಗಳನ್ನು ಧಾರೆ ಎರೆಯುವಂತಹ.. ಉದಾತ್ತ ವಾದಂತಹ ಗುಣ ಶಿಕ್ಷಕರಲ್ಲಿರುತ್ತದೆ. ಶಿಕ್ಷಕ ಒಂದು ಸಮಾಜದ ಶಿಲ್ಪಿ, ಈ ಸಮಾಜವನ್ನು ಸರಿಗೆ ದಾರಿಗೆ ತರಬೇಕಾದರೆ, ಸಮಾಜದ ಅಂಕು-ಡೊಂಕು ಗಳನ್ನು ತಿದ್ದಬೇಕಾದರೆ ಪ್ರಾಥಮಿಕ ಹಂತದಲ್ಲೇ ಅವರಿಗೆ ಬೇಕಾಗಿರುವ ಸಾಂಸ್ಕೃತಿಕ ಹಿನ್ನಲೆಯಲ್ಲಿ
ಅವರ ಬದುಕಿಗೆ ಮೌಲ್ಯಗಳನ್ನು ರೂಪಿಸಿಕೊಡುವ ಮಹತ್ತರವಾದಂತಹ ಕೆಲಸ ಶಿಕ್ಷಕರಾಗಿ ನಾವು ಮಾಡಬೇಕಿದೆ ಎಂದರು.
ಕಲಬುರಗಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಯು.ಆರ್.ಲಿಂಗರಾಜೇಅರಸ್ ಪ್ರೇರಣಾತ್ಮಕವಾಗಿ ಮಾತನಾಡಿ. ನಿವೃತ್ತಿ ಹೊಂದಿದ ಮೇಲೆ ನಮಸ್ಕಾರ ಮಾಡುವುದರಲ್ಲಿ ಇರುವ ಪ್ರೀತಿ. ನಿವೃತ್ತಿಗೂ ಮುನ್ನಾ ಮಾಡುವ ನಮಸ್ಕಾರದಲ್ಲಿ ಇರುವುದಿಲ್ಲ ಏಕೆಂದರೆ ಅದು ಪೀಠಕ್ಕೆ ಕೊಡುವ ನಮಸ್ಕಾರವಾಗಿದೆ. ಇವತ್ತು ನಿಮಗೆ ಗೌರವ ಸಿಗುತ್ತಿದೆ ಎಂದರೆ ಅದು ಕೇವಲ ನಾವು ನಿರ್ವಹಿಸುತ್ತಿರುವ ವೃತ್ತಿ. ಸರ್ಕಾರ ಕೊಟ್ಟಿರುವ ಕೆಲಸ ಅ ಕೆಲಸದಿಂದ ನಮಗೆ ಮಾರ್ಯಾದೆ ಹೊರತು ಅವರು ಕೈ ಮುಗಿತಿರುವುದು ನನಗೆ ಎಂದು ತಿಳಿದುಕೊಂಡರೆ ಅದು ಭ್ರಮೆ ಅನ್ನಿಸುತ್ತದೆ. ಆದ್ದರಿಂದ ವೃತ್ತಿಯನ್ನು ಪ್ರೀತಿಸಬೇಕು. ವಿಷಯವನ್ನು ಆಳವಾಗಿ ಅಧ್ಯಯನ ಮಾಡಬೇಕು ಒಂದು ವೃತ್ತಿಯನ್ನು ಗೌರವಿಸಬೇಕು. ಭೋದನಾ ವಿಷಯವನ್ನು ಪ್ರೀತಿಸಬೇಕು ಎಂದರು.
ಕಾರ್ಯಕ್ರಮ ಆಯೋಜಕ ಸಿದ್ದರಾಜು ಮಾತನಾಡಿ, ನನ್ನ ಜೀವನದ ಅತ್ಯಂತ ಸಾರ್ಥಕ ಹಾಗೂ ಭಾವಪೂರ್ಣ ಕ್ಷಣಗಳಲ್ಲಿ ಒಂದಾಗಿದೆ. ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯಲ್ಲಿ.. ಶಿಕ್ಷಕನಾಗಿ ಸುಮಾರು 35 ವರ್ಷಗಳಿಗಿಂತ ಹೆಚ್ಚು ಕಾಲ ಸುದೀರ್ಘ ಅವಧಿ ಸೇವೆ ಸಲ್ಲಿಸಿದ… ನಂತರ ಪೂಜ್ಯನೀಯ ಗುರುಗಳನ್ನು ಸ್ಮರಿಸುವ ಮೊದಲು ನನ್ನ ಜೀವನದ ಮೊದಲ ಗುರುಗಳಾದ, ತಂದೆ-ತಾಯಿಯನ್ನು ಸ್ಮರಿಸುತ್ತಾ ಇಂದು ಶಿಕ್ಷಕನಾಗಿ ಸಮಾಜದ ಮುಂದೆ ನಿಲ್ಲಲು ಸಾಧ್ಯವಾಗಿದ್ದರೆ. ಅದರ ಹಿಂದೆ ತಂದೆತಾಯಿಯ ಅಪಾರ ತ್ಯಾಗ, ಪ್ರೀತಿ ಇದ್ದೆ ಇರುತ್ತದೆ ಅದರ ಜೊತೆಗೆ ನನ್ನ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸಿರುವುದು ನನಗೆ ಧೈಯವಾಗಿದೆ ಅವರು ಕೇವಲ ಶಿಕ್ಷಣವನ್ನ ಕೊಡಲಿಲ್ಲ. ಶಿಕ್ಷಣದ ಮಹತ್ವವನ್ನು ಬದುಕಿನ ಮೂಲಕ ಕಲಿಸಿಕೊಟ್ಟರು. ಅವರ ಆಶೀರ್ವಾದವೇ ನನ್ನ ಜೀವನದ ನಿಜವಾದ ಸಂಪತ್ತು… ಆಗಿದೆ. ಈ ಕಾರ್ಯಕ್ರಮವು ಗುರು-ಶಿಷ್ಯ ಪರಂಪರೆಯ ಪವಿತ್ರ ದಿನವಾಗಿದೆ’ ಎಂದರು.
ಗುರುನಮನ, ಗೌರವ ಸಮರ್ಪಣೆ : ನಿವೃತ್ತ ಉಪನಿರ್ದೇಶಕರಾದ ಎನ್.ಚಂದ್ರೇಗೌಡ,
ಯೋಜನಾ ಎಸ್.ಎಸ್.ಮಂಜುನಾಥ್, ಹೆಚ್.ಟಿ.ಮಂಜುನಾಥ್, ಜಿಲ್ಲಾ ಸಮನ್ವಯಾಧಿಕಾರಿ ಪಿ.ಮಂಜುನಾಥ್, ಹಿರಿಯ ಉಪನ್ಯಾಸಕರಾದ ಸಿದ್ದರಾಜಾಚಾರ್, ಬಿ.ಎಸ್.ಕೆಂಪಲಿಂಗಪ್ಪ, ನಿವೃತ್ತ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್. ನಿವೃತ್ತ ಶಿಕ್ಷಣಾಧಿ ಕಾರಿಗಳಾದ ಅಂದಾನಿ, ಸೋಮಣ್ಣೆಗೌಡ, ನಿವೃತ್ತ ಮುಖ್ಯಶಿಕ್ಷಕರಾದ ಹೆಚ್.ಸಿ.ಮಾದಪ್ಪ, ಶಿವಲಿಂಗಪ್ಪ, ಶ್ರೀರಾಮಚಂದ್ರ ಪ್ರಶಿಕ್ಷಣ ಸಂಸ್ಥೆ ನಿವೃತ್ತ ಅಧೀಕ್ಷಕ
ಆರ್.ಮರಿಮಾದಯ್ಯ, ನಿವೃತ್ತ ಶಿಕ್ಷಕ ಎಸ್.ಸಿ.ಚಿನ್ನಸ್ವಾಮಿ. ನಿವೃತ್ತ ಸಂಗೀತ ಶಿಕ್ಷಕ ಶಶಿಕಲಾ, ನಿವೃತ್ತ ಶಿಕ್ಷಕ ಕೆ.ಎಸ್.ಮಹದೇವಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದೀನಬಂಧು ಟ್ರಸ್ಟ್ ಗೌರವ ಕಾರ್ಯದರ್ಶಿ ಜಿ.ಎಸ್.ಜಯದೇವ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಪ್ರವಾಚಕ ಎನ್.ಲಕ್ಷ್ಮೀಪತಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರಾಜೀವ್ ಹಾಗೂ ಶಿಕ್ಷಕರು ಹಾಜರಿದ್ದರು.