ಪತ್ರಕರ್ತರ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಸಿಇಓ ಮೋನಾರೋತ್

  • ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
  • ಕ್ರೀಡಾಕೂಟದಲ್ಲಿ ಪತ್ರಕರ್ತರು, ಕುಟುಂಬ ಸದಸ್ಯರ ಸಂಭ್ರಮ

ಚಾಮರಾಜನಗರ: ಸದಾ ಒತ್ತಡದಲ್ಲಿರುವ ಪತ್ರಕರ್ತರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾಕೂಟ ಸಹಕಾರಿಯಾಗಿದೆ     ಎಂದು  ಜಿ.ಪಂ.ಸಿಇಓ ಮೋನಾರೋತ್ ಹೇಳಿದರು.
     ನಗರದ ರಾಮಸಮುದ್ರ ದೀನಬಂಧು ಶಾಲಾವರಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆ ಪ್ರಯುಕ್ತ ಭಾನುವಾರ  ಸಂಘದ ಸದಸ್ಯರು, ಕುಟುಂಬದವರಿಗೆ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
   ಮಾಧ್ಯಮ ಕ್ಷೇತ್ರಕ್ಕೆ ಸಮಾಜದಲ್ಲಿ ತನ್ನದೆ ಆದ ಘನತೆ ಗೌರವವಿದೆ. ಇಂಥ ರಂಗದಲ್ಲಿ ಕೆಲಸ ಮಾಡುವ ಪತ್ರಕರ್ತರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಬೇಕು. ಹೀಗಾಗಿ ಕ್ರೀಡಾಕೂಟದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು.
  ಸದಾ ಒತ್ತಡದಲ್ಲಿರುವ ಪತ್ರಕರ್ತರು ವರ್ಷಕ್ಕೊಮ್ಮೆಯಾದರೂ ಇಡೀ ಒಂದು ದಿನ ಬೆರತು ಆಟೋಟಗಳಲ್ಲಿ ಪಾಲ್ಗೊಂಡು ಜೀವನದ ಜಂಜಾಟ ಮರೆಯಲು ಪ್ರಯತ್ನಿಸಬೇಕು ಎಂದು
ಕ್ರೀಡಾಪಟುಗಳಿಗೆ ಶುಭ ಕೋರಿದರು.
ಡಿವೈಎಸ್‌ಪಿ ಸ್ನೇಹರಾಜ್ ಮಾತನಾಡಿ, ಕ್ರೀಡೆಯು ಜೀವನದ ಮುಖ್ಯ ಅಂಗವಾಗಿದ್ದು,… ಅದು ಮಾನಸಿಕ, ದೈಹಿಕವಾಗಿ ದೃಢ ಮಾಡುತದೆ. ಎಲ್ಲರ ಜೀವನದಲ್ಲಿ ಏಳುಬೀಳು ಬಹಳ ಸಹಜ. ಸೋತಾಗ ಮತ್ತೆ ಗೆಲ್ಲೋದು ಹೇಗೆ ಎಂಬುದನ್ನು ಕ್ರೀಡೆ ಹೇಳಿಕೊಡುತ್ತದೆ. ಅದಕ್ಕೋಸ್ಕರ ಮಕ್ಕಳಲ್ಲಿ ಕ್ರೀಡಾ ಸ್ಫೂರ್ತಿಯನ್ನು ಸೇರಿಸಬೇಕಾಗುತದೆ. ನಾವು ಸಣ್ಣ ವಯಸ್ಸಿನಲ್ಲಿ ಸಾಂಸ್ಕೃತಿಕವಾಗಿ ಆಡುತಿದ್ದ ಹಳಗುಳಿಮನೆ ಕವಡೆ ಆಟ ನಶಿಸಿಹೋಗಿದೆ. ಮಕ್ಕಳು ಮಣ್ಣಿನಲ್ಲಿ ಬಿದ್ದು ಆಟ ಆಡುವುದನ್ನು ನೋಡೆ ಇಲ್ಲ. ಎಲ್ಲರೂ ಪೋನ್, ಟಿವಿಗೆ ಒಳಗಾಗಿದ್ದಾರೆ. ಆಗಾಗಿ ನಾವೂದಾದರೂ ನಮ್ಮ ಹಂತದಲ್ಲಿ ಬದಲಾವಣೆ ತರರೋಣ ಮಕ್ಕಳನ್ನು ಟಿವಿ, ಮೊಬೈಲ್‌ಗೆ ಸೀಮಿತ ಮಾಡದೇ ಮಣ್ಣಿನಲ್ಲಿ ಆಟ ಆಡಲು ಬಿಡೋಣ. ಮಕ್ಕಳ ಬಾಲ್ಯವನ್ನು ನಾವು ಕಿತ್ತು ಕೊಳ್ಳುವುದು ಬೇಡ ಎಂದರು.
ದೀನಬಂಧು ಟ್ರಸ್ಟ್ ಗೌರವ ಕಾರ್ಯದರ್ಶಿ ಜಿ.ಎಸ್.ಜಯದೇವ್ ಮುಖ್ಯ ಅತಿಥಿಯಾಗಿ.. ಭಾಗವಹಿಸಿ ನಿಜವಾದ ದೇಶಸೇವೆ ಎಂದರೆ ಇದೇನೆ. ಏಕೆಂದರೆ ತುಂಬಾ ಒತ ಡದಲ್ಲಿ ಕೆಲಸ. ಮಾಡುವ ಪತ್ರಕರ್ತರು ಕುಟುಂಬದ ಸದಸ್ಯರೊಂದಿಗೆ ಕಾಲಕಳೆಯಲು ಸಮಯ ಇರುವುದಿಲ್ಲ. ನೀವು ಕುಟುಂಬದೊಂದಿಗೆ ಕಾಲಕಳೆದಿದ್ದರೆ. ನಿಮ್ಮ ಆರೋಗ್ಯ ಕಡಿಮೆ ಆಗುತ್ತದೆ. ಮಾನಸಿಕ ಆರೋಗ್ಯ ಯಾವಾಗ ಕಡಿಮೆ ಆಗುತ್ತದೆ. ಅದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಅದು ಒಟ್ಟಾರೆಯಾಗಿ ಇಡೀ ನಾಡಿನ ಮೇಲೆ ಪರಿಣಾಮ ಬೀರುತ್ತದೆ. ಅದೃಷ್ಠಿಯಿಂದ ನಿಜವಾದ ಅಭಿವೃದ್ಧಿ ಕಾರ್ಯ ಎಂದರೆ ಪ್ರತಿಯೊಬ್ಬರೂ ತಮ್ಮ ತಮ್ಮ ಕುಟುಂಬದೊಂದಿಗೆ ನೆಮ್ಮದಿಯಿಂದ ಇರಿ. ಸಂತೋಷವಾಗಿರಿ. ಆಗಾದರೆ ನಿಮ್ಮ ಮನಸ್ಸು ಉಲ್ಲಾಸದಿಂದ ಕೆಲಸ ಮಾಡಲು ಸಾಧ್ಯ, ಒತ್ತಡದಿಂದ ಹೊರಬರುವುದಕ್ಕೆ ಕ್ರೀಡೆಯೂ ಬಹಳ ಒಳ್ಳೆಯ ಸಾಧನ ಎಂದರು.
ಪತ್ರಿಕೆಗಳು ನಿಲುವುಗಳನ್ನು ಬದಲಾವಣೆ ಮಾಡಿ ಕೊಳ್ಳುವುದು, ಯಾವುದೋ ಒಂದು ಧರ್ಮವನ್ನು ಮುನ್ನೆಲೆಗೆ ತರುವಂತಹದ್ದು..ಅಪ್ರಾಮಾಣಿಕ ತರುವಂತಹದ್ದು, ಆದರೆ ಚಾಮರಾಜನಗರ ಪತ್ರಕರ್ತರು ಹಾಗಿಲ್ಲ. ಇಲ್ಲಿ ಗಟ್ಟಿಯಾದ ನಿಲುವು ಇದೆ. ಅ ಗಟ್ಟಿಯಾದ ನೀಲುವು ನಮ್ಮ ಅಧಿಕಾರಿಗಳು, ರಾಜಕಾರಣಿಗಳನ್ನು ತಿದ್ದಬೇಕು. ಸಮಾಜದ ಎಲ್ಲರನ್ನು ತಿದ್ದಬೇಕು ಎಂದರು. ಅಂತಹ ತಿದ್ದುವ ಕೆಲಸ ಮಾಡಿ ಅದಕ್ಕೆ ಬೇಕಾಗುವಂತಹ ಸ್ಫೂರ್ತಿ ಮತ್ತು ಮಾನಸಿಕ ಸಮತೋಲನವನ್ನು ಇಂತಹ ಕೌಟುಂಬಿಕ ಕಾರ್ಯಕ್ರಮಗಳಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
  ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಪ್ರಾಸ್ತಾವಿಕ ವಾಗಿ ಮಾತನಾಡಿ,   ಪ್ರತಿ ವರ್ಷದಂತೆ ಈ ಬಾರಿಯೂ  ಪತ್ರಿಕಾ ದಿನಾಚರಣೆ ಅಂಗವಾಗಿ  ಸಂಘದ ಸದಸ್ಯರು, ಕುಟುಂಬದವರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಸಂಘವು ಸದಸ್ಯರ ಹಿತ ಕಾಪಾಡುತ್ತಿದೆ ಎಂದರು.
ಸಂಘದ ರಾಜ್ಯ ಪರಿಷತ್ ಸದಸ್ಯ ಮಹೇಂದ್ರ,
ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ಖಜಾಂಚಿ ಆರ್.ಸಿ.ಪುಟ್ಟರಾಜು,
ಕ್ರೀಡಾಪಟು ವಿ.ಶ್ರೀನಿವಾಸಪ್ರಸಾದ್ ಹಾಗೂ ಪತ್ರಕರ್ತರು, ಕುಟುಂಬದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *