ಚಾಮರಾಜನಗರ : ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ರೋಟರಿ ಸಂಸ್ಥೆ ಯ
ಪೋಲಿಯೋ ನಿರ್ಮೂಲನೆ ಸಮಿತಿ ಅಧ್ಯಕ್ಷ ಸಿ.
ವಿ. ಶ್ರೀನಿವಾಸಶೆಟ್ಟಿ ಹೇಳಿದರು.
ನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆದ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಮಗುವಿಗೆ ಎರಡು ಪೋಲಿಯೊ ಲಸಿಕೆ’ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. 5 ವರ್ಷದೊಳಗಿನ ಪ್ರತಿ ಮಗುವಿಗೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪಲ್ಸ್ ಪೋಲಿಯೋ ತಡೆಗಟ್ಟಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕೋರಿದರು.
ಪಲ್ಸ್ ಪೋಲಿಯೋ ನಿಯಂತ್ರಣದಲ್ಲಿ ನಮ್ಮ ದೇಶವಿದೆ. ಅಪಘಾನಿಸ್ತಾನ, ಪಾಕಿಸ್ತಾನದಲ್ಲಿ ಈಗಲೂ ಬಹಳಷ್ಟು ಪ್ರಕರಣಗಳಿವೆ. ಅಪಘಾನಿಸ್ತಾನದಲ್ಲಿ 10 ಪ್ರಕರಣಗಳಿವೆ. ಪಾಕಿಸ್ತಾನದಲ್ಲಿ 51 ಪ್ರಕರಣಗಳಿವೆ. ಇಡೀ ವಿಶ್ವದಲ್ಲೇ 61 ಪ್ರಕರಣಗಳಿದೆ ಎಂದರು.
ಫಿಲಿಫೈನ್ಸ್‌ನಲ್ಲಿ ಹುಟ್ಟಿದ 10 ಮಕ್ಕಳ ಪೈಕಿಯಲ್ಲಿ 7 ಮಕ್ಕಳಿಗೆ ಪೋಲಿಯೋ ಕಾಣಿಸಿಕೊಳ್ಳುತ್ತಿತ್ತು.
ಡಾ. ಆಲ್ಬರ್ಟ್ ಸಬಿನ್ ಪೋಲಿಯೋ ಲಸಿಕೆ ಕಂಡುಹಿಡಿದರು. ಇಡೀ ವಿಶ್ವದಲ್ಲೇ ಉಚಿತವಾಗಿ ಪೋಲಿಯೋ ಲಸಿಕೆ ನೀಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ನಮ್ಮ ರೋಟರಿ ಸಂಸ್ಥೆಯು 1985ರಲ್ಲಿ ‘ಪೋಲಿಯೋಪ್ಲಸ್’
ಕಾರ್ಯಕ್ರಮವನ್ನು ಆರಂಭಿಸಿತು. ಇದು ಜಾಗತಿಕ ಪೋಲಿಯೋ ನಿರ್ಮೂಲನಾ ಉಪಕ್ರಮದ ಸಂಸ್ಥಾಪಕ ಸದಸ್ಯ ಸಂಸ್ಥೆಯಾಗಿದೆ. ರೋಟರಿಯು ಇಲ್ಲಿಯವರೆಗೆ ಜಾಗತಿಕವಾಗಿ 2.9 ಬಿಲಿಯನ್‌ಗೂ ಹೆಚ್ಚು ಡಾಲರ್‌ಗಳನ್ನು ಪೋಲಿಯೋ ನಿರ್ಮೂಲನೆಗಾಗಿ ವೆಚ್ಚ ಮಾಡಿದೆ ಎಂದರು.
ಇಂದಿಗೂ, ರೋಟರಿ ಕ್ಲಬ್‌ಗಳು ಸ್ಥಳೀಯ ಆರೋಗ್ಯ ಅಧಿಕಾರಿಗಳೊಂದಿಗೆ ಸಹಕರಿಸಿ, ಪೋಲಿಯೋ ಲಸಿಕೆ ಅಭಿಯಾನಗಳನ್ನು ನಡೆಸುತ್ತಿವೆ, ಈ ಮೂಲಕ ಪೋಲಿಯೋ ನಿಮೂರ್ಲನೆ
ಘೋಷಣೆಯೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದರು.
ಕಾರ್ಯ ಕ್ರಮದಲ್ಲಿ ರೋಟರಿ ಸಂಸ್ಥೆ ಯ ಚಂದ್ರಪ್ರಭಜೈನ್, ರಾಜಣ್ಣ, ನೇಮಿರಾಜ್, ಬಿಕೆ ಮೋಹನ್, ಪ್ರಕಾಶ್, ರಮೇಶ್ ಇತರರು ಹಾಜರಿದ್ದರು.
ಚಾಮರಾಜನಗರದ ಎಲ್ಲಾ ಬೂತ್ ಗಳಿಗೂ ರೋಟರಿ ಸಂಸ್ಥೆ ವತಿಯಿಂದ ಊಟದ ವ್ಯವಸ್ಥೆ
ಮಾಡಲಾಯಿತು