- ವಿಶ್ವಕರಾಟೆ ದಿನ: ಚಾಮರಾಜನಗರದಲ್ಲಿ ಗಮನ ಸೆಳೆದ ಜಾಥಾ, ಕರಾಟೆ ಪ್ರದರ್ಶನ
ಚಾಮರಾಜನಗರ: ವಿಶ್ವ ಕರಾಟೆ ದಿನದ ಅಂಗವಾಗಿ ಚಾಮರಾಜನಗರ ಜಿಲ್ಲಾ ಕರಾಟೆ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಜಾಥಾ, ಕರಾಟೆ ಪ್ರದರ್ಶನ ನಡೆಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಿಂದ ಹೊರಟ ಜಾಥಾವು ರಥದ ಬೀದಿ, ವೀರಭದ್ರೇಶ್ವರ ದೇವಸ್ಥಾನ, ದೊಡ್ಡರಸನಕೊಳದ ರಸ್ತೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ತನಕ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದವರಗೆ
ಕಾಲ್ನಡಿಗೆ ಜಾಥಾ,ಕರಾಟೆ ಪ್ರದರ್ಶನ ನಡೆಯಿತು.
ಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ಹೊರಟ ಜಾಥಾಕ್ಕೆ ನಗರಸಭಾ ಹಿರಿಯ ಆರೋಗ್ಯ ಅಧಿಕಾರಿ ಮಂಜುನಾಥ್ ಚಾಲನೆ ನೀಡಿ ಮಾತನಾಡಿ,
ಕರಾಟೆ ಕಲೆಯು ಕೇವಲ ಒಂದು ಆತ್ಮರಕ್ಷಣೆಯ ತಂತ್ರವಲ್ಲ; ಇದು ದೈಹಿಕ ಸದೃಢತೆ, ತೀಕ್ಷ್ಣವಾದ ಮಾನಸಿಕ ಗಮನ, ಸ್ವಯಂ-ಶಿಸ್ತು ಹಾಗೂ ಭಾವನಾತ್ಮಕ ಸಮತೋಲನವನ್ನು ಒದಗಿಸುತ್ತದೆ. ನಿಯಮಿತ ಅಭ್ಯಾಸವು ಸ್ನಾಯುಗಳ ಬಲವನ್ನು, ಏಕಾಗ್ರತೆಯನ್ನು ಹೆಚ್ಚಿಸಿ, ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದರು. ಚಾಮರಾಜನಗರ ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷರೂ ಹಾಗೂ
ವಕೀಲರಾದ ಸೆನ್ಸಾಯ್ ರಾಜೇಂದ್ರ ಮಾತನಾಡಿ, ವಿಶ್ವ ಕರಾಟೆ ದಿನ ಅಂಗವಾಗಿ ಚಾಮರಾಜನಗರ ಜಿಲ್ಲಾ ಕರಾಟೆ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಕಾಲ್ನಡಿಗೆ ಜಾಥಾ, ಕರಾಟೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಬಾಲ್ಯದಿಂದಲೇ ಕರಾಟೆ ಅಭ್ಯಾಸ ಮಾಡುವುದರಿಂದ ಮಾನಸಿಕ, ದೈಹಿಕ ಸದೃಢವಾಗಿದ್ದು, ಉತ್ತಮ ಆರೋಗ್ಯವಂತರಾಗಿಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ
ಅಸೋಸಿಯೇಷನ್ ನ ಕಾರ್ಯದರ್ಶಿ ಆದ ಸೆನ್ಸಾಯ್ ಗಣೇಶಮೂರ್ತಿ, ಗೌರವಾಧ್ಯಕ್ಷರಾದ ಸೆನ್ಸಾಯ್ ನಾಗೇಂದ್ರ, ಖಜಾಂಚಿಯಾದ ಯೋಗೇಶ್ ಹಾಗೂ ಇತರೆ ಪದಾಧಿಕಾರಿಗಳು ಮತ್ತು ಕರಾಟೆ ತರಬೇತಿದಾರರಾದ ರವೀಶ್, ರಮೇಶ್, ಫೈಸಾಲ್, ರಿಹಾನ್, ಶಿವರಾಜ್, ಮಯೂರ, ಮಹಮ್ಮದ್ ಸುಯೇಜ್ ಖಾನ್, ವಿಜಯ, ಶೇಖರ್, ಬ್ಲಾಕ್ ಬೆಲ್ಟ್ ಅನುಶ್ರೀ, ಹರ್ಷಿತ ಹಾಗೂ ಕರಾಟೆಪಟುಗಳು ಹಾಜರಿದ್ದರು.