- ಟ್ರಸ್ಟ್ ನಿಂದ ಚಾಮರಾಜನಗರ ಜಿಲ್ಲೆಯ 89 ಪ್ರತಿಭಾವಂತ ಬಡ ಮಕ್ಕಳಿಗೆ 14 ಲಕ್ಷ ಆರ್ಥಿಕ ನೆರವು
ಚಾಮರಾಜನಗರ: ಭಗೀರಥ ಶೈಕ್ಷಣಿಕ ಮತ್ತುಚಾರಿಟಬಲ್ ಟ್ರಸ್ಟ್ ವತಿಯಿಂದ ಅ. 25ರಂದು ನಗರದಲ್ಲಿ ಚಿಂತನ-ಮಂಥನ ಸಭೆ’ ಅಯೋಜಿಸಲಾಗಿದೆ ಎಂದು ಟ್ರಸ್ಟಿ ಡಿ.ಜಗನ್ನಾಥಸಾಗರ್ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಭಾನುವಾರ ನಗರದ ಎಲ್ಐಸಿ ಕಚೇರಿ ಹಿಂಭಾಗದಲ್ಲಿರುವ ಹೋಟಲ್ ನಂದಿ ಇನ್ ಸಭಾಂಗಣದಲ್ಲಿ ನಡೆಯುವ ಚಿಂತನ-ಮಂಥನ ಸಭೆಯ ದಿವ್ಯಸಾನಿಧ್ಯವನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಆಯ್ಯನ ಸರಗೂರುಮಠದ ಶ್ರೀ ಮಹಾದೇವಸ್ವಾಮಿಗಳು, ಮಂಗಲ ಗ್ರಾಮದ 88ಗಡಿಕಟ್ಟೆ ಗ್ರಾಮಾಂತರ ಆಚಾರ ವಿಚಾರಣೆ ಅಧಿಪತಿ ಶ್ರೀ ಮಂಜುನಾಥಸ್ವಾಮೀಜಿ ವಹಿಸುವವರು. ಪಶುಸಂಗೋಪನಾ ಮತ್ತು ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟರು ಸಭೆ ಉದ್ಘಾಟಿಸುವವರು. ಶ್ರೀಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಪಿ.ಶಿವಶಂಕರ್ ಅಧ್ಯಕ್ಷತೆ ವಹಿಸುವವರು. ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರವೀಂದ್ರ, ಟ್ರಸ್ಟಿನ ಪ್ರಧಾನ ಮಹಾಪೋಷಕರಾದ ವೆಂಕಟೇಶ್ ಹೆಚ್.ಬಂಡಿ, ಎಂ.ಎಸ್.ಲೋಕೇಶ್, ಹೆಚ್.ಎನ್.ವಿಜಯಕುಮಾರ್, ಮಹಾ ಪೋಷಕ ಹೆಚ್.ಆರ್.ಕೃಷ್ಣಪ್ಪ ಭಾಗವಹಿಸಲಿದ್ದಾರೆ ಎಂದರು.
ಉಪ್ಪಾರ ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ “ಆರ್ಥಿಕ ನೆರವು” ನೀಡಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು, ವಿದ್ಯಾರ್ಥಿನಿಲಯ, ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸುವುದು, ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯಕ್ಕೆ ಮೊದಲನೇ ಆದ್ಯತೆ ನೀಡುವುದು,
ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಶೈಕ್ಷಣಿಕ ದತ್ತು ಯೋಜನೆ ಹಮ್ಮಿಕೊಳ್ಳುವುದು.
ರಾಜ್ಯ,ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲಿ ಶಿಕ್ಷಣ,ತರಬೇತಿ ಪಡೆಯಲು ಮಾರ್ಗದರ್ಶನ ನೀಡುವುದು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗ ದರ್ಶನ ನೀಡುವುದು.ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಸೌಲಭ್ಯ ಮತ್ತು ಆದ್ಯತೆಯ ಮೇಲೆ ನೆರವು ನೀಡುವುದು.
ಉಪ್ಪಾರ ಸಮಾಜದಲ್ಲಿ ಇನ್ನೂ ಆಳವಾಗಿ ಬೇರೂರಿರುವ ಅಂಧ ಶ್ರದ್ಧೆ ಮತ್ತು ಮೌಡ್ಯಗಳ ನಿರ್ಮೂಲನೆಗಾಗಿ ಶ್ರಮಿಸುವುದು. ಶೈಕ್ಷಣಿಕ ಅಭಿವೃದ್ಧಿಗಾಗಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ/ವಿವಿಧ ಕ್ಷೇತ್ರಗಳ ಉಪ್ಪಾರ ಜನಾಂಗದ ಸಾಧಕರನ್ನು ಸನ್ಮಾನಿಸುವ ಮೂಲಕ ವಿದ್ಯಾರ್ಥಿಗಳು ಸಾಧಕರನ್ನು ಅನುಕರಣೆ ಮಾಡಲು ಉತ್ತೇಜಿಸುವುದು ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ಉದ್ದೇಶ ವಾಗಿದೆ ಎಂದರು. ಈಗಾಗಲೇ ಟ್ರಸ್ಟ್ ವತಿಯಿಂದ 380 ಕ್ಕೂ ಪ್ರತಿಭಾವಂತ ಮಕ್ಕಳಿಗೆ ಆರ್ಥಿಕ ನೆರವು ನೀಡಿದ್ದು, ಅದರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 89 ಪ್ರತಿಭಾವಂತ ಬಡ ಮಕ್ಕಳಿಗೆ 14 ಲಕ್ಷ ರೂ.ಆರ್ಥಿಕ ನೆರವು ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿ , ಜಿ.ಪಂ.ಮಾಜಿ ಅಧ್ಯಯನ ಸಿ.ಎ.ಮಹದೇವಶೆಟ್ಟಿ,ಟ್ರಸ್ಟಿ ನರಸಿಂಹಮೂರ್ತಿ, ಟ್ರಸ್ಟಿನ ದಾನಿಗಳಾದ
ಬಿ.ಸ್ವಾಮಿ, ಸಿ.ರಾಜ, ಟ್ರಸ್ಟಿನ ವಲಯ ಕಾರ್ಯದರ್ಶಿ ಸೋಮಶೇಖರಪ್ಪ ಹಾಜರಿದ್ದರು.