ಕನ್ನಡ ವಿವೇಕ ಪರಂಪರೆ ಕಟ್ಟಿದವರು ಜನಪದರು

  • ಡಾ ಜೀವನ್ ಸಾಬ್ ವಾಲಿಕಾರ್ ಬಿನ್ನಾಳ ಸದಸ್ಯರು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು

ಜನಪದ ಸಾಹಿತ್ಯ ಗ್ರಾಮೀಣ ಜನರ ಬದುಕಿನ ಪ್ರತಿಬಿಂಬವಾಗಿತ್ತು ಜನರು ತಮ್ಮ ಜೀವನ ಅನುಭವಗಳ ಮೂಲಕ ಕಂಡುಕೊಂಡ ಸಾರ್ವತ್ರಿಕ ಸತ್ಯಗಳನ್ನು ತಮ್ಮ ಕಲೆಗಳ ಮೂಲಕ ಅಭಿವ್ಯಕ್ತಿಸಿದರು , ಕಪ್ಪೆ ಅರಭಟ್ಟನ ಶಾಸನದಿಂದ ಆದಿಯಾಗಿ ಕವಿರಾಜಮಾರ್ಗ ಕಾರ, ಪಂಪ , ಬಸವಣ್ಣ, ಅಲ್ಲಮ, ಸರ್ವಜ್ಞ ಒಡಗೂಡಿ ಕಲ್ಯಾಣ ಕ್ರಾಂತಿಯ ವಚನಕಾರರೆಲ್ಲರೂ ಹೇಳಿದ ಕನ್ನಡದ ವಿವೇಕ ಪರಂಪರೆಯನ್ನು ತಮ್ಮದೇ ದೇಶಿಯ ಶೈಲಿಯಲ್ಲಿ ಕಟ್ಟಿಕೊಟ್ಟ ಹೆಗ್ಗಳಿಕೆ ನಮ್ಮ ಜನಪದರದ್ದು ,

ವಿಜಯನಗರ ಜಿಲ್ಲೆಯ ತಿಮ್ಲಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿನಾಯಕ ಎಜುಕೇಶನ್ ಸೊಸೈಟಿ ಅವರ ನ್ಯಾಷನಲ್ ಶಿಕ್ಷಣ ಬಿ ಇಡಿ ಮಹಾವಿದ್ಯಾಲಯದ ಪೌರತ್ವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಜನಪದ ಸಾಹಿತ್ಯ ಮತ್ತು ಜೀವನ ಮೌಲ್ಯಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಜನಪದರು ಸರಳವಾಗಿ ಜೀವಿಸಿ ಸುಖಿ ಬದುಕಿಗೆ ಸಾಕ್ಷಿಯಾದವರು, ಜನಪದರು ಹಾಡು ಕಥೆ ಒಗಟು ಗಾದೆ ಮುಂತಾದ ಸಾಹಿತಿಕ ಪ್ರಕಾರಗಳಲ್ಲಿ, ತಮ್ಮ ಅಭಿವ್ಯಕ್ತಿ ಮಾಧ್ಯಮದ ಕಲೆಗಳ ಮೂಲಕ ಜನಪದ ಎನ್ನುವ ಸಮೂಹ ಮಾಧ್ಯಮವನ್ನಾಗಿ ಮಾಡಿಕೊಂಡು ಜನರಿಗೆ ಅಗತ್ಯವಿರುವ ವಿವೇಕ ಅರಿವು ಜ್ಞಾನ ಮೌಲ್ಯಗಳನ್ನು ವಿವಿಧ ತಲಮಾರಿನ ಜನಾಂಗಗಳಿಗೆ ಪಸರಿಸಿದ ಹೆಗ್ಗಳಿಕೆ ಜನಪದರಿಗೆ ಸಲ್ಲುತ್ತದೆ, ಮೌಡ್ಯ ಕಂದಾಚಾರ ಲಿಂಗ ಅಸಮಾನತೆಯ ಕಾಲಘಟ್ಟದಲ್ಲೂ ಮರುಭೂಮಿಯ ಓಯಸಿಸ್ ದಂತೆ ಲಿಂಗ ಸಮಾನತೆ, ವೈಚಾರಿಕ ಪ್ರಜ್ಞೆ, ವಿವೇಕಯುತವಾದ ಸಮಾಜದ ನಿರ್ಮಾಣಕ್ಕಾಗಿ ಜನಪದರು ತಮ್ಮ ಸಾಹಿತ್ಯವನ್ನು ಕೊಡುಗೆಯಾಗಿ ಕೊಟ್ಟವರು , ಇಂದು ಪ್ರೀತಿ ಪ್ರೇಮದ ವಿಷಯವಾಗಿ ಅಶ್ಲೀಲ ಅರ್ಥ ರಹಿತ ಸಾಹಿತ್ಯವು ಜಾನಪದದ ಹೆಸರಿನಲ್ಲಿ ಪ್ರಸಾರವಾಗುತ್ತಿರುವ ಸಂದರ್ಭವು ಜನಪದ ಕಲೆ ಮತ್ತು ಸಾಹಿತ್ಯ ಸಂಸ್ಕೃತಿಗೆ ಮಾಡುವ ಅಪಚಾರವಾಗಿದೆ . ಪ್ರಶಿಕ್ಷಣಾರ್ಥಿಗಳಾದ ಬಿಎಡ್ ಪದವಿಯ ವಿದ್ಯಾರ್ಥಿಗಳು ನಮ್ಮ ದೇಶೀಯ ತಲೆ ಮತ್ತು ಸಾಹಿತ್ಯವನ್ನು ಓದಿ ಅರ್ಥೈಸಿಕೊಂಡು ಸಾಂಸ್ಕೃತಿಕ ಹೆಗ್ಗರುತುಗಳನ್ನು ವಿದ್ಯಾರ್ಥಿಗಳ ಮೂಲಕ ಮುಂದಿನ ಪೀಳಿಗೆಗೆ ಪಸರಿಸಬೇಕು , ಮೊಬೈಲ್ ಬಳಕೆ ಮಿತವಾಗಿಸಿಕೊಂಡು, ಪುಸ್ತಕದ ಓದು ಜನ ಸಮುದಾಯಗಳ ಅವಲೋಕನ, ವಿವಿಧ ಸಂಸ್ಕೃತಿಗಳ ಅಧ್ಯಯನದ ಮೂಲಕ ನಮ್ಮ ಜಾನಪದದ ಅಸ್ಮಿತಿಯನ್ನು ಎತ್ತಿ ಹಿಡಿಯುವ ಕೆಲಸ ವಿದ್ಯಾರ್ಥಿಗಳಿಂದ ಸಾಗಬೇಕು ಎಂದನು ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ ಶ್ರೀ ಕೆ ರವಿಶಂಕರ್ ಉಪ ಸಭಾಪತಿಗಳು ಭಾರತೀಯರ ಸಂಸ್ಥೆ ವಿಜಯನಗರ ಜಿಲ್ಲೆ ಅವರು ಮಾತನಾಡಿ ವಿದ್ಯಾರ್ಥಿಗಳು ಅಧ್ಯಯನ ಶೀಲರಾಗಬೇಕು, ತಮ್ಮ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಳ್ಳಲು ವಿವಿಧ ಸಾಹಿತ್ಯದ ಪ್ರಕಾರಗಳನ್ನು ಅಧ್ಯಯನಸಿ ಅಳವಡಿಸಿಕೊಳ್ಳಬೇಕು, ಓದು ಬರಹ ಅಧ್ಯಯನವಿಲ್ಲದೆ ಜನಪದರು ಕಟ್ಟಿಕೊಟ್ಟ ಜೀವನ ಮೌಲ್ಯಗಳು ಅಳವಡಿಸಿಕೊಂಡಾಗ ಮಾತ್ರ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು ಕಾಲೇಜಿನ ಪ್ರಾಂಶುಪಾಲರಾದ ಡಾ ಅಯೂಬ್ ಖಾನ್, ಪ್ರಾಧ್ಯಾಪಕರಾದ ಶ್ರೀ ವಿಶ್ವನಾಥ್ ಗೌಡ, ರಾಮಸ್ವಾಮಿ, ವಿಕ್ರಂ ಬಾಳಿಕಟ್ಟಿ, ಶಂಕರ ಗೌಡ ಕೆ, ಮುಬೀನಾ ಎಮ್, ಕಾರ್ತಿಕ್ ಎಂ, ಬಿ ಗಂಗೂಲಿ, ಪ್ರಶಿಕ್ಷಣಾರ್ಥಿಗಳಾದ ಅಂಗಡಿ ಲಕ್ಷ್ಮಿ, ಜಂಬಕ್ಕಾ, ವಿಶ್ವನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *