ಚಾಮರಾಜನಗರ : ಸರ್ವಜನರ ಸಂತೋಷ, ಸಮೃದ್ಧಿ, ಸೌಹಾರ್ದತೆಯೇ ವಿಜಯದಶಮಿ. ವಿಜಯ ದಶಮಿಯ ದಿನ ದುಷ್ಟ ಶಕ್ತಿಗಳ ಸಂಹಾರವಾಗಿಸಿದ ದಿನ ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ನಗರದ ಋಗ್ವೇದಿ ಕುಟೀರ ದಲ್ಲಿ ಜೈ ಹಿಂದ್ ಮತ್ತು ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ವಿಜಯದಶಮಿ ಮಹತ್ವ ಮತ್ತು ಬನ್ನಿ ಪೂಜೆಯ ಮಹತ್ವ, ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತ ದೇಶ ವಿದೇಶಗಳಲ್ಲಿ ದುರ್ಗಾಮಾತೆಯನ್ನು ಪೂಜಿಸುವ ಮೂಲಕ ಪ್ರಕೃತಿಯ ರಕ್ಷಣೆ, ಸಮಾಜದ ಹಿತ ಹಾಗೂ ಸರ್ವರ ಕಲ್ಯಾಣಕ್ಕಾಗಿ ಪೂಜಾ ಪದ್ಧತಿಗಳು, ನಡೆದು ಪ್ರಾರ್ಥಿಸಲಾಗುತ್ತದೆ.
9 ದಿನಗಳ ಕಾಲ ಸಂಗೀತ, ಕಲೆ, ಸಂಸ್ಕೃತಿ ನಾಟಕ, ಆರೋಗ್ಯ, ಜನಪದ, ಗಮಕ, ಕ್ರೀಡೆ, ನೃತ್ಯ ಕ್ಷೇತ್ರಗಳ ಕಲಾವಿದರು ಗಳಿಗೆ ನೂರಾರು ವೇದಿಕೆಗಳ ಮೂಲಕ ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಆನಂದ, ನೆಮ್ಮದಿ, ಸಂತೋಷ ಸಂಭ್ರಮದ ಮೂಲಕ ಜನರ ಸೌಹಾರ್ದತೆ, ಏಕತೆಯು ಇಮ್ಮಡಿಯಾಗುತ್ತದೆ.
ಇಡೀ ದೇಶದಲ್ಲಿ ನವರಾತ್ರಿಯ ಸಂಭ್ರಮದ ಮೂಲಕ ದಸರಾ ಹಬ್ಬವನ್ನು ಆಚರಿಸುವ ಮೂಲಕ ಪ್ರತಿ ಮನೆ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ. ವಿಜಯದಶಮಿಯ ದಿನವು ಇತಿಹಾಸ,ಪೌರಾಣಿಕ, ಆಧ್ಯಾತ್ಮಿಕ ಹಿನ್ನೆಲೆಯನ್ನು ಹೊಂದಿದ್ದು ಪಾಂಡವರು ಕೌರವರ ವಿರುದ್ಧ ಜಯಗಳಿಸಿದ ಹಾಗೂ ರಾವಣನ ಸಂಹಾರ ಮಾಡುವ ಮೂಲಕ ಶ್ರೀ ರಾಮನು ವಿಜಯ ಪಡೆದ ದಿನವಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತಿದೆ.ಬನ್ನಿ ಮರವನ್ನು ವಿಶೇಷವಾಗಿ ಪೂಜಿಸುವ ಮೂಲಕ ಆಯಸ್ಸು ಆರೋಗ್ಯ ನೆಮ್ಮದಿ ಸಂತೋಷ ಸೌಹಾರ್ದತೆ ಮತ್ತು ಔಷಧಿಯ ಶ್ರೇಷ್ಠತೆಯ ಹಂತಗಳನ್ನು ತಿಳಿಸುವ ಪ್ರಕೃತಿಯ ದೃಷ್ಟಿಕೋನವು ಆಗಿದೆ. ಬನ್ನಿ ಮರದ ಎಲೆಯನ್ನು ಸ್ವೀಕರಿಸಿ ಮೂಲಕ ಬಂಗಾರದಂತ ಜೀವನ ನಮ್ಮದಾಗಲಿ ಎಂಬುದೇ ಬನ್ನಿ ಪೂಜೆಯ ವಿಶೇಷವಾಗಿದೆ ಎಂದು ತಿಳಿಸಿದರು.
ಶ್ರೀ ರಾಮನ ಹಾಗೂ ಚಾಮುಂಡಿಯ ವಿಗ್ರಹಕ್ಕೆ ಪುಷ್ಪವನ್ನು ಸಲ್ಲಿಸುವ ಮೂಲಕ ಜೈ ಹಿಂದ್ ಪ್ರತಿಷ್ಠಾನದ ಉಪಾಧ್ಯಕ್ಷರು, ಮೈಸೂರು ಮಾವಿನಹಳ್ಳಿ ಶಾಲೆಯ ಶಿಕ್ಷಕರಾದ ವಿಜಯಲಕ್ಷ್ಮಿ ರವರು ಉದ್ಘಾಟಿಸಿ ವಿಜಯದಶಮಿ ಮೂಲಕ ದಸರಾ ಹಬ್ಬವನ್ನು ಆಚರಿಸಿ ಸಂತೋಷಪಡುವ 9 ದಿನಗಳು ಆಧ್ಯಾತ್ಮದ ಚಿಂತನೆ, ಕೌಟುಂಬಿಕ ಮೌಲ್ಯಗಳು, ಹಾಗೂ ಸಮಾಜವನ್ನು ಪ್ರೀತಿಸುವಂತಹ ವಿಶೇಷ ಗುಣದೊಂದಿಗೆ ಮಾನವನ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಪೋಷಿಸುವುದು ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಸುರೇಶ್ ಜೋಶಿ ಶ್ರಾವ್ಯ, ಶರಣ್ಯ, ಶಿಕ್ಷಕ ಸಂತೋಷ್ ಕುಮಾರ್, ಮಂಜುನಾಥ್, ರವಿ ಮುಂತಾದವರು ಉಪಸ್ಥಿತರಿದ್ದರು.
