ಚಾಮರಾಜನಗರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕಕ್ಕೆ 2026-31 ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ಮಹಾದೇವಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್.ಮಾದಪ್ಪ, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಬಹುಮತದೊಂದಿಗೆ ಆಯ್ಕೆಯಾದರು.
ನಗರ ಜಿಲ್ಲಾಡಳಿತ ಭವನದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹದೇವಸ್ವಾಮಿ, ಮಲ್ಲಿಕಾರ್ಜುನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕೆ.ಎನ್.ಮಾದಪ್ಪ, ನಟರಾಜು, ಉಪಾಧ್ಯಕ್ಷ ಸ್ಥಾನಕ್ಕೆ ಶಿವಪ್ರಸಾದ್, ಆನಂದ್ ಕುಮಾರ್ ನಾಮಪತ್ರ ಸಲ್ಲಿಸಿದರು. ಚುನಾವಣೆ ನಡೆದು ಮಹದೇವಸ್ವಾಮಿ 30 ಮತಗಳು, ಮಲ್ಲಿಕಾರ್ಜುನ 8 ಮತಗಳು, ಕೆ.ಎಸ್.ಮಾದಪ್ಪ 28 ಮತಗಳು, ನಟರಾಜು 10 ಮತಗಳು, ಶಿವಪ್ರಸಾದ್ 30 ಮತಗಳು, ಆನಂದ್‌ಕುಮಾರ್ 8 ಮತಗಳು ಬಂದವು ಚುನಾವಣಾಧಿಕಾರಿಯಾಗಿದ್ದ ಶಾಲಾಶಿಕ್ಷಣ ಇಲಾಖೆ ಉವಿರ್ದೇಶಕ ಚಂದ್ರಪಾಟೀಲ್ ಚುನಾವಣೆ ಕಾರ್ಯನಿರ್ವಹಿಸಿದರು.
ಮಹಿಳಾ ಉಪಾಧ್ಯಕ್ಷರಾಗಿ ಭವಾನಿದೇವಿ, ಖಜಾಂಚಿ ನಂದೀಶ್, ಸಹ ಕಾರ್ಯದರ್ಶಿಗಳಾಗಿ ಉಮೇಶ್, ಸಂಘಟನಾ ಕಾರ್ಯದರ್ಶಿಯಾಗಿ ಶಿವರಾಜ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ನೂತನ ಅಧ್ಯಕ್ಷರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರನ್ನು
ಸಂಘದ ನಿರ್ದೇಶಕರು, ಪದಾಧಿಕಾರಿಗಳು ಸನ್ಮಾನಿಸಿದರು.
ಶಿಕ್ಷಕರ ಹಿತ ಕಾಯಲು ಶ್ರಮಿಸುವೆ: ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ಮಹಾದೇವಸ್ವಾಮಿ ಮಾತನಾಡಿ, ನಮ್ಮ ತಂಡಕ್ಕೆ ಮತ ಹಾಕಿ ಗೆಲ್ಲಿಸಿದ ಜಿಲ್ಲೆಯ ಸಮಸ್ತ ಶಿಕ್ಷಕರಿಗೆ ಈ ಮೂಲಕ ಧನ್ಯವಾದ ಸಲ್ಲಿಸುತ್ತೇವೆ. ನಮ್ಮ ಗೆಲುವನ್ನು ಸಮಸ್ತ ಶಿಕ್ಷಕರಿಗೆ ಅರ್ಪಿಸುತ್ತೇವೆ. ಶಿಕ್ಷಕರ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿ ಸಂಘ ಶ್ರಮಿಸುತ್ತದೆ. ಸಂಘದ ಪದಾಧಿಕಾರಿಗಳು ಎಲ್ಲರೂ ಸೇರಿ ಜಿಲ್ಲೆಯಲ್ಲಿ ಉತ್ತಮ ಕಾರ್ಯ ನಿರ್ಮಾಣ ಮಾಡುವ ಚಿಂತನೆ ಹೊಂದಲಾಗಿದೆ. ಶೈಕ್ಷಣಿಕ ಕಾರ್ಯಕ್ರಮ, ಕಾರ್ಯಾಗಾರಗಳು ಹಾಗೂ
ಜಿಲ್ಲೆಯಲ್ಲಿ ಗುರುಭವನ, ಜಿಲ್ಲೆಯ ತಾಲೂಕುಗಳಲ್ಲಿ ಗುರುಭವನ ಮಾಡುವ ಸಂಕಲ್ಪ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಚಾಮರಾಜನಗರ ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಕಾರ್ಯದರ್ಶಿ ಸುಧಾ, ಕೊಳ್ಳೇಗಾಲ ಅಧ್ಯಕ್ಷೆ ಸವಿತಾ, ಕಾರ್ಯದರ್ಶಿ ನಾಗೇಶ್, ಹನೂರು ಅಧ್ಯಕ್ಷ ಮಾದೇಶ್, ಪದಾಧಿಕಾರಿಗಳಾದ ಭರತ್ ಭೂಷಣ್, ಕೃಷ್ಣ ಮೂರ್ತಿ,ಮಹಮ್ಮದ್ ಸಮೀವುಲ್ಲಾ, ಶಿವಶಂಕರ್, ಧನಂಜಯ್, ಪುಟ್ಟಮಾದಮ್ಮ, ಗಿರೀಶ್ ಇತರರು ಭಾಗವಹಿಸಿದ್ದರು.