- ಕೆರೆಗಳಿಗೆ ನೀರು ತುಂಬಿಸುವ ತನಕ ಅಹೋರಾತ್ರಿ ಕೈ ಬಿಡಲ್ಲ
ಚಾಮರಾಜನಗರ : ಮೂರನೆಯ ಹಂತದ ಕೆರಗಳಿಗೆ ಕಳೆದ ಮೂರು ವರ್ಷಗಳಿಂದಲ್ಲೂ ನೀರು ತುಂಬಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಮೂರನೆಯ ಹಂತದ ಅಚ್ಚಕಟ್ಟು ಗ್ರಾಮದ ರೈತರು ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಪಂಪ್‌ಹೌಸ್ ಮುಂಭಾಗದಲ್ಲಿ ಅಹೋರಾತ್ರಿ ಧರಣೆ ಆರಂಭಿಸಿದ್ದಾರೆ.
ತಾಲೂಕಿನ ಅಮಚವಾಡಿ, ಲಕ್ಷ್ಮೀಪುರ, ಮಹದೇಶ್ವರ ಕಾಲೋನಿ, ಸಿದ್ಧಲಿಂಗಪುರ, ಬಡಗಲಪುರ, ನಾನೇಗಾಲ, ಬೊಕ್ಕೇಪುರ, ಕಟ್ಟವಾಡಿ, ಕೊತ್ತಲವಾಡಿ, ನಿಜಲಿಂಗನಪುರ, ನರಸಮಂಗಲ, ಯಾನಗಳ್ಳಿ, ಕಿಲಗೆರೆ, ಮಾದಲವಾಡಿ ಗ್ರಾಮದ ರೈತರು ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಪಂಪ್ ಹೌಸ್ ಮುಂಭಾಗದಲ್ಲಿ ಶಾಮಿಯಾನ ಟೆಂಟ್ ಹಾಕಿ ಅಹೋರಾತ್ರಿ ಧರಣೆ ನಡೆಸಿದರು.
ಮೂರನೆಯ ಹಂತದ ಕೆರಗಳಾದ ಹುತ್ತೂರು ಕೆರೆಯಿಂದ ಕಿಲಗೆರೆಕೆರೆ, ಮೇಲೂರುಕೆರೆ, ನರಸಮಂಗಲಕೆರೆ, ಮೂರುತೂಬಿನ ಕೆರೆ, ಎಣ್ಣೆಹೊಳೆಕೆರೆ ಕೊನೆಯದಾಗಿ ಮರಗದಕೆರೆಗಳಿಗೆ ನೀರು ತುಂಬಿಸುವ ಕೆಲಸ ವ್ಯವಸ್ಥಿತವಾಗಿ ಆಗುತ್ತಿಲ್ಲ 2021ನೇ ಇಸವಿಯಲ್ಲಿ ಕೊನೆಯಬಾರಿ ನೀರು ತುಬಿಸಿದ್ದು ಬಿಟ್ಟರೆ ಅಂದಿನಿಂದಲ್ಲೂ ಇದುವರೆಗೂ ನೀರು ಹರಿಸಿಲ್ಲ. ಈಬಾರಿ ತೀವ್ರ ಬರಗಾಲವಾಗಿದ್ದು, ಜನ, ಜಾನವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಕಳೆದ ನಾಲ್ಕು ತಿಂಗಳಿಂದಲ್ಲೂ ವೀರಾವರಿ ನಿಗಮದ ಅಧಿ ಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಕೆರೆಗಳಿಗೆ ನೀರು ತುಂಬಿಸುವಂತೆ ಇಂದು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಕೂಡಲೇ ಕೆರೆಗಳಿಗೆ ನೀರು ಹರಿಸಿ ಜನ
ಜಾನುವಾರುಗಳಿಗೆ ತಕ್ಷಣವೇ ನೀರು ಕೊಡುವ ಕೆಲಸ ಮಾಡಬೇಕು ಇಲ್ಲದಿದ್ದರೆ ಚಾಮರಾಜನಗರ ಜಿಲ್ಲಾಡಳಿತ ಭವನದ ಎದರು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾನಿರತರು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ನೀರಾವರಿ ಇಲಾಖೆಯ ಇಇ ಗುರು ಪ್ರಸಾದ್, ಎಇಇ ಮಹೇಶ್ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು. ಮೂರನೆಯ ಹಂತದ ಕೆರಗಳಿಗೆ ಕಳೆದ ಮೂರು ವರ್ಷಗಳಿಂದಲ್ಲೂ ನೀರು ತುಂಬಿಸುತ್ತಿಲ್ಲ, ಈಗ ಬರಗಾಲ ಅವರಿಸಿ ಜನ,ಜಾನುವಾರ ತುಂಬಾ ಸಮಸ್ಯೆಯಾಗಿದೆ. ಕೂಡಲೇ ನಮ್ಮ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಪ್ರತಿಭಟನಾನಿರತ ರೈತರ ಅಧಿಕಾರಗಳನ್ನು ತರಾಟೆ ತೆಗೆದುಕೊಂಡರು. ನಾವು ಯಾರು ರೈತ ವಿರೋಧಿಗಳಲ್ಲ. ಸರ್ಕಾರದಲ್ಲಿ ಅವಕಾಶ ಇರುವ 115 ದಿನಗಳ ಮಾತ್ರ ನಾವು ಮಾಡುವುದು 300 ದಿನಗಳ ಕಾಲ ಆಗಾಗಿ ನಾವು ಯಾರು ರೈತ ವಿರೋಧಿಗಳಲ್ಲ. ಎಲ್ಲ ಕಡೆಯಿಂದಲ್ಲೂ ಒತ್ತಡ ಇರುತ್ತದೆ. ಮೂರನೆಯ ಹಂತ ಸಮಸ್ಯೆ ಹೇಳಿದ್ದೀರಿ. ನಾಲ್ಕನೆಯ ಹಂತದ ಕೆರೆಗಳಿಗೆ ಅರ್ಧ ನೀರು ಬಿಡಲಾಗಿದೆ.. ಈಗ ನಿಮ್ಮ ಭಾಗಕ್ಕೆ ನೀರು ಬಿಟ್ಟರೆ ಅಲ್ಲಿಯ ನೀರು ಸಂಪೂರ್ಣ ಇಂಗಿ ಹೋಗುತ್ತದೆ. ಮತ್ತೆ ಎಡನೆಯ ಹಂತದವರು ನೀರು ಬಿಡುವಂತೆ ಗಲಾಟೆ’ ಮಾಡುತ್ತಾರೆ. ಯಾವುದೇ ಒಂದು ಕೆರೆ ಸಂಪೂರ್ಣವಾಗಿ ನೀರು ತುಂಬದೆ ಬೇರೆ ಕಡೆ ನೀರು ಬಿಟ್ಟರೆ ಸಮಸ್ಯೆ ಬಗೆಹರಿಯಲ್ಲ ಒಂದು ತಿಂಗಳು ಕಾಲಾವಕಾಶ ಕೊಡಿ ನಿಮ್ಮ ಕೆರೆಗಳಿಗೆ ಸಂಪೂರ್ಣ ಭರ್ತಿ ಮಾಡಿಸಿಕೊಡುತ್ತೇನೆ ಎಂದು ಇಇ ಗುರುಪ್ರಸಾದ್ ಕೇಳಿದಾದ ಪ್ರತಿಭಟನಾನಿರತು ಒಪ್ಪದೆ ಕೆರೆಗಳಿಗೆ ನೀರುತುಂಬಿಸುವ ತನಕ ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದ್ದಾರೆ.