ಶ್ರೀಚಾಮರಾಜೇಶ್ವರ ರಥೋತ್ಸವ: ವರ್ತಕರ ಸಂಘದಿಂದ ಅನ್ನಸಂತರ್ಪಣೆ

ಚಾಮರಾಜನಗರ : ಶ್ರೀಚಾಮರಾಜೇಶ್ವರ ರಥೋತ್ಸವ ಅಂಗವಾಗಿ ವರ್ತಕರ ಸಂಘದ ವತಿಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ನಗರದ ಗುರುನಂಜಶೆಟ್ಟಿಛತ್ರದ ಮುಂಭಾಗದಲ್ಲಿ ಅನ್ನಸಂತರ್ಪಣೆ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದಗಣೇಶ್ ಮಾತನಾಡಿ, ಐತಿಹಾಸಿಕ ಶ್ರೀಚಾಮರಾಜೇಶ್ವರ ರಥೋತ್ಸವದ
ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯು ನಮ್ಮ ಸಂಘದ ವತಿಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಗಿದೆ. ಶ್ರೀಚಾಮರಾಜೇಶ್ವರ ರಥೋತ್ಸವದಲ್ಲಿ ಭಾಗಿಯಾಗಿರುವ ನೂತನ ದಂಪತಿಗಳಿಗೆ,.. ಭಕ್ತರಿಗೆ ಸನ್ಮಂಗಳವಾಗಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಂಕರ್ ಉಪಾಧ್ಯಕ್ಷ ರಾಜಣ್ಣ, ಸಹ ಕಾರ್ಯದರ್ಶಿ ಕಮಲ್‌, ಖಜಾಂಚಿ ವಿಶ್ವಕುಮಾರ್, ಮಾಜಿ ಅಧ್ಯಕ್ಷ ಕೆ.ಎಸ್ .ರವಿಕುಮಾರ್, ಎಸ್‌ಆರ್‌ಎಸ್ ಶ್ರೀನಿವಾಸ್, ಜಿ. ಆರ್.ಅಶ್ವಥ್ ನಾರಾಯಣ್, ಸಿ.ವಿ.ಶ್ರೀನಿವಾಸಶೆಟ್ಟಿ, ಬಾಲಸುಬ್ರಹ್ಮಣ್ಯ, ಹೆಚ್.ಬಿ.ರಾಜಶೇಖರ್, ಸಿವಿಎಎಸ್‌ಎಸ್ ಎನ್ ಅಧ್ಯಕ್ಷ ಸಿ.ಪಿ. ಪದ್ಮಪ್ರಸಾದ್ ನಿರ್ದೇಶಕರಾದ ಕಾಗಲವಾಡಿ ಚಂದ್ರು, ಎ.ಶ್ರೀನಿವಾಸನ್, ಮಹೇಶ್‌ಕುಮಾರ್, ಮೋಹನ್, ಸತೀಶ್ , ನಾರಾಯಣ, ಮಂಜೇಶ್ ಕುಮಾರ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *