- ಡಿಯುಡಬ್ಲ್ಯೂಜೆ ಕಾರ್ಯಕ್ಕೆ ಎನ್.ಮಹೇಶ್ ಮೆಚ್ಚುಗೆ
ಚಾಮರಾಜನಗರ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿಪ್ರಶಸ್ತಿ ನಿಧಿಗೆ ಮಾಜಿ ಸಚಿವ ಎನ್.ಮಹೇಶ್ ಅವರು ಧರ್ಮಪತ್ನಿ ವಿಜಯಮಹೇಶ್ ಅವರ ಹೆಸರಿನಲ್ಲಿ
ಹಾಗೂ ಗುತ್ತಿಗೆದಾರ ಹೊಸೂರು ಜಗದೀಶ್ ಅವರು ತಂದೆ ಸಿದ್ದಲಿಂಗದೇವರು ಅವರ ಹೆಸರಿನಲ್ಲಿ ತಲಾ 1. 10 ಲಕ್ಷ ರೂ.ಗಳ ಚೆಕ್ ನ್ನು ಸಂಘಕ್ಕೆ ನೀಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ, ಪ್ರಧಾನ
ಕಾರ್ಯದರ್ಶಿ ಪ್ರಸಾದ್ ಎಸ್
ಲಕ್ಕೂರು ಅವರಿಗೆ ನೀಡಿದರು. ಸಂಘದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಚೆಕ್ ವಿತರಿಸಿದ ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಬಹಳ ಉತ್ತಮವಾದ ತೀರ್ಮಾನವನ್ನು ಈ ವರ್ಷದಿಂದ ಪ್ರಾರಂಭ ಮಾಡಿದೆ. ನಾವು ಕೊಡುವ ಒಂದು ಲಕ್ಷ ಏನೇನು ಅಲ್ಲ. ಆದರೆ ನಾವು ನೀಡಿರುವ ಸಣ್ಣ ಕಾಣಿಕೆ ದೊಡ್ಡ ಕೊಡುಗೆ ಕೊಡುತ್ತದೆ.. ಪ್ರತಿವರ್ಷವೂ ತಮ್ಮ ಧರ್ಮಪತ್ನಿ ವಿಜಯಮಹೇಶ್ ಅವರನ್ನು ನೆನಪಿಸುವ ಕೆಲಸವನ್ನು ಪತ್ರಿಕಾ ಗೆಳೆಯರು ಮಾಡುತ್ತಿದ್ದೀರಿ. ಅ ನಿಲುವು ಬಹಳ ದೊಡ್ಡವಿಚಾರವಾಗಿದೆ. ನೋಡಲಿಕ್ಕೆ ಪ್ರಶಸ್ತಿ ಸಣ್ಣದು ಅನ್ನಿಸುತ್ತದೆ. ಆದರೆ ಅದರ ವ್ಯಾಪಿ ಬಹಳ ದೊಡ್ಡದು ಬಹಳ ಮಹತ್ತರ ತೀರ್ಮಾನ ಮಾಡಿದ್ದೀರಿ. ಅದು ಯಶಸ್ಸಿನ ಹಂತಕ್ಕೆ ಬಂದಿದೆ. ಈ ವರ್ಷದ ಪ್ರಶಸ್ತಿ 10 ಸಾವಿರದ ಜೊತೆಗೆ ದತ್ತಿ ಪ್ರಶಸ್ತಿಗೂ 1 ಲಕ್ಷ ರೂ ಚೆಕ್ ಕೊಡುತ್ತಿದ್ದೇನೆ ಎಂದರು.
ಗುತ್ತಿಗೆದಾರ ಹೊಸೂರು ಜಗದೀಶ್ ಮಾತನಾಡಿ ನಾನೂ ಕೂಡ ತಮ್ಮ ತಂದೆ ಸಿದ್ದಲಿಂಗದೇವರು ಅವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡುತ್ತಾ ಬರುತ್ತಿದ್ದು,
ಈ ಬಾರಿ 1.10 ಲಕ್ಷ ರೂ. ದತ್ತಿ ಪ್ರಶಸ್ತಿನಿಧಿಗೆ ನೀಡಿದ್ದೇನೆ. ಎಲ್ಲ ಪತ್ರಕರ್ತರಿಗೂ ಒಳ್ಳೆಯದಾಗಲಿ ಎಂದು ಪತ್ರಿಕಾ ಸ್ನೇಹಿತರಿಗೆ ಅಬಾರಿಯಾಗಿರುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾಸ್ ಎಸ್.ಲಕ್ಕೂರು, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಂದ್ರ, ಖಜಾಂಚಿ ಪುಟ್ಟರಾಜು, ಪತ್ರಕರ್ತರು ಹಾಜರಿದ್ದರು.