ಜೂ. 28ರಂದು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ : 66,601 ಮಕ್ಕಳಿಗೆ ಲಸಿಕೆ

ಚಾಮರಾಜನಗರ: ಆಗತಾನೆ ಹುಟ್ಟಿದ ಮಗುವಿನಿಂದ 5 ವರ್ಷದ ಒಳಗಿನ ಮಕ್ಕಳಿಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಜೂನ್ 28ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಪೋಲಿಯೋ ಲಸಿಕೆ ನೀಡಲಾಗುತ್ತದೆ. 

ಜೂನ್ 28ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಪೋಲಿಯೋ ಬೂತ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 29 ರಿಂದ ಜುಲೈ 1 ರವರೆಗೆ ಮನೆ ಮನೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು. ಈ ಕಾರ್ಯಕ್ರಮಕ್ಕೆ ಪ್ರತಿ ತಾಲ್ಲೂಕಿನಲ್ಲಿ ತºಶೀಲ್ದಾರ್ ರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ 66,601 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 

ಚಾಮರಾಜನಗರ ತಾಲೂಕಿನಲ್ಲಿ 23709, ಗುಂಡ್ಲುಪೇಟೆ ತಾಲೂಕಿನಲ್ಲಿ 13992, ಕೊಳ್ಳೇಗಾಲ ತಾಲೂಕಿನಲ್ಲಿ 12124, ಹನೂರು ತಾಲೂಕಿನಲ್ಲಿ 11508 ಹಾಗೂ ಯಳಂದೂರು ತಾಲೂಕಿನಲ್ಲಿ 5268 ಮಕ್ಕಳು ಸೇರಿದಂತೆ ಒಟ್ಟು 66601 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 

ಜಿಲ್ಲೆಯಲ್ಲಿ 640 ಪಲ್ಸ್ ಪೋಲಿಯೋ ಬೂತುಗಳನ್ನು ತೆರೆಯಲಾಗಿದ್ದು, ಇದರಲ್ಲಿ ನಗರ ಪ್ರದೇಶಗಳಲ್ಲಿ 115 ಬೂತ್‍ಗಳು, ಗ್ರಾಮೀಣ ಪ್ರದೇಶದಲ್ಲಿ 525 ಬೂತ್‍ಗಳನ್ನು ತೆರೆಯಲಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 200, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 164, ಕೊಳ್ಳೇಗಾಲ ತಾಲ್ಲೂಕು 93, ಹನೂರು ತಾಲ್ಲೂಕು 137 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 46 ಬೂತ್‍ಗಳನ್ನು ತೆರೆಯಲಾಗಿದೆ. 

ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ಜಿಲ್ಲೆಯಾದ್ಯಂತ 126 ಮೇಲ್ವಿಚಾರಕರನ್ನು ಹಾಗೂ 2528 ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಿಕೊಳ್ಳಲಾಗಿದೆ. ಒಟ್ಟು 23 ಟ್ರ್ಯಾನ್ಸಿಟ್ ಬೂತ್‍ಗಳು ಹಾಗೂ 5 ಮೊಬೈಲ್ ಬೂತ್‍ಗಳನ್ನು ಸಹ ತೆರೆಯಲಾಗಿದೆ.

ಜೂನ್ 28ರಂದು ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಗ್ರಾಮಾಂತರ ಪ್ರದೇಶಗಳಲ್ಲಿ ಎರಡನೇ ಮತ್ತು ಮೂರನೇ ದಿನ ಮನೆ ಮನೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ. ಪಟ್ಟಣ ಪ್ರದೇಶದಲ್ಲಿ ಎರಡನೇ, ಮೂರನೇ ದಿನ ಹಾಗೂ ನಾಲ್ಕನೇ ದಿನವು ಸಹ ಮನೆ ಮನೆ ಭೇಟಿ ಲಸಿಕೆ ನೀಡಲಾಗುತ್ತದೆ. ಪಟ್ಟಣ ಪ್ರದೇಶದಲ್ಲಿ ಒಟ್ಟು 41846 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 192483 ಮನೆಗಳ ಭೇಟಿ ಮಾಡಬೇಕಾಗಿದ್ದು, ಒಟ್ಟು 2,34,329 ಮನೆಗಳಿಗೆ ಭೇಟಿ ನೀಡಲಾಗುವುದು. 

ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಭಾರತದಲ್ಲಿ 1995 ರಿಂದಲೂ ಒಂದು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ನಡೆಸುತ್ತಿದ್ದು, ಆಗತಾನೆ ಹುಟ್ಟಿದ ಮಗುವಿನಿಂದ 5 ವರ್ಷದ ಎಲ್ಲಾ ಮಕ್ಕಳಿಗೂ ಈ ಹಿಂದೆ ಎμÉ್ಟೀ ಬಾರಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿದ್ದರೂ ಸಹ ಜೂನ್ 28ರ ಭಾನುವಾರದಂದು ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು. ತಂದೆ ತಾಯಿ, ಪೆÇೀಷಕರು, ಚುನಾಯಿತ ಪ್ರತಿನಿಧಿಗಳು, ಧಾರ್ಮಿಕ ಮತ್ತು ಸಮುದಾಯದ ಮುಖಂಡರು, ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಹಕಾರ ನೀಡಿ ತಮ್ಮ ಪ್ರದೇಶಗಳಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

ಲಸಿಕೆ ನೀಡಲು 612 ಬೂತ್ ಗಳ ಸ್ಥಾಪನೆ : ಜಿಲ್ಲೆಯಲ್ಲಿ ಒಟ್ಟು 612 ಬೂತ್‍ಗಳಲ್ಲಿ 66601 ಮಕ್ಕಳಿಗೆ ಪೆÇೀಲಿಯೋ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. 

ಚಾಮರಾಜನಗರ ತಾಲೂಕಿನಲ್ಲಿ ನಗರ ಪ್ರದೇಶದಲ್ಲಿ 7010, ಗ್ರಾಮೀಣ ಪ್ರದೇಶದಲ್ಲಿ 16699 ಸೇರಿದಂತೆ ಒಟ್ಟು 23709 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ನಗರ ಪ್ರದೇಶದಲ್ಲಿ 2006, ಗ್ರಾಮೀಣ ಪ್ರದೇಶದಲ್ಲಿ 11986 ಸೇರಿದಂತೆ ಒಟ್ಟು 13992, ಕೊಳ್ಳೇಗಾಲ ತಾಲೂಕಿನಲ್ಲಿ ನಗರ ಪ್ರದೇಶದಲ್ಲಿ 4962, ಗ್ರಾಮೀಣ ಪ್ರದೇಶದಲ್ಲಿ 7162 ಸೇರಿದಂತೆ ಒಟ್ಟು 121224, ಹನೂರು ತಾಲೂಕಿನಲ್ಲಿ ನಗರ ಪ್ರದೇಶದಲ್ಲಿ 987, ಗ್ರಾಮೀಣ ಪ್ರದೇಶದಲ್ಲಿ 10521 ಸೇರಿದಂತೆ ಒಟ್ಟು 11508 ಹಾಗೂ ಯಳಂದೂರು ತಾಲೂಕಿನಲ್ಲಿ ನಗರ ಪ್ರದೇಶದಲ್ಲಿ 464, ಗ್ರಾಮೀಣ ಪ್ರದೇಶದಲ್ಲಿ 4804 ಸೇರಿದಂತೆ ಒಟ್ಟು 5268 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಒಟ್ಟಾರೆ ನಗರ ಪ್ರದೇಶದಲ್ಲಿ 15429 ಹಾಗೂ ಗ್ರಾಮೀಣ ಪ್ರದೇಶದಲ್ಲಿ 51172 ಸೇರಿದಂತೆ ಒಟ್ಟು 66601 ಮಕ್ಕಳಿಕೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 

ಚಾಮರಾಜನಗರ ತಾಲೂಕಿನ ನಗರ ಪ್ರದೇಶದಲ್ಲಿ 39 ಬೂತ್ ಗಳು, ಗ್ರಾಮೀಣ ಪ್ರದೇಶದಲ್ಲಿ 150 ಬೂತ್ ಗಳು ಸೇರಿದಂತೆ ಒಟ್ಟು 189 ಬೂತ್ ಗಳನ್ನು ತೆರೆಯಲಾಗಿದೆ. ಗುಂಡ್ಲುಪೇಟೆ ತಾಲೂಕಿನ ನಗರ ಪ್ರದೇಶದಲ್ಲಿ 16 ಬೂತ್ ಗಳು, ಗ್ರಾಮೀಣ ಪ್ರದೇಶದಲ್ಲಿ 140 ಬೂತ್ ಗಳು ಸೇರಿದಂತೆ ಒಟ್ಟು 156 ಬೂತ್‍ಗಳು, ಕೊಳ್ಳೇಗಾಲ ತಾಲೂಕಿನ ನಗರ ಪ್ರದೇಶದಲ್ಲಿ 28 ಬೂತ್ ಗಳು, ಗ್ರಾಮೀಣ ಪ್ರದೇಶದಲ್ಲಿ 62 ಬೂತ್ ಗಳು ಸೇರಿದಂತೆ ಒಟ್ಟು 90 ಬೂತ್ ಗಳು, ಹನೂರು ನಗರ ಪ್ರದೇಶದಲ್ಲಿ 5 ಬೂತ್ ಗಳು, ಗ್ರಾಮೀಣ ಪ್ರದೇಶದಲ್ಲಿ 129 ಬೂತ್ ಗಳು ಸೇರಿದಂತೆ ಒಟ್ಟು 134 ಬೂತ್ ಗಳು ಹಾಗೂ ಯಳಂದೂರು ತಾಲೂಕಿನ ನಗರ ಪ್ರದೇಶದಲ್ಲಿ 4 ಬೂತ್ ಗಳು, ಗ್ರಾಮೀಣ ಪ್ರದೇಶದಲ್ಲಿ 39 ಬೂತ್ ಗಳು ಸೇರಿದಂತೆ ಒಟ್ಟು 43 ಬೂತ್ ಗಳನ್ನು ತೆರೆಯಲಾಗಿದೆ. ಒಟ್ಟಾರೆ ನಗರ ಪ್ರದೇಶದಲ್ಲಿ 92 ಹಾಗೂ ಗ್ರಾಮೀಣ ಪ್ರದೇಶÀದಲ್ಲಿ 520 ಸೇರಿದಂತೆ ಒಟ್ಟು 612 ಬೂತ್ ಗಳನ್ನು ತೆರೆಯಲಾಗುವುದು. 

ಒಟ್ಟು 23 ಟ್ರಾನ್ಸಿಟ್ ಬೂತ್‍ಗಳನ್ನು ತೆರೆಯಲಾಗಿದ್ದು, ಚಾಮರಾಜನಗರ ತಾಲೂಕಿನಲ್ಲಿ 10, ಗುಂಡ್ಲುಪೇಟೆ ತಾಲೂಕಿನಲ್ಲಿ 6, ಕೊಳ್ಳೇಗಾಲ ತಾಲೂಕಿನಲ್ಲಿ 3, ಹನೂರು ತಾಲೂಕಿನಲ್ಲಿ 3 ಹಾಗೂ ಯಳಂದೂರು ತಾಲೂಕಿನಲ್ಲಿ ಒಂದು ಟ್ರಾನ್ಸಿಟ್ ಬೂತ್‍ಗಳನ್ನು ತೆರೆಯಲಾಗಿದೆ. 

ಒಟ್ಟು 5 ಮೊಬೈಲ್ ತಂಡಗಳಿದ್ದು, ಚಾಮರಾಜನಗರ ತಾಲೂಕಿನಲ್ಲಿ ಒಂದು, ಗುಂಡ್ಲುಪೇಟೆ ಮತ್ತು ಯಳಂದೂರು ತಾಲೂಕಿನಲ್ಲಿ ತಲಾ 2 ಮೊಬೈಲ್ ತಂಡಗಳು ನಿಯೋಜನೆಯಾಗಿವೆ. 

ಚಾಮರಾಜನಗರ ತಾಲೂಕಿನಲ್ಲಿ 778 ಲಸಿಕಾ ಕಾರ್ಯಕರ್ತರು, 39 ಲಸಿಕಾ ಮೇಲ್ವಿಚಾರಕರು, ಗುಂಡ್ಲುಪೇಟೆ ತಾಲೂಕಿನಲ್ಲಿ 664 ಲಸಿಕಾ ಕಾರ್ಯಕರ್ತರು, 33 ಮೇಲ್ವಿಚಾರಕರು, ಕೊಳ್ಳೇಗಾಲ ತಾಲೂಕಿನಲ್ಲಿ 366 ಲಸಿಕಾ ಕಾರ್ಯಕರ್ತರು, 17 ಮೇಲ್ವಿಚಾರಕರು, ಹನೂರು ತಾಲೂಕಿನಲ್ಲಿ 544 ಲಸಿಕಾ ಕಾರ್ಯಕರ್ತರು, 27 ಮೇಲ್ವಿಚಾರಕರು ಹಾಗೂ ಯಳಂದೂರು ತಾಲೂಕಿನಲ್ಲಿ 196 ಲಸಿಕಾ ಕಾರ್ಯಕರ್ತರು, 10 ಮೇಲ್ವಿಚಾರಕರು ಸೇರಿದಂತೆ ಒಟ್ಟು 2528 ಲಸಿಕಾ ಕಾರ್ಯಕರ್ತರು ಹಾಗೂ 126 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *