ಚಾಮರಾಜನಗರ: ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಗೆ ಕವಿ ಸಿ.ಶಂಕರ ಅಂಕನಶೆಟ್ಟಿಪುರ ರವರು ಆಯ್ಕೆಯಾಗಿದ್ದಾರೆ.
ಇವರು ಈವರೆಗೆ ಭಾವನೆಗಳು, ಹೃದಯ, ಕಿಚ್ಚು, ಪೊರಕೆ, ನಾನು ಮತ್ತು ಅವಳು, ಆದಿದ್ರಾವಿಡರ ಹೆಜ್ಜೆ ಗುರುತುಗಳು, ಕನ್ನಡಿ, ಇತಿಹಾಸ ಪುಟದಲ್ಲೊಂದು ಸ್ನೇಹ ಚರಿತ್ರೆ ಹಾಗೂ ಸಂಚಲನ ಎಂಬ ಒಂಬತ್ತು ಕೃತಿಗಳನ್ನು ರಚಿಸಿರುತ್ತಾರೆ. ಇವರ ಈ ಸೇವೆಯನ್ನು ಗುರುತಿಸಿ ಕದಂಬ ಸೇವಾ ರತ್ನ ಪ್ರಶಸ್ತಿ, ಕನ್ನಡ ಶ್ರೀ ಪ್ರಶಸ್ತಿ, ಕಾವ್ಯ ಶ್ರೀ ಪ್ರಶಸ್ತಿ, ಕುವೆಂಪು ಸದ್ಭಾವನಾ ಪ್ರಶಸ್ತಿ, ಸುವರ್ಣ ಕನ್ನಡಿಗ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ಕರ್ನಾಟಕ ಪ್ರಜಾ ಸೇವಾ ರತ್ನ ಪ್ರಶಸ್ತಿ, ಜನಚೈತನ್ಯ ಪ್ರಶಸ್ತಿ, ಕಥಾ ಭೂಷಣ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕವಿ ಭೀಮರತ ಪ್ರಶಸ್ತಿ, ಕಾವ್ಯ ಚೂಡಮಣಿಪ್ರಶಸ್ತಿ, ಉತ್ತಮ ಸಾಹಿತಿ ಪ್ರಶಸ್ತಿ, ಕವಿರತ್ನ ಪ್ರಶಸ್ತಿ ಅಲ್ಲದೇ ಚಾಮರಾಜನಗರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ಜಿಲ್ಲಾ ಅತ್ಯುತ್ತಮ ಯುವ ಪ್ರಶಸ್ತಿ, ಚಾಮರಾಜನಗರ ಜಿಲ್ಲಾ ಆಡಳಿತ ನೀಡುವ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ-೨೦೨೫ ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇವರ ‘ಪೊರಕೆ’ ಮತ್ತು ‘ಕನ್ನಡಿ’ ಕೃತಿಗಳು ರಾಜ್ಯ ಕೇಂದ್ರ ಸಾರ್ವಜನಿಕ ಗ್ರಂಥಾಲಯ ಪುಸ್ತಕ ಖರೀದಿ ಮಾಡುವ ಆಯ್ಕೆ ಸಮಿತಿಯಲ್ಲಿ ಆಯ್ಕೆಗೊಂಡಿರುವುದು ಗಮನಾರ್ಹ ವಿಷಯವಾಗಿದೆ. ಇವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ, ಕಾಡುವ ಕೀರಂ, ಮೈಸೂರು ದಸರಾ ಪ್ರಾದೇಶಿಕ ಕವಿಗೋಷ್ಠಿ ಹೀಗೆ ಹಲವು ಕವಿಗೋಷ್ಠಿಗಳಲ್ಲಿ ಭಾಗಿಯಾಗಿ ಕಾವ್ಯ ವಾಚನ ಮಾಡಿರುತ್ತಾರೆ.
ಇದೇ ಶನಿವಾರ ಮೈಸೂರು ಮಾನಸ ಗಂಗೋತ್ರಿಯ ಆವರಣದಲ್ಲಿರುವ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆಯುವ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಕಾವ್ಯ ವಾಚನ ಮಾಡಲಿದ್ದಾರೆ.