- ಡಿ.ದೇವರಾಜು ಅರಸ್ ಜಯಂತಿ : ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ
ಚಾಮರಾಜನಗರ: ಕ್ರೀಡೆಯಿಂದ ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿ ಆಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಎನ್.ವಿಶ್ವನಾಥ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಅವರ ಜಯಂತಿ ಪ್ರಯುಕ್ತವಾಗಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ನಿಲಯಗಳ ವಿದ್ಯಾರ್ಥಿಗಳಿಗೆ ಅಯೋಜಿಸಿದ ಕ್ರೀಡಾಕೂಟ, ವಿವಿಧ ಸ್ಪರ್ಧಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವರ್ಷದಂತೆ ಡಿ.ದೇವರಾಜು ಅರಸ್ ಅವರ ‘ಜಯಂತಿ ಆ. 20 ರಂದು ಆಚರಣೆ ಮಾಡಲಾಗುತ್ತಿತ್ತು ಈ ಬಾರಿ ಸಚಿವರ ಆದೇಶದ ಮೇರೆಗೆ ಆ. 22 ರಂದು ಆಚರಣೆ ಮಾಡಲಾಗುವುದು ಅದರ ಪೂರ್ವಭಾವಿಯಾಗಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಕ್ರೀಡಾ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ ಆಗುತ್ತದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯತಾಲೂಕು ಅಧಿಕಾರಿ ಲಿಂಗರಾಜು, ನಿಲಯಪಾಲಕರಾದ ಚಿನ್ನಸ್ವಾಮಿ, ಲಿಂಗಣ್ಣ, ಅಶ್ವಥ್ ನಾರಾಯಣ್, ಸುನೀತ, ಶಿಲ್ಪ, ಭಾಗ್ಯಲಕ್ಷ್ಮೀ, ಹೆಚ್.ಬಿ.ಸ್ವಾಮಿ, ಗೋವಿಂದರಾಜು, ರಂಗಸ್ವಾಮಿ ಇತರರು ಹಾಜರಿದ್ದರು
