ಪುಸ್ತಕ ಮೇಳದಲ್ಲಿ ಕಾಳಿಹುಂಡಿ ಶಿವಕುಮಾರ್ ರವರ ಪ್ರದರ್ಶನ ಮಳಿಗೆಗೆ ಭೇಟಿ, ಅಭಿನಂದನೆ.

ಮೈಸೂರಿನ ಲೇಖಕ ವಿಮರ್ಶಕ ಕಾಳಿಹುಂಡಿ ಶಿವಕುಮಾರ್ ರವರು ಸಂಗ್ರಹಿಸಿರುವ ಪತ್ರಿಕೆಗಳಲ್ಲಿ "ಮೈಸೂರು ದಸರಾ ಪರಂಪರೆ", ಕನ್ನಡ ನಾಡು ನುಡಿ, ಹಾಗೂ "ಆಕಾಶವಾಣಿ"ಯ ಕುರಿತಾಗಿ ಚಿತ್ರ-ಲೇಖನಗಳನ್ನು ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಎದುರಿಗೆ ಇರುವ ಸ್ಕೌಟ್ ಅಂಡ್ ಗೈಡ್ಸ್ ಆವರಣದಲ್ಲಿರುವ ಪುಸ್ತಕ ಮಳಿಗೆಯ ಸಂಖ್ಯೆ 94 ರಲ್ಲಿ ಪ್ರದರ್ಶನ ಮಾಡಿದ್ದು, ಈ ಪ್ರದರ್ಶನ ಮಳಿಗೆಗೆ ಮೈಸೂರು ಆಕಾಶವಾಣಿಯ ಸಮುದ್ಯತಾ ಕೇಳುಗರ ಬಳಗದ ಅಧ್ಯಕ್ಷ, ಹಾಗೂ ಆರ್‌ಎಮ್‌ಪಿಯ ನಿವೃತ್ತ ಹಿರಿಯ ಶುಶ್ರೂಷಕ ಕಣ್ಣೂರು ವಿ ಗೋವಿಂದಾಚಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಸಂಘಟನಾ ಕಾರ್ಯದರ್ಶಿ, ಲೇಖಕ ಮೈ ನಾ ಲೋಕೇಶ್,  ಮೈಸೂರಿನ ಕೆ ಎಸ್ ಆರ್ ಟಿ ಸಿ ಯ ಸಂಚಾರ ನಿಯಂತ್ರಕರಾದ, ಹಾಗೂ ಗಾಯಕಿಯಾದ ಜಿ ಎಸ್ ಭಾನುಮತಿ, ಅವರ ಪತಿ ಎಚ್ ಎಸ್ ನಟೇಶ್, ಮತ್ತು ಖಾಸಗಿ ನೌಕರ, ಗಾಯಕ ಧನರಾಜ್ ರವರು ಭೇಟಿ ನೀಡಿ ಈ ಸಂದರ್ಭದಲ್ಲಿ ಕಾಳಿಹುಂಡಿ ಶಿವಕುಮಾರ್ ಅವರನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *