ದಲಿತ ಸಿಎಂ ಆಗಲೇಬೇಕು, ಅದಕ್ಕಾಗಿ ಹೋರಾಟ ರೂಪಿಸೋಣ: ವೆಂಕಟರಮಣಸ್ವಾಮಿ (ಪಾಪು)

  • ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ ಅವರ ಪೈಕಿಯಲ್ಲಿ ಯಾರಾದರು ಮುಖ್ಯಮಂತ್ರಿ ಆಗಲಿ

 ಚಾಮರಾಜನಗರ: ದಲಿತ ಮುಖ್ಯಮಂತ್ರಿ ಆದಾಗ ಮಾತ್ರ ಅಂಬೇಡ್ಕ‌ರ್ ಜಯಂತಿಗೆ ಒಂದು ಅರ್ಥ ಬರುತ್ತದೆ ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಹೇಳಿದರು.

ತಾಲೂಕಿನ ಸಂತೇಮರಹಳ್ಳಿ ಡಾ.ಬಿ.ಆ‌ರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯ ವತಿಯಿಂದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜಯಂತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಪುಷ್ಪಾರ್ಚನೆ ಮಾಡಿ ಮಾತನಾಡಿದರು.          ಕಳೆದ 80 ವರ್ಷದಿಂದಲ್ಲೂ ಕಾಂಗ್ರೆಸ್‌ಗೆ ನಮ್ಮ ಸಮುದಾಯ ವೋಟ್ ಹಾಕಿಕೊಂಡು ಬಂದಿದೆ. ಕಾಂಗ್ರೆಸ್ ಒಂದು ಬಾರಿ ದಲಿತ ಮುಖ್ಯಮಂತ್ರಿ ಮಾಡಬೇಕಿತು. ಕೇವಲ ಸಿದ್ದರಾಮಯ್ಯನವರು ತಮ್ಮ ಸಮುದಾಯ ಮತಗಳಿಂದ ಮುಖ್ಯಮಂತ್ರಿ ಆಗಿಲ್ಲ ದಲಿತರ ವೋಟಿನಿಂದಲ್ಲೇ ಎಲ್ಲರೂ ಮುಖ್ಯಮಂತ್ರಿ ಆಗಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ದಲಿತರು ಹೆಚ್ಚಿನ ರೀತಿಯಲ್ಲಿ ಬೆಂಬಲ.ನೀಡಿದ್ದಾರೆ  ಎಂದು 2 ನೇ ಬಾರಿ ದಲಿತ ಮುಖ್ಯಮಂತ್ರಿ ಅವಕಾಶ ಮಾಡಿಕೊಡಬೇಕೆಂದು ದೊಡ್ಡ ಮನಸ್ಸು ಮಾಡಬೇಕಿತು. ಈಗ 8 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದಾರೆ. ಈಗ ದಲಿತ ಮುಖ್ಯಮಂತ್ರಿ ಚರ್ಚೆ ಆಗುತ್ತಿಲ್ಲ.ಈಗಲಾದರೂ 2 ವರ್ಷ ದಲಿತ ಮುಖ್ಯಮಂತ್ರಿ  ಮಾಡಿ 135ನೇ ಡಾ.ಬಿ.ಆ‌ರ್.ಅಂಬೇಡ್ಕರ್ ಜಯಂತಿ ಒಂದು ಅರ್ಥ ಬರುತ್ತದೆ ಎಂದರು.

ದಲಿತ ಸಿಎಂ ಆಗಲೇಬೇಕು : ದಲಿತ ಮುಖ್ಯಮಂತ್ರಿ ಆಗಲೇಬೇಕಿದೆ. ಅದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಹೋರಾಟ ರೂಪಿಸೋಣ. ದಲಿತ ಸಮುದಾಯದಲ್ಲಿ ಯಾರಾದರು ಮುಖ್ಯಮಂತ್ರಿ ಆಗಲಿ. ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ ಅವರ ಪೈಕಿಯಲ್ಲಿ ಯಾರಾದರು ಮುಖ್ಯಮಂತ್ರಿ ಆಗಲಿ ಎಂದರು.

ಒಳ ಮೀಸಲಾತಿ ಶೋಷಿತ ಸಮುದಾಯಗಳ ಪೂರ್ಣಪ್ರಮಾಣದ ಅನುಕೂಲವಾಗಿಲ್ಲ. ಇದೊಂದು ತಾತ್ಕಾಲಿಕ ಗಂಜಿಕೇಂದ್ರ. ಒಳ ಮೀಸಲಾತಿಯಿಂದ ಸ್ವಲ್ಪ ಜನತೆಗೆ ಅನುಕೂಲವಾಗಲಿದೆ. ಪರಿಶಿಷ್ಠ ಜಾತಿಯ ಕಟ್ಟಕಡೆಯ ವ್ಯಕ್ತಿಗೆ ಯಾವುದೇ ಅನುಕೂಲವಾಗಲ್ಲ. ಮೀಸಲಾತಿಗಿಂತ ದೊಡ್ಡ ಸಂಪತ್ತು ಸಿಕ್ಕಿಲ್ಲ. ಇಡೀ ರಾಷ್ಟ್ರದ ಸಕಲ ಸಂಪನ್ಮೂಲಗಳು ಸಮಾನವಾಗಿ ಹಂಚಿಕೆ ಆಗಬೇಕು ಆಗ ಮಾತ್ರ ಸಮಾನತೆ ಸಿಗುತ್ತದೆ ಎಂದರು.

ಅಂಬೇಡ್ಕ‌ರ್ ವಿಚಾರವಾದಿ ಡಾ.ಪಿ.ದೇವರಾಜು ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೇರೆಬೇರೆ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತದೇಶಕ್ಕೆ ಒಂದು ಶ್ರೇಷ್ಠ ಸಂವಿಧಾನವನ್ನು ಬರೆದುಕೊಡುವ ಮೂಲಕ ದೇಶದಲ್ಲಿ ವಾಸಿಸುವ ಪ್ರತಿ ನಾಗರಿಕನಿಗೂ ಸಮಾನತೆ ಕಲ್ಪಿಸಿಕೊಟ್ಟಿದ್ದಾರೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಜಿಲ್ಲಾ ಸಂಚಾಲಕ ಹಿಂಡಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾ ಸಂಚಾಲಕ  ಕೆ.ಸಿದ್ದರಾಜು ದೊಡ್ಡಿಂದುವಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು.

ರಾಜ್ಯ ಸಂಚಾಲಕಿ ರುದ್ರಮ್ಮ, ಸೇವಾ ಲಾಲ್ ಸಂಘದ ಶಾಂತರಾಜು, ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಎಸ್.ಮಾದಯ್ಯ, ಪುಟ್ಟಸ್ವಾಮಿ, ರಾಮಲಿಂಗಂ, ಭಾಗ್ಯಮ್ಮ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *