- ಕುಡಿಯುವ ನೀರು ಕೊಡುವಲ್ಲಿ ಸಂಪೂರ್ಣ ವಿಫಲ, ಸಾಮೂಹಿಕವಾಗಿ ಎಲ್ಲ ಅಧಿಕಾರಿಗಳ ವರ್ಗಾವಣೆಗೆ ಆಗ್ರಹ
- ಒಂದು ತಿಂಗಳೊಳಗೆ ಕ್ರಮಕೈಗೊಳ್ಳದಿದ್ದರೆ ಚಾಮರಾಜನಗರ ಬಂದ್ ಮಾಡುವುದಾಗಿ ಶ್ರೀನಿವಾಸಗೌಡ ಎಚ್ಚರಿಕೆ
- ಸ್ಥಳಕ್ಕೆ ಭೇಟಿ ನೀಡಿದ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನಾಕಾರರು.
ಚಾಮರಾಜನಗರ : ಇಲ್ಲಿನ ನಗರಸಭೆಯಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ನಗರಸಭೆಯ ಕೆಲಸ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿದ್ದು ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳ ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಚಾಮರಾಜನಗರ ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಕಾರ್ಯಗಳು ಬೇಗನೆ ಆಗದೆ, ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ ಮತ್ತು ಪಟ್ಟಣದ 31 ವಾರ್ಡ್ ಗಳಲ್ಲೂ ಚರಂಡಿಗಳಲ್ಲಿ ಮತ್ತು ರಸ್ತೆಗಳಲ್ಲಿ ಸ್ವಚ್ಛತೆ ಇಲ್ಲದೆ ಚಾಮರಾಜನಗರ ಪಟ್ಟಣ ಸಂಪೂರ್ಣ ಹದಗೆಟ್ಟಿದೆ ಮತ್ತು ಕುಡಿಯುವ ನೀರಿನ ಸಮಸ್ಯೆಯು ಪ್ರತಿಯೊಂದು ವಾರ್ಡ್‌ಗಳಲ್ಲೂ ತೀವ್ರ ಸ್ವರೂಪ ಪಡೆದಿದ್ದು ಜನರು ತೀರಾ ತೊಂದರೆಗೆ ಸಿಲುಕಿದ್ದಾರೆ ಮತ್ತು ನಗರಸಭೆ ಕಛೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಅರ್ಜಿ ಕೊಟ್ಟು ವರ್ಷಗಳು ಆದರೂ ಸಹ ಕೆಲಸಗಳು ಆಗುತ್ತಿಲ್ಲ. ಸಾರ್ವಜನಿಕರಿಗೆ ಅವರ ಆಸ್ತಿಗಳಿಗೆ ಕಂದಾಯ ಪಾವತಿಸಿದರೂ ಸಹ ಅದನ್ನು ಕಛೇರಿಯ ಕಡತದಲ್ಲಿ ದಾಖಲು ಮಾಡಿಕೊಳ್ಳುತ್ತಿಲ್ಲ ಮತ್ತು ತಾಂತ್ರಿಕ ವಿಭಾಗದಲ್ಲೂ ಸಹ ಸಾರ್ವಜನಿಕರು ಎಷ್ಟೇ ದೂರನ್ನು ಕೊಟ್ಟರೂ ಸಹ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ ಮತ್ತು ಸಾರ್ವಜನಿಕರು ತಮ್ಮ ಆಸ್ತಿಗಳನ್ನು ಖಾತೆ ಬದಲಾವಣೆ ಮಾಡಿಕೊಂಡು ಇ-ಸ್ವತ್ತು ಪಡೆಯಲು ನಗರಸಭೆಯ ಕಛೇರಿಗೆ ಸುತ್ತಿ ಸುತ್ತಿ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ ಮತ್ತು ಕಛೇರಿಯಲ್ಲಿನ ಯಾವುದೇ ಅಧಿಕಾರಿಗಳು ಸಾರ್ವಜನಿಕರಿಗೆ ಕನಿಷ್ಠ ಗೌರವವನ್ನು ಕೊಡದೆ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಈ ನಗರಸಭೆಯ ಕಛೇರಿಯಲ್ಲಿಯೇ ಬಹಳಷ್ಟು ವರ್ಷಗಳಿಂದ ಇರುವ ಅಧಿಕಾರಿಗಳು ಮತ್ತು ನೌಕರರನ್ನು ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಿಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ಕಾರ ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಅನುದಾನವನ್ನು ನೀಡಿದರೂ ಸಹ ಇಲ್ಲಿನ ಅಧಿಕಾರಿಗಳು ಅದನ್ನು ಗಾಳಿಗೆ ತೂರಿ ತಮ್ಮ ಮನ ಬಂದಂತೆ ಕೆಲಸ ಮಾಡುತ್ತಿದ್ದಾರೆ. ನಗರ ಸಭೆಯಲ್ಲಿ ಹೇಳುವವರು ಕೇಳುವವರು ಯಾರು ಇರುವುದಿಲ್ಲ. ಬಹುಶಃ ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿರುವ ನಗರಸಭೆ ಎಂದರೆ ಚಾಮರಾಜನಗರ ನಗರಸಭೆಯು ಆಗಿರುತ್ತದೆ. ಸಾರ್ವಜನಿಕರು ಇಲ್ಲಿ ಕೆಲಸವನ್ನು ಮಾಡಿಸಲಾಗದೆಯೇ ಶಾಪ ಹಾಕುತ್ತಿದ್ದಾರೆ. ಇನ್ನು ಇದರ ಬಗ್ಗೆ ಹೇಳುತ್ತಿದ್ದರೆ ಸಾವಿರಾರು ವಿಷಯಗಳನ್ನು ಹೇಳಬಹುದು.ಈ ಸಮಸ್ಯೆಗಳನ್ನು ಒಂದು ತಿಂಗಳೊಳಗೆ ಪರಿಹರಿಸದ್ದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಮಟ್ಟದ ಹೋರಾಟವನ್ನು ರೂಪಿಸಬೇಕಾಗಬಹುದೆಂದು ಮತ್ತು ಅಂತಿಮವಾಗಿ ಚಾಮರಾಜನಗರದ ಎಲ್ಲಾ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಸಹಕಾರವನ್ನು ಪಡೆದು ಚಾಮರಾಜನಗರ ಬಂದ್ ಕರೆ ಕೊಡಬೇಕಾಗುತ್ತದೆ ಎಂದು ಚಾ.ರಂ.ಶ್ರೀನಿವಾಸಗೌಡ, ಶಾ.ಮುರಳಿ, ಸುರೇಶ್ ವಾಜಪೇಯಿ, ಮಾರ್ಕೆಟ್ ಗಿರೀಶ್ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ
ಸುರೇಶ್ ವಾಜಪೇಯಿ, ನಿಜದ್ವನಿ ಗೋವಿಂದರಾಜು, ಕಂಡಕ್ಟರ್ ಸೋಮನಾಯಕ, ಮಾರ್ಕೇಟ್ ಗಿರೀಶ್, ರಾಜುನಾಯಕ, ಪಣ್ಯದಹುಂಡಿ ರಾಜು, ಮಹೇಶ್ ಗೌಡ, ಸುರೇಶ್ ಗೌಡ, ಆಟೋ ಲಿಂಗರಾಜು, ಡ್ಯಾನ್ಸ್ ಬಸವರಾಜು, ರಾಚಪ್ಪ, ಅಮಚವಾಡಿ ರಾಜು, ಶಿ
ವಣ್ಣ, ಮುತ್ತಿಗೆ ಗೋವಿಂದರಾಜು, ನಾಗೇಶ್ ಇತರರು ಭಾಗವಹಿಸಿದ್ದರು.